ಕುಂದಾಪುರ : ನಗರದ ಇತಿಹಾಸ ಪ್ರಸಿದ್ಧ ಶ್ರೀ ಕುಂದೇಶ್ವರನ ಸನ್ನಿಧಿಯಲ್ಲಿ ಇಂದು ಲೋಕ ಕಲ್ಯಾಣಾರ್ಥವಾಗಿ ಕುಂದಾಪುರ ಹಾಗೂ ಬೈಂದೂರು ತಾಲೂಕಿನ ವಿಪ್ರೋತ್ತಮ ವೃಂದದವರಿಂದ ಸದ್ಯೋಜಾತಾಧಿ ಅಧಿವಾಸ ಯಾಗವು ಸೇವಾ ರೂಪದಲ್ಲಿ ಸಂಪನ್ನಗೊಳ್ಳಲಿದೆ. ನಿನ್ನೆ ಸಂಜೆ 4 ಗಂಟೆಯಿಂದ ಫಲ ಸಮರ್ಪಣೆ, ಗುರುಗಣಪತಿ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ ವಾಚನ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಪೂಜೆ ವಾಸ್ತು ಹೋಮ ಅಗ್ನಿ ಜನನ ಬ್ರಹ್ಮಕಲಶ ಸ್ಥಾಪನೆ ಅಷ್ಟಾವಧಾನ ಧಾರ್ಮಿಕ ಕಾರ್ಯಕ್ರಮಗಳು ಜರುಗಿತು
ಇಂದು ಸೋಮವಾರ ಪ್ರಾತಃಕಾಲ 6-30 ರಿಂದ ಸ್ವಸ್ತಿ ಪುಣ್ಯಾಹ ವಾಚನ ದೇವನಾಂದಿ ದ್ವಾದಶ ನಾರಿಕೇಳ ನವಗ್ರಹ ಹೋಮ, ಮಹಾಗಣಪತಿ ಹೋಮ, ಸಂಪೂರ್ಣ ನವಗ್ರಹ ಹೋಮ ಹಾಗೂ ದುರ್ಗಾಹೋಮ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ
ಸಂಜೆ 6- 30 ರಿಂದ ಸಾಲಿಗ್ರಾಮ ಮಕ್ಕಳ ಮೇಳ ಕೋಟ ಇವರಿಂದ ಹೆಚ್. ಶ್ರೀಧರ ಹಂದೆ ನಿರ್ಧೇಶನದಲ್ಲಿ ವೀರ ವೃಶಸೇನ ಯಕ್ಷಗಾನವು ಪ್ರದರ್ಶನಗೊಳ್ಳಲಿದೆ