241
ಕುಂದಾಪುರ : ನಗರದ ಚಿಕ್ಕನಸಾಲು ರಸ್ತೆಯ ರೋಯಲ್ ಸಭಾ ಭವನದ ಬಳಿಯ ಶ್ರೀ ನಾಗಬೊಬ್ಬರ್ಯ ಹಾಗೂ ಹೈಗುಳಿ ಪರಿವಾರ ದೇವಸ್ಥಾನದ ದಶಮನೋತ್ಸವ ಕಾರ್ಯಕ್ರಮದ ಅಂಗವಾಗಿ ಅಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಜರುಗಲಿದೆ
ಇಂದು ಆದಿತ್ಯವಾರ ಬೆಳಿಗ್ಗೆ 10.00 ಗಂಟೆಗೆ ರೋಯಲ್ ಸಭಾಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ದಶಮಾನೋತ್ಸವ ಸಮಿತಿಯ ಅಧ್ಯಕ್ಷರಾದ ಯು. ರಾಧಾಕೃಷ್ಣರವರು ಅಧ್ಯಕ್ಷತೆ ವಹಿಸಲಿದ್ದುಉದ್ಘಾಟಕರಾಗಿ ಕುಂದಾಪುರ ಸರಕಾರಿ ಆಸ್ಪತ್ರೆಯ ಖ್ಯಾತ ವೈದ್ಯಾಧಿಕಾರಿಗಳಾದ ಡಾ. ನಾಗೇಶ್ ಆಗಮಿಸಲಿದ್ದು ಮುಖ್ಯ ಅತಿಥಿಗಳಾಗಿ ಶ್ರೀ ಕುಂದೇಶ್ವರ ದೇಗುಲದ ಮಾಜಿ ಮೋಕ್ತೇಸರರು ಹಾಗೂ ರಾಣುಮಕ್ಕಿ ಶ್ರೀ ನಾಗಬೊಬ್ಬರ್ಯ ಬನದ ಅಧ್ಯಕ್ಷರಾದ ಕೆ ಆರ್ ಉಮೇಶ್ ರಾವ್ ಮತ್ತು ಶ್ರೀ ಮೈಲಾರೇಶ್ವರ ಯುವಕ ಮಂಡಲದ ಅಧ್ಯಕ್ಷರಾದ ಶರತ್ ಕುಮಾರ್ ಹಾಗೂ ರೋಯಲ್ ಕ್ಲಬ್ ಇದರ ಅಧ್ಯಕ್ಷರಾದ ಕೆ. ನಿತ್ಯಾನಂದ ರವರು ಭಾಗವಹಿಸಲಿದ್ದಾರೆಂದು ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಮೊಗವೀರ ರವರು ತಿಳಿಸಿದ್ದಾರೆ

