Home » ಶ್ರೀ ಚೆನ್ನಕೇಶವ ದೇವರಿಗೆ ವಿಶೇಷ ಸೋಣೆ ಆರತಿ ಪೂಜಾ ಕಾರ್ಯ
 

ಶ್ರೀ ಚೆನ್ನಕೇಶವ ದೇವರಿಗೆ ವಿಶೇಷ ಸೋಣೆ ಆರತಿ ಪೂಜಾ ಕಾರ್ಯ

by Kundapur Xpress
Spread the love

ಕೋಟ : ಇಲ್ಲಿನ ಗುಂಡ್ಮಿ ಶ್ರೀ ಮಾಣಿ ಚೆನ್ನಕೇಶವ ದೇಗುಲದಲ್ಲಿ ವಿಶೇಷ ರೀತಿಯ ಸೋಣೆ ಆರತಿ ಕಾರ್ಯಕ್ರಮ ಭಾನುವಾರ ಜರಗಿತು.ಇಲ್ಲಿನ ರಥಬೀದಿ ಗೆಳೆಯರು ಸಾಮಾಜಿಕ ಹಾಗೂ ಸಾಂಸ್ಕೃತಿಕ ವೇದಿಕೆ ವತಿಯಿಂದ ಹಮ್ಮಿಕೊಂಡ ಈ ಸೋಣೆ ಆರತಿ ಕಾರ್ಯಕ್ರಮ ಎಲ್ಲಾ ಗ್ರಾಮಗಳಿಗೆ ಮಾದರಿ ಎನಿಸಿತು.ಈ ಸಂದರ್ಭದಲ್ಲಿ ಪರಿವಾರ ದೇವರುಗಳಾದ ಹನುಮಂತ ಮತ್ತು ಗಣಪತಿ ದೇವರುಗಳಿಗೆ ರಂಗ ಪೂಜೆ ಹಾಗೂ ಅಮ್ಮನವರು,ಕ್ಷೇತ್ರಪಾಲ ಮತ್ತು ಈಶ್ವರ ದೇವರುಗಳಿಗೆ ವಿಶೇಷ ಪೂಜೆ ನಡೆಯಿತು.6.00 ಕ್ಕೆ ಶ್ರೀ ರಾಮಾಮೃತ ಭಜನಾ ಸಂಘ,ಕೋಟ,ಇವರಿಂದ ಭಜನಾ ಕಾರ್ಯಕ್ರಮ (ಕುಳಿತ ಭಜನೆ ಹಾಗೂ ಕುಣಿತ ಭಜನೆ) ಪೂಜಾ ಸಮಯದಲ್ಲಿ ಶಿವಕೃಪಾ ಚಂಡೆ ಬಳಗ ಸಾಸ್ತಾನ ಇವರಿಂದ ಚಂಡೆವಾದನ ನಡೆಯಿತು.ಧಾರ್ಮಿಕ ಕಾರ್ಯಕ್ರಮದ ಉಸ್ತುವಾರಿಯನ್ನು ವೇ.ಮೂ ಚಂದ್ರಶೇಖರ ಉಪಾಧ್ಯ ಗೈದರು.ಧಾರ್ಮಿಕ ವಿಧಿ ವಿಧಾನವನ್ನು ಪ್ರಧಾನ ಅರ್ಚಕ ಅನಂತರಾಮ ಬಾಯರಿ ನೆರವೆರಿಸಿದರು.ಹೀಗಿತ್ತು ತಯಾರಿ ರಥಬೀದಿ ಗೆಳೆಯರು ಸಾಮಾಜಿಕ ಹಾಗೂ ಸಾಂಸ್ಕೃತಿಕ ವೇದಿಕೆ ವತಿಯಿಂದ ಪ್ರತಿವರ್ಷ ದಂತೆ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಸೆ.15ರಂದು ಭಾನುವಾರ ರಾತ್ರಿ ಶ್ರೀ ಮಾಣಿಚನ್ನಕೇಶವ ದೇವರಿಗೆ ಹಮ್ಮಿಕೊಂಡ ಪೂಜಾ ಕಾರ್ಯಕ್ಕೆ ಪೂರ್ವಾಹ್ನದಿಂದಲೇ ಶ್ರೀದೇಗುಲದಲ್ಲಿ ಬಾರಿ ಪ್ರಮಾಣದಲ್ಲಿ ಪುಷ್ಭಗಳ ತಳಿರು ತೋರಣಗಳಿಂದ ದೇಗುಲವನ್ನು ಶೃಂಗರಿಸಲಾಗಿತ್ತು.