Home » ಪಾಲಕರ ಹಬ್ಬ
 

ಪಾಲಕರ ಹಬ್ಬ

by Kundapur Xpress
Spread the love

ಸಂತ ಜೋಸೆಫ್ ವಾಜ್ ವಾಳೆಯವರಿಂದ ಪಾಲಕರ ಹಬ್ಬ

ಕುಂದಾಪುರ : ಕುಂದಾಪುರ ರೋಜರಿ ಮಾತಾ ಇಗರ್ಜಿಗೆ ಸಂಬಂಧ ಪಟ್ಟ ಸಂತ ಜುಜೆ ವಾಜ್ ತಮ್ಮ ಪಾಲಕರ ಹಬ್ಬವನ್ನು ಭಾನುವಾರ ಜ. 29 ರಂದು ಇಗರ್ಜಿಯಲ್ಲಿ ಬೆಳಿಗ್ಗೆ ಬಲಿದಾನವನ್ನು ಅರ್ಪಿಸುವ ಮೂಲಕ ಆಚರಿಸಿದರು. ಪವಿತ್ರ ಬಲಿದಾನವನ್ನು ಮಂಗಳೂರಿನ ಧರ್ಮಗುರು ವಂ|ಐವನ್ ಮಾಡ್ತಾ ಇವರ ನೇತ್ರತ್ವದಲ್ಲಿ ಅರ್ಪಿಸಲಾಯಿತು. ರೋಜರಿ ಚರ್ಚಿನ ಪ್ರಧಾನ ಧರ್ಮಗುರು ವಂ|ಸ್ಟ್ಯಾನಿ ತಾವ್ರೊ ಸಹ ಬಲಿದಾನವನ್ನು ಅರ್ಪಿಸಿ ಶುಭ ಕೋರಿದರು.

ಸಂಜೆ ಜೇಕಬ್ ಡಿಸೋಜಾ ಇವರ ನಿವಾಸದಲ್ಲಿ ಹಬ್ಬದ ಆಚರಣೆ ನಡೆಯಿತು. ವಾಳೆಯ ಗುರಿಕಾರ ಬರ್ನಾಡ್ ಡಿಕೋಸ್ತಾ ಪ್ರಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು.

ಪಾಲನ ಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ ಶುಭ ಕೋರಿದರು. ಕಿರು ಸಮುದಾಯದ ಸಂಚಾಲಕಿ ಝಿಟಾ ಕರ್ವಾಲ್ಲೊ ವರದಿಯನ್ನು ವಾಚಿಸಿದರು. ವೇದಿಕೆಯಲ್ಲಿ ರೋಜರಿ ಚರ್ಚಿನ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ಹಾ, ಪಾಲನ ಮಂಡಳಿ ಕಾರ್ಯದರ್ಶಿ ಆಶಾ ಕರ್ವಾಲ್ಲೊ ಉಪಸ್ಥಿರಿದ್ದರು. ಕಿರು ಸ್ಫರ್ಧೆಗಳನ್ನು ನೆಡಸಲಾಯಿತು, ವಾಳೆಯ ಪ್ರತಿನಿಧಿ ಫೆರ್ಮಿನ್ ಡಿಸೋಜಾ ವಂದಿಸಿದರು. ಅಂತೋನಿ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು.

   

Related Articles

error: Content is protected !!