Home » ಕಾಸರಗೋಡು ಕಾಟುಕುಕ್ಕೆ ಸುಬ್ರಾಯ ದೇವಸ್ಥಾನ
 

ಕಾಸರಗೋಡು ಕಾಟುಕುಕ್ಕೆ ಸುಬ್ರಾಯ ದೇವಸ್ಥಾನ

by Kundapur Xpress
Spread the love

ಸುಬ್ರಹ್ಮಣ್ಯ ಶಿವ ಪಾರ್ವತಿಯರ ಪುತ್ರ. ಈತನಿಗೆ ಕಾರ್ತಿಕೇಯ ಎಂಬ ಹೆಸರು ಕೂಡ ಇದೆ. ನವಿಲು ಸುಬ್ರಹ್ಮಣ್ಯನ ವಾಹನ ಸುಬ್ರಹ್ಮಣ್ಯ ಸರ್ಪಗಳಿಗೆ ಅಧಿಪತಿ ಸುಬ್ರಹ್ಮಣ್ಯ ಗಣಪನ ಸಹೋದರ ಎಲ್ಲಾ ಸರ್ಪದೋಷಗಳಿಗೂ ಸುಬ್ರಹ್ಮಣ್ಯದಲ್ಲಿ ದೋಷ ಮುಕ್ತಿ ಎಂಬ ನಂಬಿಕೆ ಜನರಲ್ಲಿ ಇದೆ. ಸರ್ಪ ಸಂಸ್ಕಾರ ,ಆಶ್ಲೇಷ ಬಲಿ ಮೊದಲಾದ ಅನೇಕ ಪೂಜೆಗಳು ಸುಬ್ರಹ್ಮಣ್ಯದಲ್ಲಿ ನಡೆಯುತ್ತವೆ. ಸುಬ್ರಹ್ಮಣ್ಯ ಕ್ಷೇತ್ರದಷ್ಟೇ ಪ್ರಸಿದ್ಧಿ ಹೊಂದಿರುವ ಮತ್ತು ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಹೇಳಿದಂತಹ ಹರಕೆಗಳನ್ನ  ಮಾಡುವಂತಹ ಇನ್ನೊಂದು ಕ್ಷೇತ್ರವಿರುವುದು  ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ದಕ್ಷಿಣ ಕನ್ನಡದ ಗಡಿ ಭಾಗದಲ್ಲಿರುವ ಪ್ರಕೃತಿಯ ಮಡಿಲಲ್ಲಿರುವ ರಮಣೀಯ ಸುಂದರ ದೇವಸ್ಥಾನವೇ ಕಾಟುಕುಕ್ಕೆ ಸುಬ್ರಾಯ ದೇವಸ್ಥಾನ

ಐತಿಹಾಸಿಕ ಹಾಗೂ ಪೌರಾಣಿಕ ಹಿನ್ನೆಲೆಯಿಂದಲೂ ಕಾರಣಿಕತೆಯ ಶಕ್ತಿಯಿಂದಲೂ  ಭಕ್ತರ ಭಕ್ತಿ ಭಾವೈಕ್ಯತೆಯ ಸಂಗಮದಿಂದಲೂ ಕಾಸರಗೋಡು ತಾಲೂಕಿನ ಪಡ್ರೆ ,ಕಾಟುಕುಕ್ಕೆ  ಶೇಣಿ  4 ಗ್ರಾಮಗಳ  ಮುಖ್ಯ ದೇವಸ್ಥಾನವಾಗಿ ಭಕ್ತರ ಅಭಯ ಕೇಂದ್ರವಾಗಿದೆ ಕಾಟುಕುಕ್ಕೆ ದೇವಸ್ಥಾನಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ

