ಜೀವನದಲ್ಲಿ ಸೋತು ಹತಾಶರಾದಾಗ ಸ್ಥೈರ್ಯ ಕೊಡುವಂತಹಸಂಸ್ಕಾರ ಮತ್ತು ಸಂಸ್ಕೃತಿ ನಮಗೆ ಯುವ ಜನಾಂಗಕ್ಕೆ ಬೇಕಾಗಿದೆ. ನಮ್ಮ ಯುವಶಕ್ತಿ ಅತ್ಯಂತ ಕ್ಷುಲ್ಲಕ ಕಾರಣಗಳಿಗಾಗಿ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ದಿನಂಪ್ರತಿ ನಾವು ವಾರ್ತಾ ಪತ್ರಿಕೆಗಳಲ್ಲಿ ಮತ್ತು ನ್ಯೂಸ್ ಗಳಲ್ಲಿ ನೋಡುತ್ತೇವೆ. ಯುವ ಜನಾಂಗಕ್ಕೆ ಸಂಸ್ಕಾರ ಮತ್ತು ಸಂಸ್ಕೃತಿ ಎಂಬ ಪಾಠ ಮನೆಯಿಂದಲೇ ಶುರುವಾಗಬೇಕು. ನಾವು ಬೆಳಗ್ಗೆ ಎದ್ದ ತಕ್ಷಣ ದೇವರಿಗೆ ಕೈ ಮುಗಿಯುತ್ತೇವೆ ಕಾರಣ ಯಾಕೆಂದರೆ ನಮ್ಮನ್ನು ಇನ್ನು ಜೀವಂತವಾಗಿ ಇಟ್ಟಿರೋದು ಮತ್ತು ನಮ್ಮ ಮುಂದಿನ ಗುರಿಯನ್ನು ತಲುಪಲು ಸಹಾಯ ಮಾಡು ಎಂದು ಬೇಡಿಕೊಳ್ಳುತ್ತೇವೆ. ಅರ್ಜುನನು ಕುರುಕ್ಷೇತ್ರದಲ್ಲಿ ಹತಾಶನಾಗಿ ಬಿಲ್ಲು ಬಾಣಗಳನ್ನು ಕೆಳಗಿಟ್ಟು ನಾನು ಯುದ್ಧ ಮಾಡುವುದಿಲ್ಲ ಎಂದಾಗ ಶ್ರೀಕೃಷ್ಣನು ಭಗವದ್ಗೀತೆಯನ್ನು ಬೋಧನೆ ಮಾಡಿ ಅರ್ಜುನನ್ನು ತನ್ನ ಕ್ಷತ್ರಿಯ ಕೆಲಸವನ್ನು ಮಾಡಲು ಶ್ರೀಕೃಷ್ಣನು ಪ್ರೇರೇಪಿಸಿದನು. ಹಾಗೆಯೇ ಜೀವನದಲ್ಲಿ ಅನೇಕ ಕಷ್ಟಕಾರ್ಪಣ್ಯಗಳು ಬಂದಾಗ ಮನೆಯಲ್ಲಿ ಹೇಳಿಕೊಟ್ಟಂತಹ ಸಂಸ್ಕಾರ ಮತ್ತು ಸಂಸ್ಕೃತಿಗಳು ಹತಾಶರಾದ ಮಕ್ಕಳಿಗೆ ಸ್ಪೂರ್ತಿಯಾಗಿ ಮುಂದಿನ ಜೀವನಕ್ಕೆ ಪ್ರೇರೇಪಣೆಯನ್ನು ನೀಡುತ್ತವೆ. ಬೆಳಗ್ಗಿನ ಭಗವಂತನ ಧ್ಯಾನ ಮತ್ತು ಭಗವದ್ಗೀತೆ ಅಂತಹ ಪುಸ್ತಕಗಳನ್ನು ಪಠಣ ಮಾಡುವುದರಿಂದ ಸೋಲಿನಲ್ಲೂ ಕೂಡ ಯುವ ಜನಾಂಗಕ್ಕೆ ಸ್ಪೂರ್ತಿಯನ್ನು ಕೊಡುವಂತಹ ಶಕ್ತಿ ಬರಬಲ್ಲದು.
ಪ್ರದೀಪ
ಚಿನ್ಮಯಿ ಆಸ್ಪತ್ರೆ ಕುಂದಾಪುರ.