ನಿರೂಪಣೆ ಇದು ಅತ್ಯಂತ ಕ್ಲಿಷ್ಟವಾದ ಕಾರ್ಯ .ಕನ್ನಡದ ಎಲ್ಲ ಪದಪುಂಜಗಳು ಮತ್ತು ವಿಶಾಲತೆಯಿಂದ ಕೂಡಿರುವ ಜ್ಞಾನ ನಿರೂಪಣೆ ಮಾಡುವವರ ಬತ್ತಳಿಕೆಯಲ್ಲಿದ್ದರೆ ಮಾತ್ರ ಆತ ಒಳ್ಳೆಯ ನಿರೂಪಕರಾಗಲು ಸಾಧ್ಯ .ಒಬ್ಬ ಉತ್ತಮ ಸಾಹಿತಿ ಒಳ್ಳೆಯ ನಿರೂಪಕನಾಗಬೇಕೆಂದೇನಿಲ್ಲ .ನಿರೂಪಣೆ ಮಾಡುವವನ ಮಾತಿನ ಶೈಲಿ ,ಆತನ ಭಾವಗಳು ಜ್ಞಾನ ಮತ್ತು ಸಭೆಯಲ್ಲಿ ಆತ ಜನರಲ್ಲಿ ಮಾತಾಡುವ ಶೈಲಿ ನಿರೂಪಕನ ಜನಪ್ರಿಯತೆಯನ್ನು ಇನ್ನೂ ಎತ್ತರಕ್ಕೆ ಏರಿಸುತ್ತವೆ .ನಿರರ್ಗಳವಾಗಿ ಇಬ್ಬರು ಮಾತನಾಡಬಹುದಂತೆ ಒಬ್ಬರು ಅತ್ಯಂತ ಜ್ಞಾನಿಗಳು .ಇನ್ನೊಬ್ಬರು ಏನು ಗೊತ್ತಿಲ್ಲದ ಅಜ್ಞಾನಿಗಳು .ಯಾವುದೇ ಸಭೆ ಸಮಾರಂಭಗಳಿಗೆ ಮೆರುಗು ಬರುವುದು ನಿರೂಪಕನ ನಿರೂಪಣೆಯ ಶೈಲಿಯಿಂದ .ಒಬ್ಬ ಉತ್ತಮ ನಿರೂಪಕ ಆತನ ಮಾತಿನ ರೀತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತದೆ .ನಿರೂಪಣೆ ಎಂದಕೂಡಲೇ ನಮಗೆ ನೆನೆಪಾಗುವುದು ಸ್ಪಷ್ಟ ವಾಕ್ಯಗಳ ಮಾತಿನ ಚೆಲುವೆ ಅಪರ್ಣ .ತನ್ನ ಮಾತಿನ ಶೈಲಿಯಿಂದಲೇ ಸಾವಿರಾರು ಜನ ತುಂಬಿದ ಸಭೆಯ ಮನ ಗೆಲ್ಲುವ ಅದ್ಭುತ ಮಾತಿನ ನಿರೂಪಕಿ .ಅವರು ಇಂದು ನಮ್ಮ ಜೊತೆಗಿಲ್ಲ ಎಂಬ ಕೊರಗು ನಮ್ಮಲ್ಲಿದ್ದರೂ ಕೂಡ ಅವರ ಮಾತು ನಮ್ಮ ಬೆಂಗಳೂರು ನಮ್ಮ ಮೆಟ್ರೋದಲ್ಲಿ ಯಾವಾಗಲೂ ಕೇಳಿಸುತ್ತಿರುತ್ತದೆ . ಥಟ್ ಅಂತ ಹೇಳಿ ಎಂಬ ಕಾರ್ಯಕ್ರಮದ ಮೂಲಕ ನಮ್ಮಲ್ಲಿ ಜನಪ್ರಿಯರಾದ ಸಾಹಿತಿ ಮತ್ತು ನಿರೂಪಕ ಡಾ ನ್ ಸೋಮೇಶ್ವರ್ ಅವರ ಜ್ಞಾನ ಮತ್ತು ನಿರೂಪಣೆ ಎಲ್ಲರಿಗೂ ಅಚ್ಚು ಮೆಚ್ಚು .ತನ್ನ ಬರವಣಿಗೆಯಿಂದಲೇ ಎಲ್ಲರ ಮನದಲ್ಲಿ ಸ್ಥಾನ ಗಳಿಸಿದ ರವಿಬೆಳೆಗರೆ ಅವರದೂ ಕೂಡ ಅದ್ಭುತ ನಿರೂಪಣೆ . ನಿರೂಪಣೆಯೆಂದರೆ ಅವರವರ ಶೈಲಿ ಆದರೆ ಪ್ರೇಕ್ಷಕರಿಗೆ ಯಾರ ಶೈಲಿ ಮತ್ತು ಮಾತುಗಾರಿಕೆ ಇಷ್ಟವಾಗುತ್ತದೋ ಅವನೇ ಎಲ್ಲರಿಗೂ ಹತ್ತಿರವಾಗುತ್ತಾನೆ .ನಿರೂಪಣೆಯ ಕುರಿತಾದ ಈ ಲೇಖನ ನಾನು ಇಷ್ಟಪಟ್ಟ ನಿರೂಪಕಿ ಅಪರ್ಣ ಅವರಿಗೆ ಅರ್ಪಣೆ .ಅಪರ್ಣ ಅವರು ನಮ್ಮೊಂದಿಗಿಲ್ಲ ಆದರೂ ಅವರ ಮಾತಿನ ಮತ್ತು ನಿರೂಪಣೆಯ ಶೈಲಿ ಇನ್ನೂ ಜನರಲ್ಲಿ ಜೀವಂತವಾಗಿದೆ .
ಪ್ರದೀಪ್ ಕುಮಾರ್ ಕೋಮುಂಜೆ

