ಹನುಮಂತ ವಾಯುಪುತ್ರ ಆತನ ಮಾತೆ ಹೆಸರು ಅಂಜನಿ ಹನುಮಂತನನ್ನು ಅಂಜನಿಪುತ್ರ ಎಂದು ಕರೆಯಲಾಗುತ್ತದೆ . ಎಲ್ಲಿ ಹನುಮಂತನು ಅಲ್ಲಿ ರಾಮನು , ಎಲ್ಲಿ ರಾಮನಿದ್ದಾನೆಯೋ ಅಲ್ಲಿ ಹನುಮನು ಇದ್ದಾನೆ ರಾಮನನ್ನು ಹನುಮಂತನಕ್ಕಿಂತ ಚೆನ್ನಾಗಿ ಬಣ್ಣಿಸುವವರು ಯಾರು ಇರಲ್ಲ . ಸಪ್ತ ಚಿರಂಜೀವಿಗಳಲ್ಲಿ ಹನುಮಂತನು ಕೂಡ ಒಬ್ಬನಾಗಿರುತ್ತಾನೆ ಆಂಜನೇಯನ ಪರಾಕ್ರಮಗಳು ಒಂದಲ್ಲ ಎರಡಲ್ಲ ಅನೇಕ
ಚಿಕ್ಕವನಿದ್ದಾಗಲೇ ಸೂರ್ಯನನ್ನು ಹಣ್ಣೆಂದು ಹಿಡಿಯಲು ಹೋಗಿ ಇಂದ್ರನ ವಜ್ರಾಯುಧಕ್ಕೆ ಆಘಾತಗೊಂಡ ಪರಾಕ್ರಮಿ ಹನುಮ . ಭೂಮಿ ಇರುವಷ್ಟು ಕಾಲ ಚಿರಂಜೀವಿಯಾಗಿ ರಾಮ ನಾಮವನ್ನು ಲೋಕಕ್ಕೆ ಸಾರುವ ಪರಾಕ್ರಮಿ ಹನುಮ ಸೀತಾಮಾತೆಗೆ ತನ್ನ ಹೃದಯವನ್ನು ಬಗೆದು ರಾಮ ಸೀತೆಯರ ಇರುವಿಕೆಯನ್ನು ಪ್ರಕಟಗೊಳಿಸಿದವನು ಹನುಮ ಸಾಗರವನ್ನು ಹಾರಿ ಚೂಡಾಮಣಿಯನ್ನು ಸೀತೆಯ ಕೈಗಿತ್ತು ಲಂಕಾ ದಹನ ಮಾಡಿದವನು ಹನುಮ ರಾಮನಾಮವನ್ನು ಜಪಿಸುತ್ತಾ ರಾಮ ಸೇತುವನ್ನು ಕಟ್ಟಿ ಲಂಕೆಗೆ ವಾನರ ಸೈನ್ಯವನ್ನು ಕೊಂಡೊಯ್ದವನು ಹನುಮ
ಮಹಿರಾವಣನು ರಾಮ ಲಕ್ಷ್ಮಣರನ್ನು ಕೊಂಡೊಯ್ದಾಗ ಮಹಿರಾವಣನನ್ನು ಮರ್ದಿಸಿದವನು ಹನುಮ ಲಕ್ಷ್ಮಣನು ಯುದ್ಧ ಭೂಮಿಯಲ್ಲಿ ಮೂರ್ಛೆಯಾಗಿ ಬಿದ್ದಾಗ ಸಂಜೀವಿನಿ ಪರ್ವತದಿಂದ ಲಕ್ಷ್ಮಣನ ಪ್ರಾಣ ಉಳಿಸಿದವನು ಹನುಮ ರಾಮ ಲಕ್ಷ್ಮಣ ಸೀತೆಯರನ್ನು ತನ್ನ ಬೆನ್ನ ಮೇಲೆ ಕೂರಿಸಿ ಅಯೋಧ್ಯೆಗೆ ಕೊಂಡೊಯ್ದವನು ಹನುಮ ಭೀಮನ ಅಹಂಕಾರವನ್ನು ಇಳಿಸಿ
