Home » ಜಟಂಗಿ ರಾಮೇಶ್ವರ
 

ಜಟಂಗಿ ರಾಮೇಶ್ವರ

ಇದು ಶ್ರೀರಾಮನು ಜಟಾಯುವಿಗೆ ಮೋಕ್ಷ ಕೊಡಿಸಿದ ಸ್ಥಳ

by Kundapur Xpress
Spread the love

ಜಟಂಗಿ ರಾಮೇಶ್ವರ ಈ ಸ್ಥಳವು ಜಟಾಯು ಪ್ರಾಣ ತ್ಯಾಗ ಮಾಡಿದ ಸ್ಥಳವಾಗಿದೆ. ಸೀತಾ ಅಪಹರಣದ ಸಮಯದಲ್ಲಿ ಸೀತಾಮಾತೆಯು ಸಹಾಯಕ್ಕಾಗಿ ಕರೆಯುತ್ತಿದ್ದಾಗ ಜಟಾಯು ಪಕ್ಷಿಯು ರಾವಣನೊಡನೆ ಹೋರಾಡಿ ಪ್ರಾಣತ್ಯಾಗ ಮಾಡಿದಂತಹ ಸ್ಥಳ . ಈ ಸ್ಥಳದಲ್ಲಿಯೇ ಶ್ರೀರಾಮನು ಜಟಾಯುವಿಗೆ ಮೋಕ್ಷವನ್ನು ಕರುಣಿಸಿದನು . ಜಟಾಯು ಪಕ್ಷಿಯ ಕೋರಿಕೆಯ ಮೇರೆಗೆ ಶ್ರೀ ರಾಮನು 101 ಲಿಂಗಗಳನ್ನು ಪ್ರತಿಷ್ಠಾಪನೆ ಮಾಡಿದಂತಹ ಪುಣ್ಯ ಸ್ಥಳವಿದು. ಸಾಮ್ರಾಟ ಅಶೋಕನ ಶಿಲಾ ಶಾಸನ ಇರುವ ಅತ್ಯಂತ ಪುರಾತನ ಮತ್ತು ಐತಿಹಾಸಿಕ ಕ್ಷೇತ್ರವು ಇದಾಗಿದೆ . ಈ ಪವಿತ್ರ ಕ್ಷೇತ್ರದ ಹೆಸರೇ ಜಟಂಗಿ ರಾಮೇಶ್ವರ ಎಂದು . ಚಿತ್ರದುರ್ಗದಲ್ಲಿ ಜಿಲ್ಲೆಯ ದೇವಸಮುದ್ರ ಬೆಟ್ಟದ ಮೇಲಿದೆ ಜಟಂಗಿ ರಾಮೇಶ್ವರ ಕ್ಷೇತ್ರ. ಗಂಡುಗಲಿ ಕುಮಾರರಾಮರ ಜನನ ವಾಗಿದ್ದು ಕೂಡ ಈ ಶ್ರೀ ದೇವರ ಅನುಗ್ರಹದಿಂದಲೇ. ಇಲ್ಲಿಯ ಬೆಟ್ಟಗಳನ್ನು ಚಿಕ್ಕ ಜಟಂಗಿ ಮತ್ತು ದೊಡ್ಡ ಜಟಂಗಿ ಎಂದು ಕರೆಯಲಾಗುತ್ತದೆ. ಚಿಕ್ಕ ಜಟಂಗಿ ಬೆಟ್ಟದ ಮೇಲೆ ನೆಲೆ ನಿಂತಿರುವ ರಾಮೇಶ್ವರ ದೇವಸ್ಥಾನದ ಹೆಸರಿನಿಂದಲೇ ಈ ಕ್ಷೇತ್ರವನ್ನು ಜಟಂಗಿ ರಾಮೇಶ್ವರ ಎಂದು ಕರೆಯಲಾಗುತ್ತದೆ. ಜಟಂಗಿ ರಾಮೇಶ್ವರ ಸಮುದ್ರಮಟ್ಟದಿಂದ 3 ಮೂರು ಸಾವಿರ ಅಡಿ ಎತ್ತರದಲ್ಲಿದೆ. ಸುಮಾರು 800 ಮೆಟ್ಟಿಲುಗಳನ್ನು ಏರಿ ಜಟಂಗಿ ರಾಮೇಶ್ವರ ದೇವರ ದರ್ಶನವನ್ನು ಪಡೆಯಬಹುದು.
ಶ್ರೀರಾಮರು ಪ್ರತಿಷ್ಠಾಪಿನೆ ಮಾಡಿದ 101 ಶಿವಲಿಂಗಗಳು ಕೂಡ ಜಟಂಗಿ ರಾಮೇಶ್ವರ ದೇವಸ್ಥಾನದ ಜೊತೆಯಲ್ಲಿ ಇದೆ . ಪ್ರಭು ಶ್ರೀರಾಮಚಂದ್ರ ಮತ್ತು ಲಕ್ಷ್ಮಣ ಇವರ ಪಾದ ಧೂಳಿಯಿಂದ ಪುನೀತವಾದಂತಹ ಕ್ಷೇತ್ರ ಜಟಂಗಿ ರಾಮೇಶ್ವರ ಕ್ಷೇತ್ರ. ಜಟಾಯುವಿನ ನೆನಪಿಗೆ ಶ್ರೀರಾಮರು ಜಟಾಯು ರಾಮೇಶ್ವರ ಎಂಬ ಶಿವಲಿಂಗ ಪ್ರತಿಷ್ಠಾಪನೆ ಮಾಡಿದರು . ಕಾಲಕ್ರಮೇಣ ಈ ಶಿವಲಿಂಗದ ಹೆಸರೇ ಜಟಂಗಿ ರಾಮೇಶ್ವರ ಎಂಬ ಹೆಸರಿನಿಂದ ಪ್ರಸಿದ್ಧವಾಯಿತು. ದೊಡ್ಡ ಜಟಂಗಿ ಬೆಟ್ಟದಲ್ಲಿದೆ ಜಟಾಯುವಿನ ಸಮಾಧಿ . ದೇವಸ್ಥಾನದ ಎಡ ಭಾಗದಲ್ಲಿ ಸೀತಾ ಕೊಳ, ತಾವರೆ ಕೊಳ, ಏಕಾಂತ ತೀರ್ಥವೆಂಬ ನೀರಿನ ಕೊಳಗಳಿವೆ. ಕೊಳದ ಬಳಿ 6 ಹೆಜ್ಜೆಯ ಗುರುತುಗಳಿವೆ ಈ ಹೆಜ್ಜೆ ಗುರುತುಗಳನ್ನು ಜಟಾಯುವಿನ ಹೆಜ್ಜೆಯ ಗುರುತುಗಳೆಂದು ಸ್ಥಳೀಯರು ಹೇಳುತ್ತಾರೆ.