ನವನವೀನವಾದ ಪ್ರಸಾದ ರೂಪದ ಪನಿವಾರದಲ್ಲಿ ಜೋಳದ ಕುಸುಂಬ್ರಿ,ಬೇಯಿಸಿದ ಕಡ್ಲೆ,ಹರಳು ಪಂಚಕಜ್ಜಾಯ,ಸೊನ್ ಪಪಡಿ,ಅವಲಕ್ಕಿ ಲಡ್ಡು,ಶಾವಿಗೆ ಪುಳಿವಗರೆ,ದೋಸೆಕಲ್ ಪತ್ರೋಡೆ,ಹುಳಿ ಅವಲಕ್ಕಿ,ಕೀರುಪಾಯಸಾ, ಒಟ್ಟು ಹತ್ತು ಬಗೆ ಪನಿವಾರ ಸೇವೆ ವಿಶೇಷ ಎನ್ನಿಸಿತು.ದೇಗುಲಕ್ಕೆ ಸೇವಂತಿ, ಗೊಂಡೆ, ಕಾಕಡ, ಕನಕಾಂಬರ, ಮಲ್ಲಿಗೆ,ಕಣಗಿಲೆ, ತುಳಸಿ, ಬೃಂಗರಾಜ,ಶೃಂಗಾರ,ಗುಲಾಬಿ ಪುಷ್ಭಗಳಿಂದ ಕಂಗೋಳಿಸುತ್ತಿತ್ತು. ಸೋಣೆ ಆರತಿಯಲ್ಲಿ ಸಾವಿರಾರು ಮಂದಿಗೆ ಪ್ರಸಾದ ರೂಪದಲ್ಲಿ ದೇಗುಲದ ಸುತ್ತ ಕುಳಿರಿಸಿ ಊಣಬಡಿಸಲಾಯಿತು.ರಥಬೀದಿ ಗೆಳೆಯರಾದ 70ಜನ ಸ್ವಯಂಸ್ವೇವಕರು ಸೇವಾ ಕಾರ್ಯದಲ್ಲಿ ಕೈಜೋಡಿಸಿದರು.ದೇಗುಲ ಆಡಳಿತ ಮಂಡಳಿಯ ಅಧ್ಯಕ್ಷ ಪ್ರಕಾಶ್ ಹೊಳ್ಳ,ಸದಸ್ಯರಾದ ಶ್ರೀಧರ ಶಾಸ್ತ್ರೀ,ಮಂಜುಳಾ ಸಿ. ಉಪಾಧ್ಯಾ,ಸಾವಿತ್ರಿ ಆರ್ ಶೆಟ್ಟಿಗಾರ್,ಮಾಧವ ಆಚಾರ್, ಜಿ.ವಿಠ್ಠಲ್ ಪೂಜಾರಿ ,ಶೀನ ನಾಯ್ಕ್,ಶಿವ ಮರಕಾಲ,ರಥಬೀದಿ ಗೆಳೆಯರ ಪ್ರಮುಖರಾದ ಸುಧೀಂದ್ರ ಕಾರಂತ್,ಉಮೇಶ್ ದೇವಾಡಿಗ,ವಿಶ್ವನಾಥ ಐತಾಳ್,ಕಾರ್ತಿಕ್ ನಾವಡ,ಕಾರ್ತಿಕ ಅಧಿಕಾರಿ,ಉತ್ಸವ ಸಮಿತಿಯ ಮಾಜಿ ಅಧ್ಯಕ್ಷ ಡಾ.ಹೇಮಂತ್,ಸಾಲಿಗ್ರಾಮ ದೇಗುಲದ ಟ್ರಸ್ಟಿ ಕೆ.ಅನಂತಪದ್ಮನಾಭ ಐತಾಳ್, ಹಾಗೂ ಸದಸ್ಯರು ಉಪಸ್ಥಿತರಿದ್ದರು.

   

Related Articles

error: Content is protected !!