Home » ನಾಳೆ ಬಸ್ರೂರು ಮಹಾ ರಥೋತ್ಸವ
 

ನಾಳೆ ಬಸ್ರೂರು ಮಹಾ ರಥೋತ್ಸವ

by Kundapur Xpress
Spread the love

ನಾಳೆ ಬಸ್ರೂರು ಮಹಾ ರಥೋತ್ಸವ

ಕುಂದಾಪುರ : ಸಮೀಪದ ಬಸ್ರೂರಿನಲ್ಲಿ ಮಹತೋಭಾರ ಶ್ರೀ ಮಹಾಲಿಂಗೇಶ್ವರನ ಸನ್ನಿಧಿಯಲ್ಲಿ ನಾಳೆ ಮಹಾ ರಥೋತ್ಸವ ನಡೆಯಲಿದೆ ಬಸ್ರೂರು ಹಬ್ಬ ಎಂದೇ ಜನಜನಿತವಾದ ಈ ರಥೋತ್ಸವದಲ್ಲಿ ಸಾವಿರಾರು ಮಂದಿ ಭಕ್ತರು ಪಾಲ್ಗೋಳ್ಳಲಿದ್ದಾರೆ

ಸುಮಾರು 1500 ವರ್ಷಗಳ ಇತಿಹಾಸ ಹೊಂದಿರುವ ಈ ದೇವಸ್ಥಾನವು ಐತಿಹಾಸಿಕ ಧಾರ್ಮಿಕ ಹಾಗೂ ಸಾಂಸ್ಕ್ರತಿಕ ಮಹತ್ವವನ್ನು ಪಡೆದುಕೊಂಡಿದೆ ಎಳು ಕೇರಿ ಎಳು ಕೆರೆಗಳನ್ನು ಒಳಗೊಂಡ ಬಸ್ರೂರು ಪಟ್ಟಣದ ಹೃದಯಭಾಗದಲ್ಲಿ ಆರಾಧಿಸಲ್ಪಡುವ ಶ್ರೀ ಮಹಾಲಿಂಗೇಶ್ವರನಿಗೆ ಸಕಲ ರಾಜೋಪಚಾರಗಳೊಂದಿಗೆ ಪೂಜಾ ವಿಧಿ ವಿಧಾನಗಳು ರಾಜರ ಆಳ್ವಿಕೆಯಿಂದಲೂ ವೈಭವವಾಗಿ ನಡೆಯುತಿತ್ತು

ಕಾಲಸರಿದಂತೆ ಪ್ರಾಕೃತಿಕ ವಿಕೋಪ ಪರಕೀಯ ದಾಳಿ ಹಾಗೂ ರಾಜಾಶ್ರಯದ ಕೊರತೆಯಿಂದ ಸೊರಗಿದ ಈ ದೇವಾಲಯವು ಅಜೀರ್ಣಾವಸ್ಥೆಗೆ ತಲುಪಿತು ಇದನ್ನು ಮನಗಂಡ ಊರಿನ ಆಸ್ಥಿಕ ಬಂಧುಗಳು ಊರಿನ ಮುಖಂಡರಾದ ಅಪ್ಪಣ್ಣ ಹೆಗ್ಡೆಯವರ ನೇತೃತ್ವದಲ್ಲಿ ವಾಸ್ತು ತಜ್ಞರು ಹಾಗೂ ನುರಿತ ಅಭಿಯಂತರರು ಮತ್ತು ಧಾರ್ಮಿಕ ಮುಖಂಡರ ಸಲಹೆಯನ್ನು ಪಡೆದು ನೂತನವಾಗಿ ಸಂಪೂರ್ಣ ಶಿಲಾಮಯ ದೇಗುಲವನ್ನು ನಿರ್ಮಿಸಲಾಯಿತು

ಈ ನೂತನ ಶಿಲಾಮಯ ದೇಗುಲದ ಗರ್ಭಗುಡಿಗೆ ತಾಮ್ರದ ಹೊದಿಕೆಯನ್ನು ಹಾಸಲಾಗಿದೆ ತೀರ್ಥ ಮಂಟಪ ಗಣಪತಿ ಹಾಗೂ ಸಪರಿವಾರ ದೇವರ ಗುಡಿಗಳು ಒಳ ಹೆಬ್ಬಾಗಿಲು ಒಳಗಿನ ಹಾಗೂ ಹೊರಗಿನ ಬೃಹತ್‌ ಪೌಳಿಗಳು ದೇವಸ್ಥಾನದ ಮೆರುಗನ್ನು ಇನ್ನಷ್ಟು ಹೆಚ್ಚಿಸಿದೆ

ಕಾರಣಿಕವಾದ ಈ ಕ್ಷೇತ್ರದಲ್ಲಿ ಇನ್ನು ಅನೇಕ ನಿರ್ಮಾಣ ಕಾರ್ಯಗಳು ಬಾಕಿ ಇದ್ದು ಭಕ್ತಾದಿಗಳು ಈ ನಿರ್ಮಾಣ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ನಿಗದಿತ ಸಮಯದಲ್ಲಿ ದೇವಾಲಯದ ನಿರ್ಮಾಣ ಕಾರ್ಯವು ಪೂರ್ಣಗೊಳ್ಳಲು ಸಹಕರಿಸಬೇಕೆಂದು ಜೀರ್ಣೊದ್ಧಾರ ಸಮಿತಿಯ ಅಧ್ಯಕ್ಷರಾದ ಶ್ರೀ ಅಪ್ಪಣ್ಣ ಹೆಗ್ಡೆಯವರು ಸಮಿತಿಯ ಪರವಾಗಿ ವಿನಂತಿಸಿಕೊಂಡಿದ್ದಾರೆ    

   

Related Articles

error: Content is protected !!