Home » ಆನೆಗುಡ್ಡೆ ದೇವಸ್ಥಾನದಲ್ಲಿ ಬೀಳ್ಕೊಡುಗೆ ಸಮಾರಂಭ
 

ಆನೆಗುಡ್ಡೆ ದೇವಸ್ಥಾನದಲ್ಲಿ ಬೀಳ್ಕೊಡುಗೆ ಸಮಾರಂಭ

by Kundapur Xpress
Spread the love

ಕುಂದಾಪುರ : ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಆಡಳಿತ ಕಚೇರಿಯಲ್ಲಿ ಮ್ಯಾನೇಜರ್ ಆಗಿ ಕಳೆದ 38 ವರ್ಷಗಳಿಂದ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ನಟೇಶ್ ಕಾರಂತ್ ತೆಕ್ಕಟ್ಟೆ ಇವರಿಗೆ ಇಂದು ಬೀಳ್ಕೊಡುಗೆಯ ಕಿರು ಸಮಾರಂಭವು ನಡೆಯಿತು.
ಆಡಳಿತ ಧರ್ಮದರ್ಶಿಗಳಾದ ಕೆ. ಶ್ರೀ ರಮಣ ಉಪಾಧ್ಯಾಯರು ಈ ದೇವಳದ ವತಿಯಿಂದ ಶಾಲು ಹೊದಿಸಿ ಸ್ಮರಾಣಿಕೆಯನ್ನು ನೀಡಿ ಶ್ರೀಯುತರನ್ನು ಗೌರವಿಸಿ, ಮುಂದಿನ ನಿವೃತ್ತಿ ಜೀವನವು ಸುಖಮಯವಾಗಿ ಇರುವುದರೊಂದಿಗೆ ಈ ದೇವರು ಆಯುರಾರೋಗ್ಯ ಆನಂದೈಶ್ವರ್ಯವನ್ನು ಕರುಣಿಸಿ ಅವರ ಅಭೀಷ್ಟಗಳು ಈಡೇರಲಿ ಎಂದು ಹಾರೈಸಿದರು. ಪರ್ಯಾಯ ಅರ್ಚಕರಾದ ಕೆ ಅನಂತ ಉಪಾಧ್ಯಾಯರು ಶ್ರೀ ದೇವರ ವಿಶೇಷ ಪ್ರಸಾದ ನೀಡಿ ಆಶೀರ್ವದಿಸಿದರು.
ದೇವಳದ ಸಿಬ್ಬಂದಿ ಕೆ. ರಾಜರಾಮ ಉಪಾಧ್ಯಾಯರು ಸ್ವಾಗತಿಸಿ ಕಾರ್ಯಕ್ರಮವನ್ನು ನಿರ್ವಹಿಸಿದರು. ಇನ್ನೋರ್ವ ಸಿಬ್ಬಂದಿ ಕೆ. ದಿನೇಶ್ ಕಲ್ಲುರಾಯ ಧನ್ಯವಾದಗಳನ್ನು ಸಮರ್ಪಿಸಿದರು.
ಆಡಳಿತ ಮಂಡಳಿಯ ಸರ್ವ ಸದಸ್ಯರು ಸಿಬ್ಬಂದಿಗಳು ಅರ್ಚಕ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

 

Related Articles

error: Content is protected !!