ಕುಂದಾಪುರ : ಕುಂದಾಪುರ ನಗರದ ರಾಮಕ್ಷತ್ರಿಯ ಯುವಕ ಮಂಡಳಿಯ 59ನೇ ವರ್ಷದ ಗಣೇಶೋತ್ಸವ ಸಮಾರಂಭದ ಪ್ರಯುಕ್ತ ಗಣೇಶ ವಿಗ್ರಹವನ್ನು ಮೆರವಣಿಗೆ ಮೂಲಕ ತಂದು ರಾಮಮಂದಿರದಲ್ಲಿ ನಿನ್ನೆ ಶನಿವಾರ ಬೆಳಿಗ್ಗೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪ್ರತಿಷ್ಠಾಪಿಸಲಾಯಿತು ಬೆಳಿಗ್ಗೆ ಪ್ರಾಣ ಪ್ರತಿಷ್ಠೆಯ ಪೂಜೆಯೊಂದಿಗೆ ಗಣಹೋಮ ಮಧ್ಯಾಹ್ನ 12:30 ಕ್ಕೆ ಮಹಾಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಿತು
ಈ ಸಂದರ್ಭದಲ್ಲಿ ಶ್ರೀರಾಮ ಕ್ರೆಡಿಟ್ ಕೋಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ನಾಗರಾಜ್ ಕಾಮಧೇನು ರಾಮಕ್ಷತ್ರಿಯರ ಸಂಘದ ಹಾಡಿಮನೆ ಶಂಕರ್ ಶೇರಿಗಾರ್ ಡಿ ಕೆ ಪ್ರಭಾಕರ್ ಯುವಕ ಮಂಡಳಿಯ ಅಧ್ಯಕ್ಷ ಪ್ರಭಾಕರ್ ನೇರಂಬಳ್ಳಿ ಕಾರ್ಯದರ್ಶಿ ರತ್ನಾಕರ ಮಕ್ಕಿಮನೆ ರಾಮಕ್ಷತ್ರಿಯ ಯುವಕ ಮಂಡಳಿಯ ಗೌರವಾಧ್ಯಕ್ಷರಾದ ಮಹೇಶ್ ಬೆಟ್ಟಿನ್ ಮುಂತಾದವರು ಉಪಸ್ಥಿತರಿದ್ದರು
ಇಂದು ಆದಿತ್ಯವಾರ ಮಹಾಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಲಿದ್ದು ಸಂಜೆ 7.00 ಗಂಟೆಗೆ ಸಭಾ ಕಾರ್ಯಕ್ರಮ ಜರುಗಲಿದೆ ಮುಖ್ಯ ಅತಿಥಿಗಳಾಗಿ ಡಾ. ಶಿವಕುಮಾರ್ ಜಿ, ರಾಜಶೇಖರ ಹೆಗ್ಡೆ, ಲೋಕೇಶ್, ಅಮೃತ ಎಂ ಜಿ ಹಾಗೂ ಡಾಕ್ಟರ್ ತೃಪ್ತಿ ಗಣಪತಿ ಭಾಗವಹಿಸಿದ್ದಾರೆ