ಇಲ್ಲಿಯ ಸ್ಥಳ ಪುರಾಣದ ಪ್ರಕಾರ  ಒಬ್ಬ ತಪಸ್ವಿಗೆ  ಕುಕ್ಕೆ ಸುಬ್ರಹ್ಮಣ್ಯನ ಆರಾಧನೆ ಮಾಡುವ ಮನಸ್ಸಾದಾಗ ಆತನು ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗಿ  ತನಗೆ ಆರಾಧನೆ ಮಾಡಲು ಒಂದು ಮೂರ್ತಿ ಕೊಡಬೇಕೆಂದು ಕೇಳಿಕೊಂಡಾಗ ಆ ದೇವಸ್ಥಾನದಿಂದ ಆ ತಪಸ್ವಿಗೆ ಒಂದು ಲೋಹದ ಮೂರ್ತಿಯನ್ನು ಕೊಟ್ಟರು ಆ ಮಹಾ ತಪಸ್ವಿಯು  ಸುಬ್ರಹ್ಮಣ್ಯದಿಂದ ಕಾಟುಕುಕ್ಕೆ  ಪರಿಸರಕ್ಕೆ ಬಂದಾಗ ತನ್ನ ತಪೋಬಲದಿಂದ ಒಂದು ಸಜೀವ ನಾಗರಹಾವನ್ನು ತಂದು  ಈ ಪರಿಸರದಲ್ಲಿ ಅದನ್ನು ಪ್ರತಿಷ್ಠಾಪಿಸಿ  ಆರಾಧಿಸಲು ಶುರು ಮಾಡಿದನಂತೆ. ಕುಕ್ಕೆಗೆ ಪ್ರತಿಯಾಗಿ  ಇಲ್ಲೊಂದು ಸಾಟು ಕುಕ್ಕೆಯನ್ನು ನಿರ್ಮಿಸಿದನಂತೆ  ಕೆಲ ಸಮಯದ ನಂತರ ಸಾಟು ಕುಕ್ಕೆ ಎಂಬ ನಾಮವೇ  ಕಾಟು ಕುಕ್ಕೆಯಾಗಿ ಬದಲಾಯಿತು. ಈ ದೇವಸ್ಥಾನದಲ್ಲಿರುವ ಶಿಲಾ ಬಿಂಬವು ಸುಮಾರು  ಒಂದು ಸಾವಿರ ವರ್ಷಗಳ ಹಿಂದಿನ ಬಿಂಬವಾಗಿದ್ದು ನೋಡಲು ನಯನ ಮನೋಹರವಾಗಿದೆ. ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಹೇಳಿದ ಹರಕೆಯನ್ನು ಇಲ್ಲಿ ತೀರಿಸಬಹುದು. ಆದರೆ ಈ ಕ್ಷೇತ್ರದಲ್ಲಿ ಹೇಳಿದ ಹರಕೆಯನ್ನು ಇಲ್ಲಿಯೇ ತೀರಿಸಬೇಕು

ಹಿಂದೆ ಈ  ಪ್ರದೇಶವನ್ನು ಆಳುತ್ತಿದ್ದ ಅರಸ ಬಲ್ಲಾಳನು  ಸುಬ್ರಹ್ಮಣ್ಯ ಸ್ವಾಮಿಗೆ ಭವ್ಯವಾದ ದೇವಾಲಯವನ್ನು ಕಟ್ಟಿದನು. ಸರ್ಪಸಂಸ್ಕಾರ ,ನಾಗತಂಬಿಲ ಆಶ್ಲೇಷ ಬಲಿ,  ಇಲ್ಲಿ ನಡೆಯುವ ವಿಶೇಷ ಸೇವೆಗಳು ಕಾಟುಕುಕ್ಕೆ ಸುಬ್ರಾಯ ದೇವಸ್ಥಾನ ನಾಲ್ಕು ಗ್ರಾಮಗಳ ಪ್ರಧಾನ ದೇವಸ್ಥಾನ. ಸುಬ್ರಹ್ಮಣ್ಯೇಶ್ವರನು 4 ಗ್ರಾಮಗಳ ಅಧಿಪತಿ ಎಂದೇ ಹೇಳಲಾಗುತ್ತದೆ. ಈ ಸುಬ್ರಹ್ಮಣ್ಯೇಶ್ವರನ  ಶಕ್ತಿ ಅಪಾರ ಈ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಷ್ಟೇ ಶಕ್ತಿಯನ್ನು ಪಡೆದಿರುವಂತಹ  ಪುಣ್ಯಕ್ಷೇತ್ರವಾಗಿದೆ

 

Related Articles

error: Content is protected !!