Home » ಲಕ್ಷ ಮೋದಕ ಗಣಯಾಗದ ಆಮಂತ್ರಣ ಪತ್ರಿಕೆ ಬಿಡುಗಡೆ
 

ಲಕ್ಷ ಮೋದಕ ಗಣಯಾಗದ ಆಮಂತ್ರಣ ಪತ್ರಿಕೆ ಬಿಡುಗಡೆ

by Kundapur Xpress
Spread the love

ಕೋಟ : ಶ್ರೀ ಕ್ಷೇತ್ರ ಸಾಲಿಗ್ರಾಮದ ಗುರು ನರಸಿಂಹ ದೇವಳದಲ್ಲಿ ಮಾರ್ಚ್ 3 ರಿಂದ 8ರ ತನಕ ಲಕ್ಷ ಮೋದಕ ಗಣಯಾಗ ಮತ್ತು ಶ್ರೀ ಆಂಜನೇಯ ದೇವಳದಲ್ಲಿ ಮಾರ್ಚ್ 3 ರಂದು ಬೆಳಿಗ್ಗೆ ದ್ವಾದಶಾವರ್ತನ ಪವಮಾನ ಪಾರಾಯಣ ಸಹಿತ ಪವಮಾನ ಹೋಮ, ಮಾರ್ಚ್ 9ರ ಭಾನುವಾರ ನರಸಿಂಹ ಹೋಮ, ಸುದರ್ಶನ ಹೋಮ ಇತ್ಯಾದಿ ಧಾರ್ಮಿಕ ವಿಧಿ ವಿಧಾನಗಳ ನಂತರ ನೂತನವಾಗಿ ನಿರ್ಮಿಸಿರುವ ಶ್ರೀ ಗುರು ಧಾಮ ಯಾತ್ರಿ ನಿವಾಸವನ್ನು ಲೋಕಾರ್ಪಣೆ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ಸರಕಾರದ ಎಡ್ವಕೇಟ್ ಜನರಲ್ ಆಗಿ ಸೇವೆ ಸಲ್ಲಿಸಿರುವ ಬೆಂಗಳೂರಿನ ಹಿರಿಯ ನ್ಯಾಯವಾದಿ ಉದಯ ಹೊಳ್ಳರು ನೆರವೇರಿಸಲಿದ್ದು ,ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ವಿಶ್ರಾಂತ ಆಡಳಿತ ಧರ್ಮದರ್ಶಿ ಸೂರ್ಯ ನಾರಾಯಣ ಉಪಾಧ್ಯಾಯ ಶುಭಾಶಂಸನೆಗೈಯಲಿರುವರು.
ಸಾಲಿಗ್ರಾಮ ಪಟ್ಟಣ ಪಂಚಾಯತಿನ ಅಧ್ಯಕ್ಷೆ ಸುಕನ್ಯಾ ಶೆಟ್ಟಿ ಮತ್ತು ಕೂಟ ಮಹಾ ಜಗತ್ತಿನ ಕೇಂದ್ರ ಸಂಸ್ಥೆಯ ಅಧ್ಯಕ್ಷ ಎಚ್.ಸತೀಶ ಹಂದೆಯವರು ಅಭ್ಯಾಗತರಾಗಿ ಭಾಗವಹಿಸಲಿರುವ ಸಭಾ ಕಾರ್ಯಕ್ರಮದಲ್ಲಿ ಯಾತ್ರಿ ನಿವಾಸದ ಪ್ರಾಯೋಜಕರು ಮತ್ತು ದಾನಿಗಳನ್ನು ಗೌರವಿಸಲಾಗುವುದೆಂದು ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಕೆ.ಎಸ್.ಕಾರಂತ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಆಮಂತ್ರಣ ಬಿಡುಗಡೆ

ಈ ಸಂಬಂಧದ ಅಧಿಕೃತ ಆಮಂತ್ರಣ ಪತ್ರಿಕೆಯನ್ನು ಸಾಮೂಹಿಕ ಫಲ ಪ್ರಾರ್ಥನೆಯೊಂದಿಗೆ ಉಭಯ ದೇವರ ಸನ್ನಿಧಿಯಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಕೆ.ಎಸ್.ಕಾರಂತ ಬಿಡುಗಡೆ ಮಾಡಿದರು ಈ ಸಂದರ್ಭದಲ್ಲಿ ದೇಗುಲ ಆಡಳಿತ ಮಂಡಳಿಯ ಕಾರ್ಯದರ್ಶಿ ಲಕ್ಷ್ಮೀ ನಾರಾಯಣ ತುಂಗ,ಕೋಶಾಧಿಕಾರಿ ಪರಶುರಾಮ ಭಟ್ಟ, ಪೂರ್ವಾಧ್ಯಕ್ಷ ಎ.ಜಗದೀಶ ಕಾರಂತ, ಜಗತ್ತಿನ ಪ್ರಧಾನ ಕಾರ್ಯದರ್ಶಿ ಸುರೇಶ ತುಂಗ, ಕೃಷ್ಣ ಹೆಬ್ಬಾರ, ಅಂಗಸಂಸ್ಥೆಯ ಅಧ್ಯಕ್ಷ ಪಿ.ಸಿ.ಹೊಳ್ಳ, ಮಹಾಬಲ ಹೇರ್ಳೆ, ಗೆಳೆಯರ ಬಳಗ ತಾರಾನಾಥ ಹೊಳ್ಳ, ಮಂಜುನಾಥ ಉಪಾಧ್ಯ, ಗ್ರಾಮ ಮೊಕ್ತೇಸರ ,ರಾಜೇಶ ಉಪಾಧ್ಯ, ಅರ್ಚಕ ವೃಂದ,ಸಿಬ್ಬAದಿ, ಗ್ರಾಮ ಮೊಕ್ತೇಸರರು ಮತ್ತು ಊರ ಪರವೂರ ಹತ್ತು ಸಮಸ್ತರು ಉಪಸ್ಥಿತರಿದ್ದರು

 

Related Articles

error: Content is protected !!