168
ಆನೆಗುಡ್ಡೆ : ನಿನ್ನೆ ಯುಗಾದಿಯ ದಿನದಂದು ಆನೆಗುಡ್ಡೆಗೆ ಸಹಸ್ರಾರು ಭಕ್ತರು ಆಗಮಿಸಿದ್ದರು ಶ್ರೀ ವಿನಾಯಕ ದೇವಸ್ಥಾನವು ಬೆಳಿಗ್ಗೆಯಿಂದಲೇ ಜನರು ಚಾಂದ್ರಮಾನ ಯುಗಾದಿಯ ಹೊಸ ವರ್ಷದಲ್ಲಿ ಸ್ವಾಮಿಯ ಪ್ತಥಮ ಪೂಜೆ ನರವೇರಿಸುವ ಪ್ರಯುಕ್ತ ಜನ ಸಂದಣಿಯಿಂದ ಕೂಡಿತ್ತು. ಭಕ್ತರು ಹೊಸ ವರ್ಷವು ಎಲ್ಲಾ ಕ್ಷೇತ್ರದಲ್ಲಿ ಹಾಗೂ ಜೀವನದಲ್ಲಿ ಸುಖ ಶಾಂತಿ ನೆಮ್ಮದಿಗೆ ಹರಕೆಯನ್ನು ಪೂರೈಸುವ ಮೂಲಕ ಕೃತಾರ್ಥ ರಾದರು.

ನಿನ್ನೆ ಸ್ವರ್ಣಾಲಂಕಾರನಾದ ಗಣಪತಿಗೆ ಪಂಚಾಮ್ರತ ಪೂರ್ವಕ ಉಪನಿಷತ್ ಕಲಶಾಭಿಷೇಕ, 108 ಕಾಯಿ ಗಣಹೋಮ, ಸತ್ಯಗಣಪತಿ ವೃತ ಸಹಿತ ಮಹಾಪೂಜೆಗಳು ಸಡಗರ ಸಂಭ್ರಮದಿಂದ ನೆರವೇರಿತು
ಸಾವಿರಾರು ಜನರು ಶ್ರೀ ದೇವರ ಬೋಜನ ಮಹಾಪ್ರಸಾದ ಸ್ವೀಕರಸಿ ಗಣಪತಿಯ ವಿಶೇಷ ಅನುಗ್ರಹಕ್ಕೆ ಪಾತ್ರರಾದರು.
ಈ ಸಂದರ್ಭದಲ್ಲಿ ಆಡಳಿತ ಮೊಕ್ತೆಸರ ಶ್ರೀ ರಮಣ ಉಪಾಧ್ಯಾಯರು ಕಾಲಕಾಲಕ್ಕೆ ಮಳೆ ಬೆಳೆಯಾಗಿ ಲೋಕಕೆಲ್ಲ ಸುಭೀಕ್ಷೆ ಯಾಗುವುದರೊಂದಿಗೆ ಎಲ್ಲಾ ಭಕ್ತರಿಗೂ ಆಯುರಾರೋಗ್ಯಾನಂದೈಶ್ವರ್ಯ ಕೊಟ್ಟು ಮಹಾ ಗಣಪತಿಯು ಸರ್ವರ ಇಷ್ಟಾರ್ಥ ನೆರವೇರಲಿ ಎಂದು ಪ್ರಾರ್ಥಿಸಿದರು

