ಉಡುಪಿ : ಉಡುಪಿ ಶ್ರೀ ಪುತ್ತಿಗೆ ಮಠದಲ್ಲಿ ಶ್ರೀಶ್ರೀ ಸುಗುಣೇಂದ್ರ ತೀರ್ಥರ ಸಮಕ್ಷಮದಲ್ಲಿ ಉಡುಪಿ ಜಿಲ್ಲಾಧಿಕಾರಿ ಶ್ರಿಮತಿ Dr. ವಿದ್ಯಾಕುಮಾರಿ, SP ಶ್ರೀ ಅರುಣ್
ಹಾಗೂ CEO ಶ್ರೀ ಪ್ರಸನ್ನ ರವರು ಪರ್ಯಾಯ ಪೂರ್ವಸಿದ್ಧತೆ ಗೆ ಸರ್ಕಾರದಿಂದ ಕೈಗೊಳ್ಳುವ ಕರ್ತವ್ಯ ಗಳ ಬಗ್ಗೆ ಚರ್ಚಿಸಿದರು.
ಶ್ರೀಶ್ರೀಗಳವರು ಪರ್ಯಾಯೋತ್ಸವಕ್ಕೆ ಬರುವ ಹೊರ ದೇಶದ ಗಣ್ಯರಿಗೆ, ಭಕ್ತಾದಿಗಳಿಗೆ ಸರ್ಕಾರದಿಂದ ಸೂಕ್ತ ರಕ್ಷಣೆ , ಸಕಲ ಸೌಲಭ್ಯ ಗಳನ್ನೂ ಕಲ್ಪಿಸುವ ಮೂಲಕ ಶ್ರೀ ಕೃಷ್ಣನ ಸೇವೆ ಮಾಡಿ. ಭಗವಂತನ ಅನುಗ್ರಹಕ್ಕೆ ಪಾತ್ರರಾಗಿ ಎಂದು ತಿಳಿಸಿ
ಕೋಟಿ ಗೀತಾಲೇಖನ ದೀಕ್ಷೆ ನೀಡುವ ಮೂಲಕ ಅನುಗ್ರಹ ಮಂತ್ರಾಕ್ಷತೆ ನೀಡಿದರು. ಸಮಿತಿಯ ಕಾರ್ಯಾಧ್ಯಕ್ಷ ರಾದ ಶ್ರೀ ರಘುಪತಿ ಭಟ್, ಮಠದ ದಿವಾನರಾದ ಶ್ರೀ ನಾಗರಾಜ ಆಚಾರ್ಯ, ಕೋಶಾಧಿಕಾರಿ ಶ್ರೀ ರಂಜನ್ ಕಲ್ಕೂರ, ಸಹ ಸಂಚಾಲಕರಾದ ರಮೇಶ್ ಭಟ್ ಕೆ , ಶ್ರೀ ಹರಿಕೃಷ್ಣ ಶಿವಾತ್ತಾಯ, ಶ್ರೀ ರವಿಂದ್ರ ಆಚಾರ್ಯ ಉಪಸ್ಥಿತರಿದ್ದರು