225
ಕಾರ್ಕಳ : ಮುಗಿಲು ಮುಟ್ಟಿದ ಯೋಗಿ ಯೋಗಿ ಯೋಗಿ ಜೈಕಾರ ದಾರಿಯುದ್ಧಕ್ಕೂ ಪುಷ್ಪಗಳ ಮಳೆ ಸುರಿಸಿ ಸ್ವಾಗತ ಇದು ಕಾರ್ಕಳದಲ್ಲಿ ಬಿಜೆಪಿ ಅಭ್ಯರ್ಥಿ ವಿ.ಸುನಿಲ್ ಕುಮಾರ್ ಪರ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶನಿವಾರ ನಗರದಲ್ಲಿ ನಡೆಸಿದ ರೋಡ್ ಶೋ ವೇಳೆ ಕಂಡು ಬಂದ ದೃಶ್ಯ

ಯೋಗಿ ರೋಡ್ ಶೋ ನೋಡಲು ಜನಸಾಗರವೇ ಹರಿದು ಬಂದಿದ್ದು ಗೊಮ್ಮಟನಗರಿ ಕಾರ್ಕಳ ಮತ್ತೊಮ್ಮೆ ಕೇಸರಿ ಬಣ್ಣದಲ್ಲಿ ಮುಳುಗಿ ಮಿಂದೆದ್ದಿತು ಸಾಗರೋಪಾದಿಯಲ್ಲಿ ಹರಿದು ಬಂದ ಜನರನ್ನ ಉದ್ದೇಶಿಸಿ ಮಾತನಾಡಿದ ಯೋಗಿ ಆದಿತ್ಯನಾಥ್ ಮತ್ತೊಮ್ಮೆ ಡಬ್ಬಲ್ ಇಂಜಿನ್ ಸರ್ಕಾರವನ್ನು ಅಧಿಕಾರಕ್ಕೆ ತನ್ನಿ ಎಂದು ಕರೆ ನೀಡಿದರು ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಅವರಿಗೆ ಕೊಲ್ಲೂರು ಮೂಕಾಂಬಿಕೆ ಮತ್ತು ಉಡುಪಿ ಕೃಷ್ಣನ ಪ್ರಸಾದವನ್ನು ವಾಸುದೇವ್ ಭಟ್ ನೀಡಿ ನೀಡಿದರು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರೋಡ್ ಶೋ ನಲ್ಲಿ ಭಾಗವಹಿಸಿದ್ದರು