ಭೀಮನಿಗೆ ಪುರುಷ ಮೃಗವನ್ನು ಅರಮನೆಗೆ ಕೊಂಡೊಯ್ಯಲು ಸಹಾಯ ಮಾಡಿದವನು ಹನುಮ ಅರ್ಜುನನ ರಥದ ಮೇಲೆ ನಿಂತು ಶತ್ರುಗಳ ಎದೆಯಲ್ಲಿ ನಡುಕವನ್ನು ಹುಟ್ಟಿಸಿದವನು ಹನುಮ . ಹನುಮನ ಅಂಶದಿಂದ ನಿಮ್ ಕರೋಲಿ ಬಾಬಾ ಎಂಬ
ಪವಾಡ ಪುರುಷನಾಗಿ ಹುಟ್ಟಿದವನು ಹನುಮ ಹನುಮಾನ್ ಚಾಲೀಸ್ ಎಂಬ ಅದ್ಭುತ ಶ್ಲೋಕವನ್ನು ತುಳಸಿದಾಸರಿಂದ ಬರೆಸಿಕೊಂಡವನು ಹನುಮ
ರಾಮ ಹನುಮ ಎಂಬುದು ಎರಡು ಅದ್ಭುತ ದೇವ ಶಕ್ತಿಗಳು ಒಂದೆಡೆ ಸೇರಿದಾಗ ಆಗುವಂತಹ ಪವಾಡಗಳು ಅಷ್ಟಿಷ್ಟಲ್ಲ.
ಎಂಥ ಸಾಹಸವಂತ ನೀನೇ ಬಲವಂತ ಎಂಬುವ ಆ ಸಾಹಿತ್ಯದ ಸಾಲುಗಳು ಒಂದು ಕಡೆಯಾದರೆ ….
ಸತ್ಯ ನ್ಯಾಯ ಧರ್ಮ ರಾಮ ರಾಮ ರಾಮ ರಾಮ ರಾಮ ಅವನ ಬಂಟ ಹನುಮ . ಶನಿ ಮಹಾತ್ಮನಿಗೆ ಹನುಮ ಎಂದರೆ ಬಲು ಪ್ರೀತಿ . ಅದಕ್ಕಾಗಿ ಶನಿದೋಷವಿದ್ದವರು ಹನುಮಂತನ ಭಜನೆ ನಾಮ ಉಚ್ಚರಿಸಿದರೆ ಶನಿ ದೋಷದಿಂದ ಮುಕ್ತಿ ಪಡೆಯಬಹುದು ಎಂದು ನಂಬಲಾಗಿದೆ.
ಹನುಮಂತನ ಬೆವರು ಒಂದು ಮೀನು ನುಂಗಿದಾಗ ಮೀನಿನ ಹೊಟ್ಟೆಯಿಂದ ಹುಟ್ಟಿದವನೇ ಮಕರ ಧ್ವಜ ಆತನನ್ನು ಹನುಮಂತನ ಮಗನೆಂದು ಕರೆಯಲಾಗುತ್ತದೆ. ರಾಮನಿಲ್ಲದೆ ಹನುಮನು ಇಲ್ಲ . ಹನುಮನ ರೋಮ ರೋಮಗಳಲ್ಲಿ ಕಣಕಣಗಳಲ್ಲಿ ಉಸಿರಿನಲ್ಲಿ ಇರುವ ನಾಮವೊಂದೇ ಅದೇ ರಾಮ ನಾಮ
ಹನುಮ ಜಯಂತಿಗೆ ಹನುಮನ ಪೂಜೆಯಾದರೆ ಆತನ ಹೃದಯದಲ್ಲಿ ರಾಮನ ಪೂಜೆಯಾಗುತ್ತದೆ . ಹನುಮ ರಾಮ ಜನರ ಪಾಲಿಗೆ ಅದೇ ಭಕ್ತಿಯ ಅದ್ಭುತ ನಾಮ. ಸರ್ವರಿಗೂ ಹನುಮಜ್ಜಯಂತಿಯ ಹಾರ್ದಿಕ ಶುಭಾಶಯಗಳು

ಪ್ರದೀಪ್ ಚಿನ್ಮಯಿ ಆಸ್ಪತ್ರೆ, ಕುಂದಾಪುರ

