Home » ಕಾದಿರುವಳು ಶಬರಿ ರಾಮ ಬರುವನೆಂದು…..
 

ಕಾದಿರುವಳು ಶಬರಿ ರಾಮ ಬರುವನೆಂದು…..

by Kundapur Xpress
Spread the love

ಶಬರಿ ರಾಮನ ಮಹಾನ್ ಆರಾಧಕಿ ಕಾದಿರುವಳು ಶಬರಿ ರಾಮ ಬರುವೆನೆಂದು ಈ ಕವಿತೆ ಎಲ್ಲರ ಮನದಲ್ಲೂ ಸದಾ ಉಳಿದುಕೊಳ್ಳುವಂಥ ಒಂದು ಅದ್ಭುತ ಕವಿತೆ . ಬೇಡರ ಕುಟುಂಬ ಒಂದರಲ್ಲಿ ಜನ್ಮ ತಾಳಿದಂತಹ ಶಬರಿ ತನ್ನ ಕುಟುಂಬವನ್ನು ಪರಿತ್ಯಾಗ ಮಾಡಿ ಗುರುವನ್ನು ಅರಸಿಕೊಂಡು ರಿಷ್ಯ ಮೂಕ ಪರ್ವತಕ್ಕೆ ಹೋದಾಗ ಮಾತಂಗ ಋಷಿಗಳ ಭೇಟಿಯಾಗುತ್ತದೆ . ಮಾತಂಗ ಋಷಿಗಳನ್ನೇ ತನ್ನ ಗುರುವೆಂದು ಭಾವಿಸಿ ಅನೇಕ ವರ್ಷಗಳ ಕಾಲ ಗುರುವಿನ ಸೇವೆಯಲ್ಲಿ ಶಬರಿಯು ತೊಡಗುತ್ತಾಳೆ . ಅನೇಕ ವರ್ಷಗಳು ಕಳೆದಾಗ ಮಾತಂಗ ಋಷಿಗಳು ತನ್ನ ದೇಹ ತ್ಯಾಗ ಮಾಡುವ ಸಂದರ್ಭ ಬಂದಾಗ ಶಬರಿಯಲ್ಲಿ ಒಂದು ಮಾತನ್ನು ಹೇಳುತ್ತಾರೆ . ನಿನಗೆ ಮೋಕ್ಷ ಕೊಡಲು ಸ್ವತಃ ಶ್ರೀರಾಮನೇ ಈ ಪರ್ವತಕ್ಕೆ ಲಕ್ಷ್ಮಣನೊಡಗೂಡಿ ಬರುತ್ತಾನೆ ಎಂದು ಹೇಳಿ ತನ್ನ ದೇಹ ತ್ಯಾಗ ಮಾಡುತ್ತಾರೆ

