ಅಂಜನಾ ನಂದನಂ ವೀರಂ ಜಾನಕಿ ಶೋಕನಾಶನಂ ಕಪೀಶ ಮಕ್ಷ ಅಂತಾರಂ
ಒಂದೇ ಲಂಕ ಭಯಂಕರಂ
ಆಂಜನೇಯ , ಹನುಮಂತ, ಇನ್ನೂ ಅನೇಕ ಹೆಸರುಗಳಿಂದ ಕರೆಯಲ್ಪಡುವಂತಹ ಆಂಜನೇಯ ಸ್ವಾಮಿ ಶ್ರೀರಾಮ ಎಂಬ ಮಹಾದೇವನನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿರುವಂತಹ ಶ್ರೀ ರಾಮನ ಪ್ರೀತಿಯ ಭಕ್ತ. ಹನುಮಂತನ ಪವಾಡಗಳು ಅಪಾರ. ಹನುಮಂತ ಅಂಜನಾದೇವಿ ಮತ್ತು ವಾಯು ದೇವರ ಪುತ್ರ. ಸುಗ್ರೀವನ ಮಂತ್ರಿ. ಏಳು ಮಂದಿ ಚಿರಂಜೀವಿಗಳಲ್ಲಿ ಒಬ್ಬ. ಸೂರ್ಯ ದೇವರಲ್ಲಿ ವೇದಾಧ್ಯಯನನ್ನು ಮಾಡಿದ ಮಹಾನ್ ಶ್ರೀರಾಮ ಭಕ್ತ. ಶ್ರೀರಾಮನಿಗೆ ಸೀತೆಯ ನೆಲೆಯನ್ನು ತೋರಿಸಿದಂತಹ ಶ್ರೀರಾಮ ಭಕ್ತ. ಲಕ್ಷ್ಮಣನಿಗೆ ಸಂಜೀವಿನಿ ತೆಗೆದುಕೊಂಡು ಬಂದು ಪ್ರಾಣ ದಾನ ಮಾಡಿದಂತಹ ಮಹಾನ್ ವೀರ. ಮಹಿರಾಮಣ ರಾಮ ಲಕ್ಷ್ಮಣ ಸೀತೆಯರನ್ನು ಸೆರೆಮನೆಯಲ್ಲಿದ್ದಾಗ ಮಹಿರಾಮಣನನ್ನು ಕೊಂದ ಮಹಾನ್ ವೀರ. ಶ್ರೀ ರಾಮನ ವನವಾಸ ಮುಗಿದಾಗ ಶ್ರೀ ರಾಮ ಸೀತೆ ಲಕ್ಷ್ಮಣರನ್ನು ಕ್ಷಣಾರ್ಧದಲ್ಲಿ ಅಯೋಧ್ಯೆಗೆ ತೆಗೆದುಕೊಂಡು ಬಂದಂತಹ ಮಹಾನ್ ವೀರ. ತನ್ನ ಅಂಶ ರಾಘವೇಂದ್ರ ಸ್ವಾಮಿಗಳ ಜೊತೆಯಲ್ಲಿ ಸದಾ ಇರುವಂತಹ ಶ್ರೀರಾಮ ಭಕ್ತ. ಕುರುಕ್ಷೇತ್ರ ಯುದ್ಧ ನಡೆದಾಗ ಅರ್ಜುನನ ರಥದ ಮೇಲ್ಗಡೆ ನಿಂತು ತನ್ನ ಘರ್ಜನೆಯಿಂದಲೇ ಶತ್ರುಗಳ ಹೃದಯದಲ್ಲಿ ಭಯವನ್ನು ಹುಟ್ಟಿಸುತ್ತಿದ್ದಂತಹ ಮಹಾನ್ ವೀರ. ಶ್ರೀರಾಮ ಭಕ್ತ .
ತುಲಸೀದಾಸ ಅಕ್ಬರನ 40 ದಿನ ಸೆರೆಮನೆಯಲ್ಲಿದ್ದಾಗ ಬರೆದ ಮಹಾನ್ ಶ್ಲೋಕವೇ ಹನುಮಾನ್ ಚಾಲೀಸಾ.
ತುಳಸಿ ದಾಸರು ಸೆರೆಮನೆಯಲ್ಲಿದ್ದ 41ನೇ ದಿನ ಏಕಾಏಕಿ 32 ಸಾವಿರ ವಾನರ ಸೈನ್ಯ
ಅಕ್ಬರನ ರಾಜ್ಯಕ್ಕೆ ದಾಳಿ ಮಾಡಿದವು. ತದನಂತರ ಅಕ್ಬರನು ತುಳಸಿದಾಸರನ್ನು ಬಿಡುಗಡೆಗೊಳಿಸಿದನು .
ಅಂಜನಾದ್ರಿ ಎಂಬುದು ಹನುಮನು ಹುಟ್ಟಿದಂತಹ ಪವಿತ್ರ ಸ್ಥಳ. ರಾಮನು ಎಲ್ಲಿರುವನೋ ಹನುಮನು ಕೂಡ ಅಲ್ಲೇ ಇರುವನು ಎಂಬ ಮಾತಿದೆ. ಹನುಮನ ಪವಾಡಗಳು ಅನೇಕ. ಹನುಮನು ತನ್ನ ಹೃದಯವನ್ನು ಹೇಳಿ ಅಯೋಧ್ಯೆಯ ನಗರದ ಎಲ್ಲಾ ನಿವಾಸಿಗಳಿಗೂ ರಾಮ ಸೀತೆಯರ ಇರುವಿಕೆಯನ್ನು ತನ್ನ ಹೃದಯದಲ್ಲಿ ಇರುವುದು ಎಂದು ತೋರಿಸಿದ್ದನಂತೆ . ಶ್ರೀರಾಮ ಮರ್ಯಾದ ಪುರುಷೋತ್ತಮನಾದರೆ , ಹನುಮಂತ ಶ್ರೀರಾಮನ ನೆಚ್ಚಿನ ಭಕ್ತ.
ಪ್ರದೀಪ್ ಚಿನ್ಮಯಿ ಆಸ್ಪತ್ರೆ ಕುಂದಾಪುರ

