Home » ಮೋದಿ ಮಾರ್ಗದರ್ಶನದಿಂದ ಮಹಾಕುಂಭಮೇಳ ಯಶಸ್ವಿ
 

ಮೋದಿ ಮಾರ್ಗದರ್ಶನದಿಂದ ಮಹಾಕುಂಭಮೇಳ ಯಶಸ್ವಿ

ಪ್ರಧಾನಿ ಮೋದಿಗೆ ಯೋಗಿ ಕೃತಜ್ಞತೆ

by Kundapur Xpress
Spread the love

ಪ್ರಯಾಗರಾಜ್ : ಕೊಂಚ ರಾಜಕೀಯ ಇಚ್ಛಾ ಶಕ್ತಿ, ಸೂಕ್ತವಾದ ಬೆಂಬಲ ಸಿಕ್ಕಲ್ಲಿ ಯಾವುದೇ ಸಾಧನೆ ಸಾಧ್ಯ ಅಥವಾ ಉತ್ತಮ ಫಲಿತಾಂಶಗಳ ದಾಖಲಿಸಲು ಸಾಧ್ಯವೆಂದಿರುವ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಮಹಾಕುಂಭಮೇಳ ಆಯೋಜನೆ ಬಗ್ಗೆ ಸೂಕ್ತ ಮಾರ್ಗದರ್ಶನವಿತ್ತ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಪ್ರಧಾನಿ ಮೋದಿಯವರ ಸಲಹೆ-ಮಾರ್ಗಸೂಚಿ ಜತೆ ಸಾಮೂಹಿಕ ಪ್ರಯತ್ನಗಳಿಂದ ಮಹಾಕುಂಭಮೇಳ ಯಶಸ್ವೀಯಾಗಿ ಸಂಪನ್ನಗೊಂಡಿತೆಂದು ಅವರು ಹರ್ಷ ವ್ಯಕ್ತ ಪಡಿಸಿದ್ದಾರೆ. ಗೌರವಾನ್ವಿತ ಪ್ರಧಾನಿಯವರೇ ಏಕತೆ, ಸಮಾನತೆ ಮತ್ತು ಸೌಹಾರ್ದತೆಗಳ ಮಹಾಕುಂಭಮೇಳ 2025 ತಮ್ಮ ಯಶಸ್ವೀ ಮಾರ್ಗದರ್ಶನ ದಿಂದಾಗಿ ಅತ್ಯಂತ ಯಶಸ್ವಿಯಾಗಿ ಮಹಾಶಿವ ರಾತ್ರಿಯಂದು ಸಮಾಪನಗೊಂಡಿದೆ. ದೈವೀಕತೆ, ವೈಭವದ ಜತೆ ಜತೆ ಭದ್ರತೆ, ಸ್ವಚ್ಛತೆ, ಉತ್ತಮ ಆಡಳಿತಕ್ಕೆ ಸಂಬಂಧಿಸಿ ಯಶಸ್ವೀ ಕುಂಭಮೇಳ ಹೊಸ ಹಾದಿ ತೆರೆದಿದೆ. 45 ದಿನಗಳಲ್ಲಿ ಪವಿತ್ರ ತ್ರಿವೇಣಿ ಸಂಗಮದಲ್ಲಿ ಸಾಧುಗಳು, ಸಂತರು ಸೇರಿದಂತೆ ಬರೋಬ್ಬರಿ 66ಕೋಟಿ ಮೀರಿ ಭಕ್ತರು ಅಮೃತಸ್ಥಾನಗೈದು ಕೃತಾರ್ಥರಾಗಿದ್ದಾರೆ ಎಂದು ಸಿಎಂ ಯೋಗಿ ಎಕ್ಸ್‌ಗೆ ಹಾಕಿರುವ ಪೋಸ್ಟ್‌ನಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ.

ಮಾನವೀಯತೆಯ ಉತ್ಸವವಾಗಿರುವ ಮಹಾಕುಂಭ ಮೇಳವು ವಸುಧೈವ ಕುಟುಂಬಕಮ್ ಎಂಬ ಅದ್ಭುತ ಭಾವನೆಯೊಂದಿಗೆ, ಏಕತೆಯ ದಾರದಿಂದ ಇಡೀ ಜಗತ್ತನ್ನು ಜೋಡಿಸುತ್ತಿದೆ ಎಂದು ಸಿಎಂ ಯೋಗಿ ಮೆಚ್ಚುಗೆಯ ನುಡಿಗಳಾಡಿದ್ದಾರೆ. ನಿಮ್ಮ ನಿರಂತರ ಬೆಂಬಲ, ಮಾರ್ಗದರ್ಶನ ಹಾಗೂ ಸದಾಶಯಗಳು ನಮಗೆಲ್ಲರಿಗೂ ಹೊಸ ಶಕ್ತಿ ನೀಡಿತು ಎಂದು ಸಿಎಂ ಯೋಗಿ ಪ್ರಧಾನಿ ಮೋದಿ ಅವರಿಗೆ ಹಾರ್ದಿಕ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.

 

Related Articles

error: Content is protected !!