ಅತ್ಯಂತ ಸೊರಗಿದ ದೇಹ ಊರು ಗೋಲಿನ ಸಹಾಯದಿಂದ ನಡೆಯುತ್ತಾ ತನ್ನ ನಿತ್ಯ ಕರ್ಮಗಳನ್ನು ಮಾಡುತ್ತಾ ಶ್ರೀ ರಾಮನ ಆಗಮನವನ್ನು ನಿರೀಕ್ಷಿಸುತ್ತಾ ಅನುದಿನವು ತನ್ನ ಸ್ವಾಮಿ ಇವತ್ತು ಬಂದಾನೋ ನಾಳೆ ಬಂದಾನೋ ಇದೇ ಭಾವದಿಂದ
ರಾಮ ನಾಮವನ್ನು ಜಪಿಸುತ್ತಾ ರಾಮ ಬಂದಾಗ ಆತನಿಗೆ ಕೊಡಲು ಸಿಹಿಯಾದ ಹಣ್ಣುಗಳನ್ನು ಸಂಗ್ರಹಿಸುತ್ತಾ ಕಾಲವನ್ನು ಕಳೆಯುತ್ತಿರುತ್ತಾಳೆ . ರಾಮ ಬರುವ ಹಾದಿಯಲ್ಲಿ ಕಲ್ಲು ಮುಳ್ಳು ಇರಬಾರದೆಂದು ಹಾದಿಯನ್ನು ಸ್ವಚ್ಛಗೊಳಿಸಿ ಮನಸ್ಸಿನಲ್ಲಿ ಪೂಜ್ಯ ಭಾವದಿಂದ ರಾಮ ನಾಮ ಜಪಿಸುತ್ತ ಅನುದಿನವು ದಿನಚರಿ ರಾಮನ ನೆನಪಲ್ಲಿ ನಡೆಸುತ್ತಿರುತ್ತಾಳೆ. ಕಾಲಕ್ರಮೇಣ ರಾಮ ಮತ್ತು ಲಕ್ಷ್ಮಣ ಸೀತಾನ್ವೇಷಣೆಗಾಗಿ ಶಬರಿಯ ಆಶ್ರಮದ ದಾರಿಯಲ್ಲಿ ಬಂದಾಗ ಶಬರಿಗೆ ಆಗುವ ಆನಂದ ಅಷ್ಟಿಷ್ಟಲ್ಲ. ತನ್ನ ಸ್ವಾಮಿಯ ಪಾದಪೂಜೆ ಮಾಡಿ ತಾನು ಸಂಗ್ರಹಿಸಿದ ಫಲಗಳನ್ನು ರಾಮನಿಗೆ ಅರ್ಪಿಸುವ ಮುನ್ನ ಒಂದೊಂದೇ ಫಲಗಳನ್ನು ತಾನೇ ಸವಿದು ಕಹಿಯಾದ ಫಲಗಳನ್ನು ಹೊರಗೆ ಎಸೆದು ಸಿಹಿಯಾದ ಫಲಗಳನ್ನು ರಾಮನಿಗೆ ಅರ್ಪಿಸುತ್ತಾಳೆ

ಫಲಗಳನ್ನು ಸ್ವೀಕರಿಸಲು ಲಕ್ಷ್ಮಣನು ರಾಮನಲ್ಲಿ ಈ ರೀತಿ ಪ್ರಶ್ನೆ ಕೇಳಿದನು ಅಣ್ಣ, ಎಂಜಲು ಫಲಗಳನ್ನು ನೀನೇಕೆ ತೆಗೆದುಕೊಂಡೆ? ಅದಕ್ಕೆ ಶ್ರೀರಾಮನು ಹಸನ್ಮುಖಿಯಾಗಿ ಲಕ್ಷ್ಮಣನಿಗೆ ನೀಡಿದ ಉತ್ತರವು ಶ್ರೇಷ್ಠವಾಗಿತ್ತು . ರಾಮನು ಲಕ್ಷ್ಮಣನಿಗೆ ಈ ರೀತಿ ಹೇಳುತ್ತಾನೆ ” ಲಕ್ಷ್ಮಣ, ಶಬರಿಯು ಅನುದಿನವು ಸದಾ ನನ್ನ ಧ್ಯಾನದಲ್ಲಿ ಅನೇಕ ವರ್ಷಗಳನ್ನು ಕಳೆದವಳು, ನನ್ನ ಬರುವಿಕೆಗಾಗಿ ಇಡೀ ಜೀವನವನ್ನೇ ಕಳೆದವಳು  ಭಕ್ತರು ಭಕ್ತಿಯಿಂದ ಯಾವುದೇ ಫಲವನ್ನು ಕೊಟ್ಟರು ಅದು ನನಗೆ ಸಂತೃಪ್ತಿಯಾಗಿಯೇ ಇರುತ್ತದೆ . ಶಬರಿಯು ಅರ್ಪಿಸಿದ ಒಂದೊಂದು ಫಲಗಳು ರಾಮನ ಪಾಲಿಗೆ ಪಂಚಾಮೃತವಾಗಿ ಮಾರ್ಪಟ್ಟವು . ರಾಮನ ಸಂಪೂರ್ಣ ಆಶೀರ್ವಾದದಿಂದ ಶಬರಿಗೆ ಮೋಕ್ಷ ಪ್ರಾಪ್ತಿಯಾಯಿತು

ಪ್ರದೀಪ್‌ ಚಿನ್ಮಯಿ ಅಸ್ಪತ್ರೆ ಕುಂದಾಪುರ

 

 

 

 

Related Articles

error: Content is protected !!