ಕುಂದಾಪುರ :ನಿನ್ನೆ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ಶ್ರೀ ಶಾಂತಾರಾಮ ರಂಗಮಂಟಪದಲ್ಲಿ ನೂತನವಾದ ಶ್ರೀ ಕೋಟಿಲಿಂಗೇಶ್ವರ ಕ್ಷೇತ್ರ ಮಹಾತ್ಮೆ ಎಂಬ ಯಕ್ಷಗಾನ ಪ್ರಸಂಗವನ್ನು ತಂತ್ರಿಗಳಾದ ಶ್ರೀ ಪ್ರಸನ್ನ ಕುಮಾರ್ ಐತಾಳರು ಬಿಡುಗಡೆಗೊಳಿಸಿದರು ಕುಂದಾಪುರದ ಶಾಸಕರಾದ ಶ್ರೀ ಕಿರಣ್ ಕುಮಾರ್ ಕೊಡ್ಗಿಯವರು ಉದ್ಘಾಟಿಸಿದ ಕಾರ್ಯಕ್ರಮದಲ್ಲಿ ದೇವಳದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಶ್ರೀ ಎಮ್.ಪ್ರಭಾಕರ ಶೆಟ್ಟಿಯವರು ಅಧ್ಯಕ್ಷತೆ ವಹಿಸಿದ್ದರು
ಮುಖ್ಯ ಅತಿಥಿಗಳಾಗಿ ಬೈಂದೂರು ಶಾಸಕ ಶ್ರೀ ಗುರುರಾಜ್ ಗಂಟಿಹೊಳೆ ಹಾಗೂ ಕೋಟೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ರಾಗಿಣಿ ಭಾಗವಹಿಸಿದ್ದರು ವಿದ್ವಾನ್ ಶ್ರೀ ಮಾಧವ ಅಡಿಗರು ಧರ್ಮ ಸಂದೇಶದ ಪ್ರವಚನ ನೀಡಿದರು
ಇದೇ ಸಂದರ್ಭದಲ್ಲಿ ಶ್ರೀ ಕೋಟಿಲಿಂಗೇಶ್ವರ ಕ್ಷೇತ್ರ ಮಹಾತ್ಮೆಯ ಪ್ರಸಂಗಕರ್ತರಾದ ಕೆ ಎಸ್ ಮಂಜನಾಥ ಶೇರೇಗಾರ್ರವರನ್ನು ಸನ್ಮಾನಿಸಲಾಯಿತು ಶಿವಾನಂದ ಕೋಟೇಶ್ವರ ನಿರೂಪಿಸಿದ ಕಾರ್ಯಕ್ರಮದಲ್ಲಿ ಚಂದ್ರಿಕಾ ಧನ್ಯ ಸ್ವಾಗತಿಸಿ ಸುರೇಶ್ ಬೆಟ್ಟಿನ್ ಪ್ರಸ್ತಾವನೆಗೈದರು ಭಾರತಿ ಧನ್ಯವಾದವಿತ್ತರು