Home » ಸಂಪನ್ನ ಭಾರತ ನಿರ್ಮಾಣ ನಮ್ಮ ಗುರಿ
 

ಸಂಪನ್ನ ಭಾರತ ನಿರ್ಮಾಣ ನಮ್ಮ ಗುರಿ

by Kundapur Xpress
Spread the love

ಮಾಲೆಗಾಂವ್ : ಮೊಗಲ್ ದೊರೆ ಔರಂಗಜೇಬ್‌ನ ಆತ್ಮ ಕಾಂಗ್ರೆಸ್‌ನ್ನು ಆವರಿಸಿಕೊಂಡಿದೆ. ಹಾಗಾಗೇ ಕಾಂಗ್ರೆಸ್ಸಿಗರು ಪಿತ್ರಾರ್ಜಿತ ಆಸ್ತಿ ತೆರಿಗೆ ಜಾರಿ ಪ್ರಸ್ತಾವ ಮುಂದಿಟ್ಟಿದ್ದಾರೆ. ಕಾಂಗ್ರೆಸ್ಸಿಗರಂತೆ ಹಿಂದೆ ಔರಂಗಜೇಬ್ ಕೂಡ ಮುಸಲ್ಮಾನೇತರ ಪ್ರಜೆಗಳಿಗೆ ಜಿಝಾ ತೆರಿಗೆ ಹೇರುತ್ತಿದ್ದ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿಪಕ್ಷವನ್ನು ತೀವ್ರವಾಗಿ ತರಾಟೆಗೆತ್ತಿಕೊಂಡಿದ್ದಾರೆ.

ನಾವು ಕೇವಲ ಅಧಿಕಾರಕ್ಕಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ಅಧಿಕಾರಕ್ಕಿಂತಲೂ ಸಂಪನ್ನಭಾರತ ನಿರ್ಮಾಣ ನಮ್ಮ ಪ್ರಧಾನ ಗುರಿ. ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಮಾಲೆಗಾಂವ್ ನಗರದಲ್ಲಿ, ಧುಲೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಕೇಂದ್ರದ ಮಾಜಿ ಸಚಿವ ಸುರೇಶ್ ಭದ್ರೆ ಪರ ಪ್ರಚಾರ ರ್ಯಾಲಿಯಲ್ಲಿ ಅವರು ಮಾತನಾಡಿದರು.

   

Related Articles

error: Content is protected !!