Home » ಮನೆ ಮಾತು….
 

ಮನೆ ಮಾತು….

by Kundapur Xpress
Spread the love

ಭಾವನೆಗಳು ಅದೆಷ್ಟು ಜೋರಾಗಿ ನಮ್ಮನ್ನು ಆಳುತ್ತವೆ ಎಂದರೆ ಜೀವನದ ಪ್ರತಿಯೊಂದು ಹೆಜ್ಜೆಯಲ್ಲಿ ನಮ್ಮ ಭಾವನೆಗಳಿಂದಲೇ ನಮಗೆ ಆರೋಗ್ಯ ಉಂಟಾಗುವುದು . ಭಾವನೆಗಳು ಮತ್ತು ಮಾನಸಿಕ ಆರೋಗ್ಯ ಇವುಗಳು ನಮಗೆ ಒಂದಕ್ಕೊಂದು ಸಂಬಂಧವಿರುವ ವಿಷಯಗಳೇ . ಭಾವನೆಗಳು ಬಿರುಗಾಳಿಯಂತೆ ನಮ್ಮ ಮನಸ್ಸಿನಲ್ಲಿ ಓಡಾಡಿದಾಗ ನಮ್ಮ ಮಾನಸಿಕ ಆರೋಗ್ಯ ಕೆಡುತ್ತದೆ . ಮನಸ್ಸು ಅತ್ಯಂತ ಪ್ರಶಾಂತವಾಗಿ ಇರಬೇಕಾದರೆ ನಮ್ಮ ಮನಸ್ಸಿನ ಭಾವನೆಗಳು ಕೂಡ ಶುದ್ಧವಾಗಿರಬೇಕು . ರಮಣ ಮಹರ್ಷಿಗಳು ಹೇಳುವಂತೆ ಮನಸ್ಸು ಅತ್ಯಂತ ಶಾಂತವಾಗಿದೆ ಎಂದರೆ ನಮ್ಮ ಮನಸ್ಸಿನಲ್ಲಿ ದೇವರು ವಾಸವಾಗಿದ್ದಾನೆ ಎಂದು ಅರ್ಥ . ನಮ್ಮ ಮನಸ್ಸಿನ ಭಾವನೆಗಳು ಅತ್ಯಂತ ಶ್ರೇಷ್ಠವಾಗಿದೆ ಎಂದು ಅರ್ಥ . ಭಾವನೆಗಳಿಲ್ಲದ ಮನುಷ್ಯ ಶೂನ್ಯ . ಮನುಷ್ಯನ ಮನಸ್ಸು ಮರ್ಕಟವಿದ್ದಂತೆ
ಒಂದು ನಿಮಿಷ ಸುಮ್ಮನಿದ್ದರೆ ಸಾಕು ಅದರಲ್ಲಿ ಅನೇಕ ಭಾವನೆಗಳು ತುಂಬಿಬಿಡುತ್ತವೆ . ಯೌವ್ವನದಲ್ಲಿ ಮನುಷ್ಯನಿಗೆ ಪ್ರೀತಿಯ ಭಾವನೆಗಳು ಮೂಡುವುದು ಸಹಜ . ಯಾರನ್ನಾದರೂ ನಾವು ದ್ವೇಷಿಸಿದರೆ ಅವರ ಮೇಲೆ ದ್ವೇಷದ ಭಾವನೆಗಳು ಮೂಡುವುದು ಸಹಜ . ಭಾವನೆಗಳು ಮತ್ತು ಉದ್ವೇಗಗಳನ್ನು ನಾವು ಸಮಾನವಾಗಿ ತಡೆಯಬೇಕಾದರೆ ಒಂದೇ ಸಮನಾದ ಮಾನಸಿಕ ಆರೋಗ್ಯ ಇದರ ಅವಶ್ಯಕತೆ ಇರುತ್ತದೆ . ಯೋಗ ಮತ್ತು ಜಾನದಿಂದ ಮನುಷ್ಯನ ಭಾವನೆಗಳನ್ನು ಶಾಂತ ರೂಪವಾಗಿ ಇಟ್ಟುಕೊಂಡು ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬಹುದು . ಭಾವನೆ ಎಂಬುದು ಮನುಷ್ಯನ ಜೀವನದಲ್ಲಿ ಬಿರುಗಾಳಿಯಬ್ಬಿಸುವ ಅಸ್ತ್ರವೆಂದರೆ  ತಪ್ಪಾಗಲಾರದು

ಪ್ರದೀಪ್‌,ಚಿನ್ಮಯಿ ಆಸ್ಪತ್ರೆ ಕುಂದಾಪುರ.

   

Related Articles

error: Content is protected !!