ಧ್ರುವ ವಿಷ್ಣುವಿನ ಮಹಾನ್ ಭಕ್ತ ಧ್ರುವನ ಜೀವನ ಚರಿತ್ರೆಯನ್ನು ವಿಷ್ಣು ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಧ್ರುವನ ತಂದೆಯ ಹೆಸರು ಉತ್ತಾನಪಾದ ಉತ್ತಾನಪಾದನ ರಾಣಿ ಸುನೀತಿಗೆ ಮಗನಾಗಿ ಜನಿಸಿದವನೇ ಧ್ರುವ ಉತ್ತಾನಪಾದನ ಇನ್ನೊಬ್ಬಳು ರಾಣಿಯ ಹೆಸರು ಸುರುಚಿ.ಸುರುಚಿಯ ಏಕೈಕ ಮಗನೇ ಉತ್ತಮ ಸುರುಚಿಯ ಏಕೈಕ ಮಗ ಉತ್ತಮನು ರಾಜನಿಗೆ ಬಹಳ ಪ್ರೀತಿ ಪಾತ್ರನಾಗಿದ್ದನು. ಒಂದು ದಿನ ಸುನೀತಿಯ ಮಗನಾದ ಧ್ರುವನು ತನ್ನ ತಂದೆಯ ತೊಡೆಯ ಮೇಲೆ ಆಟವಾಡುತ್ತಾ ಕುಳಿತಿದ್ದನು. ಇದನ್ನು ಕಂಡ ಸುರುಚಿಗೆ ತುಂಬಾ ಸಿಟ್ಟು ಬಂದಿತ್ತು. ಸುರುಚಿಯು ಬಂದು ಧ್ರುವನನ್ನು ಎಳೆದೊಯ್ದು ನೀನು ನಿನ್ನ ಅಪ್ಪನ ತೊಡೆಯಲ್ಲಿ ಕುಳಿತುಕೊಳ್ಳಬೇಕಾದರೆ ಮುಂದಿನ ಜನ್ಮದಲ್ಲಿ ನನ್ನ ಹೊಟ್ಟೆಯಲ್ಲಿ ಹುಟ್ಟಿ ಬಾ ಎಂದಿದ್ದಳು. ಆಗ ಧ್ರುವನ ವಯಸ್ಸು ಕೇವಲ ಐದು ವರ್ಷ. ಧ್ರುವನ ತಾಯಿ ಆತನನ್ನು ಎಷ್ಟೇ ಸಮಾಧಾನ ಮಾಡಿದರು ಧ್ರುವನು ಸಮಾಧಾನಗೊಳ್ಳಲಿಲ್ಲ ಧ್ರುವನ ತೆಗೆದುಕೊಂಡ ಒಂದು ನಿರ್ಧಾರ ಆತನ ಜೀವನವನ್ನೇ ಬದಲಾಯಿಸಿ ಬಿಟ್ಟಿತು ಧ್ರುವನು ಕಾಡಿಗೆ ಹೋಗಿ ತಪಸ್ಸು ಮಾಡಲು ನಿರ್ಧಾರ ತೆಗೆದುಕೊಂಡನು. ಧ್ರುವನು ಕಾಡಿನಲ್ಲಿ ತಪಸ್ಸಿಗಾಗಿ ಹೋಗುತ್ತಿದ್ದಾಗ ನಾರದರು ಆತನಿಗೆ ವಿಷ್ಣುವನ್ನು ಓಲೈಸುವ ಮಂತ್ರವನ್ನು ಉಪದೇಶ ಮಾಡಿದರು ಧ್ರುವನ ತಪಸ್ಸು ಎಷ್ಟು ಕಠೋರವಾಗಿತ್ತೆಂದರೆ ಆತ ಆರು ತಿಂಗಳು ಯಾವುದೇ ಆಹಾರವನ್ನು ತೆಗೆದುಕೊಂಡಿರಲಿಲ್ಲ ವಿಷ್ಣು ಧ್ರುವನ ತಪಸ್ಸಿಗೆ ಸಂಪ್ರೀತನಾಗಿ ಏನು ವರಬೇಕೆಂದು ಕೇಳಿದಾಗ ತನ್ನ ಜೀವನವೆಲ್ಲ ನಿನ್ನ ಭಕ್ತಿಯಲ್ಲಿ ಕಳೆಯುವಂತಾಗಲಿ ಎಂದು ಧ್ರುವನು ಕೇಳಿಕೊಂಡನು. ವಿಷ್ಣು ಪರಮಾತ್ಮನು ಧ್ರುವನಿಗೆ ಸಪ್ತಋಷಿ ಮಂಡಲದಲ್ಲಿ ನೀನೂ ಕೂಡ ಒಂದು ತಾರೆಯಾಗು ಎಂದು ಹರಿಸಿದನು
