ಉಡುಪಿ : ಪರ್ಯಾಯ ಶ್ರೀಪುತ್ತಿಗೆ ಶ್ರೀ ಕೃಷ್ಣ ಮಠಾಧೀಶರಾದ ಪರಮ ಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಪೀಠಾರೋಹಣದ ಸುವರ್ಣ ಮಹೋತ್ಸವದ ಅಂಗವಾಗಿ ಅಮೆರಿಕಾದ ಹುಸ್ಟೋನ್ ಮಹಾನಗರದಲ್ಲಿರುವ ಶ್ರೀಪುತ್ತಿಗೆ ಮಠದ ಶಿಷ್ಯರಿಂದ ಭಕ್ತರ ಸಹಕಾರದ ಜೊತೆಗೆ ಬೃಹತೀ ಸಹಸ್ರ ಯಾಗ ಸಂಪನ್ನಗೊಂಡಿತು . ವಿದೇಶ ಗಳಲ್ಲಿ ಭಾರತೀಯ ಗೋತಳಿಯನ್ನು ರಕ್ಷಿಸುವ ಮತ್ತು ಬೆಳೆಸುವ ಉದ್ದೇಶದಿಂದ ನಿರ್ಮಾಣವಾದ ವಿಶಾಲವಾದ ಗೋಶಾಲೆಯ ಆವರಣದಲ್ಲಿ ಈ ಯಾಗ ಸoಪನ್ನಗೊಂಡಿದೆ
ಸುಮಾರು ಒಂದು ಸಾವಿರಕ್ಕೂ ಮಿಕ್ಕಿ ಭಕ್ತರು ಶ್ರದ್ದಾ ಭಕ್ತಿಗಳೊಂದಿಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು . ಟೆಕ್ಸಾಸ್ ಗೋ ಶಾಲಾ ಮತ್ತು ಗೀತಾ ಚಿಂತನ ಸಭಾ ರವರಿಂದ ಈ ಕಾರ್ಯಕ್ರಮ ಆಯೋಜಿತವಾಗಿತ್ತು. ಕಾರ್ಯಕ್ರಮದ ಉಸ್ತುವಾರಿ ಯನ್ನು ಹೂಸ್ಟನ್ ಶ್ರೀ ಪುತ್ತಿಗೆ ಮಠದ ಹೂಸ್ಟನ್ ಶಾಖೆಯ ಪ್ರಧಾನ ಅರ್ಚಕ ಶ್ರೀ ರಘುರಾಂ ಭಟ್ ನಿರ್ವಹಿಸಿದ್ದರು .ಶ್ರೀ ಮಠದ ವಿದೇಶಿ ಶಾಖೆಗಳ ಪ್ರಧಾನ ಕಾಯದರ್ಶಿ ಶ್ರೀಪ್ರಸನ್ನಾಚಾರ್ಯ ಉಪಸ್ಥಿತರಿದ್ದರು ವೇದಮೂರ್ತಿ ಶ್ರೀ ಅತ್ತೂರ್ ರವೀಂದ್ರ ಭಟ್ ರವರ ಮಾರ್ಗದರ್ಶನದಲ್ಲಿ ನಡೆದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀ ವಾದಿರಾಜ್ ಭಟ್ , ಶ್ರೀ ಅವಿನಾಶ್ ಭಟ್ ಮತ್ತು ತ್ರಿವಿಕ್ರಮ ಭಟ್ ರವರು ಯಾಜಕರಾಗಿ ಸಹಕರಿಸಿದರು.ಸಾಂಪ್ರದಾಯಿಕ ಅರಣಿ ಮಥನ ಕಾರ್ಯಕ್ರಮದೊಂದಿಗೆ ಅಗ್ನಿಜನನ ಮಾಡಲಾಯಿತು. ಗೋಶಾಲೆಯ ದೇಶೀ ದನಗಳ ಗೋಮಯದಿಂದಲೇ ಯಜ್ಞವೇದಿಕೆಯನ್ನು ಸರಿಸಲಾಗಿತ್ತು
ಪೂಜ್ಯ ಶ್ರೀಪಾದರ ಪೀಠಾರೋಹಣ ಸುವರ್ಣ ಮಹೋತ್ಸವದ ಪ್ರಾರಂಭವು ಉಡುಪಿಯಲ್ಲಿ ಮತ್ತು ವಿದೇಶದಲ್ಲಿಯೂ ಸಮಾನ ದಿನದಂದು ವೈಭವದಿಂದ ಆಚರಣೆ ಗೊಂಡದ್ದು ವಿಶೇಷವಾಗಿತ್ತು.