ಅಪ್ಪ ಅಂದ್ರೆ ಗಂಭೀರ . ಯಾರತ್ರನು ಮಾತಾಡಲ್ಲ. ಯಾವಾಗ್ಲೂ ರೆಗ್ತಾ ಇರ್ತಾನೆ .
ಈ ಮಾತು ಅಪ್ಪಂದಿರ ಪಾಲಿಗೆ ಸಾಮಾನ್ಯ . ಬೆಟ್ಟದಷ್ಟು ಪ್ರೀತಿ ಹೃದಯದಲ್ಲಿ ಇಟ್ಟುಕೊಂಡು ತನ್ನ ಮಗ ಮಗಳು ಯಾವಾಗ್ಲೂ ಚೆನ್ನಾಗಿರಬೇಕು ಅಂತ ದೇವರಲ್ಲಿ ಬೇಡಿಕೊಂಡು ಹೊರಗೆ ಹೋಗಿ ದುಡಿದುಕೊಂಡು ಬಂದು ಎಷ್ಟೇ ಆಯಾಸವಾಗಿದ್ದರು ಕೂಡ ಒಂದು ಸಲ ತನ್ನ ಮಗಳ ಮುಖವನ್ನು ನೋಡಿದರೆ ಆಯಾಸವನ್ನೇ ಮರೆತುಬಿಡುತ್ತಾನೆ . ಅಪ್ಪ ಅಂದ್ರೆ ಆಕಾಶ . ಆಕಾಶ ಅಂದ್ರೆ ಅಪ್ಪ . ತನ್ನೊಳಗೆ ಎಂತಹ ದುಃಖವನ್ನು ಇದ್ದರೂ ಕೂಡ ಇನ್ನೊಬ್ಬರಿಗೆ ತೋರಿಸಿಕೊಂಡಿರುವುದಿಲ್ಲ .
ಯಾವುದೋ ಲೇಖನದಲ್ಲಿ ಓದಿದ್ದ ನೆನಪು ಸಾಲುಗಳನ್ನು ಓದಿದಾಗ ಕಣ್ಣು ತುಂಬಿ ಬಂತು. ಅಪ್ಪ ಹತ್ತಿರ ಬಂದಾಗ ಮಗಳ ದೂರ ಹೋಗುತ್ತಾಳೆ .ಮಗಳು ಹತ್ತಿರ ಬಂದಾಗ ಅಪ್ಪ ಬರೆದ ಆ ಪತ್ರ ಮಗಳ ಕೈಯಲ್ಲಿ ಇರುತ್ತದೆ . ನೀನು ನನ್ನ ಹತ್ತಿರ ಬಂದಾಗ ನಾನಿದ್ದರೂ ಇಲ್ಲದಿದ್ದರೂ “ಅಪ್ಪ ಅಂದ್ರೆ ಆಕಾಶಾನೇ ಒಂದು ಸಲ ಆಕಾಶದತ್ತ ನೋಡು ನಕ್ಷತ್ರವಾಗಿ ನಾನು ನಿನ್ನನ್ನೇ ನೋಡುತ್ತಿದ್ದೇನೆ.
ನಾನು ಮನೆಯಲ್ಲಿದ್ದಾಗ ನಿನ್ನನ್ನು ನೋಡಿದಾಗ ನನ್ನ ನೋವುಗಳೆಲ್ಲ ಮಾಯವಾಗುತ್ತಿತ್ತು.ಈಗ ನೋವುಗಳಿಲ್ಲದ ಸುಂದರ ಲೋಕ ಆಕಾಶದಲ್ಲಿ ಬೆಳಗಿ ನಿನ್ನನ್ನು ಹರಸುತ್ತಿದ್ದೇನೆ . ಸುಖವಾಗಿ ಬಾಳು ಮಗಳೇ ನಕ್ಷತ್ರದಂತೆ ನೀನು ಭುವಿಯಲ್ಲಿ ಬೆಳಗು . ನಕ್ಷತ್ರವಾಗಿ ನಾನು ಆಗಸದಲ್ಲಿ ಬೆಳಗುತ್ತಿದ್ದೇನೆ . ನಕ್ಷತ್ರವಾಗಿ ಸದಾ ಆಗಸದಲ್ಲಿ ಬೆಳಗುವಾಸೆ ಕತ್ತಲೆಗೆ ಆಸರೆಯಾಗಿ ಸ್ವಲ್ಪವಾದರೂ ಬೆಳಕನ್ನು ಜಗತ್ತಿಗೆ ಕೊಡುತ್ತಿದ್ದೇನೆ ಎಂಬ ತೃಪ್ತಿ .ಬೆಳಕನ್ನು ಕೊಡುವುದು ಬೆಳಕನ್ನು ಮೂಡಿಸುವುದು ಸದಾ ದೇವರ ಕೆಲಸ ಮಾಡುತ್ತಿದ್ದೇನೆಂಬ ತೃಪ್ತಿ . ಮತ್ತೆ ಪುಟ್ಟದಾಗಿ ಒಳಗುತ್ತಾ ನಿನ್ನಡೆಗೆ ನೋಡುವ ನಿನ್ನ ಅಪ್ಪ”……

ಪ್ರದೀಪ್ ಕುಮಾರ್,ಕೋಮುಂಜೆ