ಸೀತಾ ಕೊಳದ ನೀರನ್ನು ಭಕ್ತಿಯಿಂದ ಸೇವಿಸಿದರೆ ಮಕ್ಕಳ ಭಾಗ್ಯ ಸಿಗುತ್ತದೆ ಎಂಬ ನಂಬಿಕೆ ಇದೆ. ಜಟಂಗಿ ರಾಮೇಶ್ವರ ದೇವಾಲಯದ ಜಾತ್ರೆ ಯುಗಾದಿ ಸಮಯದಲ್ಲಿ ನಡೆಯುತ್ತದೆ . ಜಟಂಗಿ ರಾಮೇಶ್ವರ ದೇವರನ್ನು ಕಾಣಲು ಅನೇಕ ಭಕ್ತರು ಇಲ್ಲಿಗೆ ತಂಡೋಪ ತಂಡವಾಗಿ ಆಗಮಿಸುತ್ತಾರೆ . ರಾಮಾಯಣಕ್ಕೆ ಸಾಕ್ಷಿಯಾಗಿ ನಿಂತಿದೆ ಜಟಂಗಿ ರಾಮೇಶ್ವರ ಕ್ಷೇತ್ರ. ಪ್ರಕೃತಿಯ ರಮಣೀಯ ತಾಣದಲ್ಲಿದೆ ಈ ಕ್ಷೇತ್ರ . ಈ ಬೆಟ್ಟದ ತುದಿಯಲ್ಲಿ ನಿಂತರೆ ಪ್ರಕೃತಿಯ ಸುಂದರ ನಿಸರ್ಗ ಮತ್ತು ದೇವರ ಭಕ್ತಿಯನ್ನು ಅನುಭವಿಸಬಹುದು. ಜಟಂಗಿ ರಾಮೇಶ್ವರ  ದೇವರ ಶಕ್ತಿ ಅಪಾರ

ಪ್ರದೀಪ್‌ ಚಿನ್ಮಯಿ ಆಸ್ಪತ್ರೆ,ಕುಂದಾಪುರ

   

Related Articles

error: Content is protected !!