Home » ಪಾರಂಪಳ್ಳಿ ಆದಿಶಕ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ
 

ಪಾರಂಪಳ್ಳಿ ಆದಿಶಕ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ

by Kundapur Xpress
Spread the love

ಕೋಟ : ನವರಾತ್ರಿಯ ಈ ಶುಭ ಸಂದರ್ಭದಲ್ಲಿ ನಮ್ಮಲ್ಲಿ ಶಕ್ತಿ ಸಮೃದ್ಧಿ ಚೈತನ್ಯ ಹಾಗೂ ಜ್ಞಾನವನ್ನು ತುಂಬಿಸುವ ಶಕ್ತಿ ದೇವತೆಯಾದ ಕಾಳಿಕಾದೇವಿ ಲಕ್ಷ್ಮೀದೇವಿ ಹಾಗೂ ಸರಸ್ವತಿ ದೇವಿಯನ್ನು ನಾವು ಆರಾಧಿಸುವುದು ಶಾಸ್ತ್ರ ಸಮ್ಮತವಾಗಿದೆ

ಕಾಳಿಕಾದೇವಿಯು ನಮ್ಮೊಳಗಿನ ಕಾಮನೆಗಳೆಂಬ ಶತ್ರುವನ್ನು ಸಂಹರಿಸುವವಳಾದರೇ ಲಕ್ಷ್ಮಿದೇವಿಯು ನಮ್ಮ ಮನೆ-ಮನಗಳಲ್ಲಿ ಸಮೃದ್ಧಿಯನ್ನು ಉಂಟುಮಾಡುತ್ತಾಳೆ ಸರಸ್ವತಿ ದೇವಿಯು ನಮಗೆ ಅತೀ ಅಗತ್ಯವಾದ ಜ್ಞಾನ ಚಕ್ಷುವನ್ನು ನೀಡುತ್ತಾಳೆ ಆಕೆ ವಿದ್ಯಾದಾಯಿನಿಯೂ ಹೌದು ಜ್ಞಾನದ ಶಕ್ತಿ ಇಲ್ಲದಿದ್ದರೆ ನಾವು ಅಂಧಕಾರದಲ್ಲಿ ಕೊಳೆಯಬೇಕಾಗುತ್ತದೆ ನಮ್ಮ ಬದುಕು ಸುಂದರವು ಸಂತಸದಾಯಕವೂ ಆಗಿರಬೇಕಾದರೆ ನಾವು ಜ್ಞಾನವೇತ್ತರರಾಗಬೇಕು

ನಿಜವಾದ ಜ್ಞಾನವೆಂದರೆ ಆಧ್ಯಾತ್ಮಿಕ ಜ್ಞಾನ ಆ ಜ್ಞಾನವನ್ನು ನನಗೆ ಕರುಣಿಸಿದವಳು ಆದಿಶಕ್ತಿ ಶ್ರೀ ದುರ್ಗಾಪರಮೇಶ್ವರೀ ದೇವಿ ಎಂದು ಕೃಷ್ಣ ಸ್ವಾಮಿಯವರು ತಿಳಿಸಿದರು

ಆದಿಶಕ್ತಿ ಶ್ರೀ ದುರ್ಗಾಪರಮೇಶ್ವರೀ ದೇವಿಗಾಗಿ ಮನೆಯ ಸಮೀಪದಲ್ಲೇ ಸುಂದರ ಗುಡಿಯೊಂದನ್ನು ನಿರ್ಮಿಸಿ ಪ್ರತಿನಿತ್ಯ ವಿವಿಧ ಅಲಂಕಾರಗಳೊಂದಿಗೆ ವಿವಿಧ ಪೂಜೆಗಳನ್ನು ನೆರವೇರಿಸುತ್ತಿದ್ದೇನೆ

ನವರಾತ್ರಿಯ ಈ ಶುಭ ಸಂದರ್ಭದಲ್ಲಿ ವಿವಿಧ ರೀತಿಯ ಅಲಂಕಾರ ಹೋಮ ಹವನಾದಿಗಳೊಂದಿಗೆ ನವರಾತ್ರಿಯ 9ನೇ ದಿನದಂದು ವಿಶೇಷವಾದ ರಾಶಿ ಪೂಜೆಯನ್ನು ನೆರವೇರಿಸಲಾಗುವುದು ಈ ದಿನದಂದು 9 ಬಗೆಯ ವಿವಿಧ ತಿಂಡಿಯ ನೈವೇದ್ಯಗಳನ್ನು ಶ್ರೀ ದೇವಿಗೆ ಅರ್ಪಿಸಿ ನಂತರ ಪ್ರಸಾದ ರೂಪದಲ್ಲಿ ಭಕ್ತಾದಿಗಳಿಗೆ ವಿತರಿಸಲಾಗುವುದು ಎಂದು ದೇವಳದ ಧರ್ಮದರ್ಶಿಗಳಾದ ಕೃಷ್ಣ ಪಾತ್ರಿಯವರು ತಿಳಿಸಿದ್ದಾರೆ

   

Related Articles

error: Content is protected !!