362
ಉಚಿತ ದ್ವಿಚಕ್ರ ವಾಹನಕ್ಕಾಗಿ ಅರ್ಜಿ ಅಹ್ವಾನ
ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃಧ್ದಿ ನಿಗಮದಿಂದ 2022-23 ನೇ ಸಾಲಿನ ಪರಿಶಿಷ್ಟ ಜಾತಿಯ ಜನರ ಆರ್ಥಿಕ ಅಭಿವೃಧ್ದಿಯ ಉದ್ಯಮಶೀಲತಾ ಅಭಿವೃಧ್ದಿ ಯೋಜನೆ ಅಡಿ ವಿದ್ಯುತ್ ಚಾಲಿತ ಹಾಗೂ ಇತರೆ ದ್ವಿಚಕ್ರ ವಾಹನಗಳ ಸೌಲಭ್ಯಕ್ಕಾಗಿ ಸಫಾಯಿ ಕರ್ಮಚಾರಿ ಪೌರಕಾರ್ಮಿಕ ಮ್ಯಾನುವೆಲ್ ಸ್ಕ್ಯಾವೆಂಜರ್ ವೃತ್ತಿಯನ್ನು ನಿರ್ವಹಿಸುತ್ತಿರುವ ಅಥವಾ ಅವರ ಅವಲಂಬಿತರಿಂದ ಅರ್ಜಿ ಆಹ್ವಾನಿಸಲಾಗಿದೆ ಅರ್ಜಿ ಸಲ್ಲಿಸಲು ಮಾ.4 ಕೊನೆಯ ದಿನಾಂಕವಾಗಿದ್ದು 21 ರಿಂದ 50 ವರ್ಷದ ಒಳಗಿನ ಫಲಾಪೇಕ್ಷಿಗಳು ಅರ್ಜಿ ಸಲ್ಲಿಸಬಹುದು ವಾಹನ ಸೌಲಭ್ಯವನ್ನು ಪಡೆಯಲು ಡ್ರೈವಿಂಗ್ ಲೈಸೆನ್ಸ್ ಕಡ್ಡಾಯವಾಗಿ ಹೊಂದಿರಬೇಕು