ನಾವು ಆಕಾಶದಲ್ಲಿ ನೋಡುವ ಸಪ್ತಋಷಿ ಮಂಡಲದ ನಕ್ಷತ್ರವೇ ಈ ಧ್ರುವ ನಕ್ಷತ್ರ. ಹಠ ಮತ್ತು ಛಲವಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಭಕ್ತ ಧ್ರುವನೇ ಸಾಕ್ಷಿ ಭಕ್ತ ಧ್ರುವನು ನಕ್ಷತ್ರವಾಗಿ ಸೂರ್ಯ ಚಂದ್ರ ಇರುವಷ್ಟು ಕಾಲ ಸಪ್ತಋಷಿ ಮಂಡಲದಲ್ಲಿ ತಾರೆಯಾಗಿ ಬೆಳಗುವನು ಹೀಗೆಯೇ ನಾವು ಕೂಡ ನಮ್ಮ ಜೀವನದಲ್ಲಿ ಛಲದೊಂದಿಗೆ ಜೀವನ ನಡೆಸಬೇಕು ನಮ್ಮ ಗುರಿಯನ್ನು ನಾವು ಪಡೆದೆ ಪಡೆಯುತ್ತೇವೆ ಎಂಬ ಛಲದೊಂದಿಗೆ ನಮ್ಮ ನಡೆಯಿರಬೇಕು ದುಡಿಯಬೇಕು ಬದುಕಬೇಕು ನಾವು ದುಡಿದದ್ದನ್ನು ಸ್ವಲ್ಪವಾದರೂ ಸಮಾಜಕ್ಕೆ ನೀಡಬೇಕು. ನಾವು ತಾರೆಯಾಗಿ ಹೊಳಿಯಬೇಕಾಗಿಲ್ಲ ಆದರೆ ನಮ್ಮ ಒಂದು ಸಣ್ಣ ಸಹಾಯ ಇನ್ನೊಬ್ಬರ ಜೀವನವನ್ನು ಬೆಳಕಾಗಿಸಬಲ್ಲದು. ಉದಾಹರಣೆಗೆ ನೇತ್ರದಾನ. ನಾವು ನೇತ್ರದಾನ ಮಾಡಿದರೆ ನಮ್ಮ ಅಳಿವಿನ ನಂತರ ನಮ್ಮ ಕಣ್ಣುಗಳು ಇನ್ನೊಬ್ಬರ ಜೀವನಕ್ಕೆ ಬೆಳಕಾಗಬಹುದು ಧ್ರುವತಾರೆ ಆಕಾಶದಲ್ಲಿದೆ ನಾವು ಜೀವನದಲ್ಲಿ ತಾರೆಯಾಗಿ ಬೆಳಗಲು ಸಾಧ್ಯವಿದ್ದಷ್ಟು ಶ್ರಮಿಸೋಣ. ದೃವತಾರೆ ಎಂಬ ಪದಕ್ಕೆ ಪುನೀತ್ ರಾಜಕುಮಾರ್ ಒಂದು ಒಳ್ಳೆಯ ಉದಾಹರಣೆ ತಾನು ಮಾಡುತ್ತಿದ್ದ ದಾನ ಧರ್ಮಗಳನ್ನು ಅಂತಿಮ ಕ್ಷಣದವರೆಗೂ ಯಾರಿಗೂ ಗೊತ್ತಾಗದಂತೆ ಕಾಪಾಡಿದ ಮಹಾನುಭಾವ. ಈಗಿನ ದಿನಗಳಲ್ಲಿ ಸ್ವಲ್ಪ ಸಹಾಯ ಮಾಡಿದರು ಅದನ್ನು ವಾಟ್ಸಾಪ್, ಫೇಸ್ ಬುಕ್ ಗಳಲ್ಲಿ ಹಾಕಿ ಪ್ರಚಾರ ಗಿಟ್ಟಿಸಿಕೊಳ್ಳುವವರನ್ನು ನೋಡಿದ್ದೇವೆ. ಒಂದು ಕೈ ದಾನ ಮಾಡಿದ್ದು ಇನ್ನೊಂದು ಕೈಗೆ ಗೊತ್ತಾಗಬಾರದು ಎಂಬ ಮಾತಿದೆ. ಧ್ರುವತಾರೆ ಅಂತಹ ವ್ಯಕ್ತಿತ್ವ ಇರುವವರು ಸಿಗುವುದು ಬಹಳ ವಿರಳ ಪುನೀತ್ ರಾಜಕುಮಾರ್ ಅವರನ್ನು ಧ್ರುವತಾರೆ ಎಂದರೆ ತಪ್ಪಾಗಲಾರದು.ಜೀವನದ ನಮ್ಮ ಗುರಿಯೇ ಧ್ರುವತಾರೆ ಯಾಗುವುದಾದರೆ ನಮ್ಮ ಸಮಾಜದ ಬದಲಾವಣೆ ನಿಜಕ್ಕೂ ಸಾಧ್ಯವಿದೆ
ಪ್ರದೀಪ್ ಚಿನ್ಮಯಿ ಆಸ್ಪತ್ರೆ ಕುಂದಾಪುರ