102
ಕೋಟ : ಇಲ್ಲಿನ ಮಣೂರು ರಾಷ್ಟ್ರೀಯ ಹೆದ್ದಾರಿ ಸನಿಹದಲ್ಲಿರುವ ಪ್ರಸಿದ್ಧ ದೇಗುಲವಾದ ಶ್ರೀ ಮಹಾಲಿಂಗೇಶ್ವರ ಶ್ರೀ ಹೇರಂಬ ಮಹಾಗಣಪತಿ ದೇವಸ್ಥಾನ ವಾರ್ಷಿಕ ರಥೋತ್ಸವ,ಸಾಂಸ್ಕೃತಿಕ ಸಂಭ್ರಮ ಎ. 09 ರಿಂದ14ರ ತನಕ ನಡೆಯಲಿದೆ.
ಈ ಪ್ರಯುಕ್ತ ಎ.10 ಗುರುವಾರದಿಂದ ಮೊದಲ್ಗೊಂಡು 14ನೇ ಸೋಮವಾರದವರೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು ತಂತ್ರಿಗಳಾದ ಪವಿತ್ರಪಾಣಿ ಗಣೇಶ ಐತಾಳ ಪಾರಂಪಳ್ಳಿ ಇವರ ನೇತೃತ್ವದಲ್ಲಿ ಹಾಗೂ ವೇದಮೂರ್ತಿ ಶ್ರೀ ರಾಮ ಪ್ರಸಾದ ಗರಿಕೆಮಠ ಇವರ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆಯಲಿದೆ

