ಉಡುಪಿ : ಪರ್ಯಾಯ ಪುತ್ತಿಗೆ ಶ್ರೀಗಳ ಆದೇಶಾನುಸಾರ ಸುಮಾರು 15 ದಿನಗಳಿಂದ ನಡೆಯುತ್ತಿದ್ದ ವಸಂತ ಧಾರ್ಮಿಕ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶ್ರೀಗಳವರು ಯಾವುದೇ ವಿದ್ಯೆ ಕಲಿತರೂ, ಯಾವುದೇ ಉದ್ಯೋಗ ಮಾಡುತ್ತಿದ್ದರೂ ಆಧ್ಯಾತ್ಮಿಕ ವಿದ್ಯೆಯಿಂದ ಸದಾಚಾರ ಮೂಲಕ ಸಜ್ಜನಿಕೆಯುಳ್ಳ ನಾಗರೀಕರಾಗಿ ಭಾರತೀಯ ಸಂಸ್ಕೃತಿಯನ್ನು ಉಳಿಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆದು ಭಾರತೀಯ ಪ್ರಜೆಗಳಾಗಿ ಎಂದು ಅನುಗ್ರಹಿಸಿದರು. ಕಿರಿಯ ಶ್ರೀಗಳವರು ಶ್ರೀ ಶ್ರೀ ಸುಧೀಂದ್ರ ತೀರ್ಥರು ಶಿಬಿರದಲ್ಲಿ ಕಲಿತ ವಿದ್ಯೆ ಯಾವತ್ತೂ ಅಚ್ಚಳಿಯದೆ ಉಳಿಯುವುದು ತನ್ಮೂಲಕ ಪ್ರತಿ ಧಾರ್ಮಿಕ ಶಿಬಿರಗಳಲ್ಲಿ ಭಾಗವಹಿಸಿ ಆತ್ಮೊದ್ದಾರ ಚಿಂತನೆಗಳು ನಿಮ್ಮಲ್ಲಿ ಬೆಳೆಯಲಿ ಎಂದು ಹರಸಿದರು
ಪುತ್ತಿಗೆ ವಿದ್ಯಾಪೀಠ ಹಾಗು ಪುತ್ತಿಗೆ ಮಠದಲ್ಲಿ ನಡೆದ ಶಿಬಿರದಲ್ಲಿ ಸುಮಾರು 150.ಕ್ಕೂ ಮಕ್ಕಳು ಭಾಗವಹಿಸಿ ತಾವು ಕಲಿತ ವಿದ್ಯೆಗಳನ್ನು ಗುರುಗಳಿಗೆ ಒಪ್ಪಿಸಿದ್ದರು. ಶ್ರೀ ಶ್ರೀ ಗಳದ್ವಯರು ಎಲ್ಲ ಶಿಬಿರಾರ್ಥಿಗಳಿಗೆ ಹಾಗೂ ಸಂಪನ್ಮೂಲ ಶಿಕ್ಷಕರಿಗೆ ಬಹುಮಾನ ಹಾಗೂ ಪ್ರಮಾಣಪತ್ರ ಗಳನ್ನು ನೀಡಿದರು. ಶ್ರೀ ಮಠದ ದಿವಾನರಾದ ಶ್ರೀ ನಾಗರಾಜ ಆಚಾರ್ಯ ಪ್ರಮೋದ್ ಸಾಗರ್ , ಶ್ರೀಮಹಿತೋಷ್ ಆಚಾರ್ಯರು ,ಶ್ರೀ ಯೋಗೀಂದ್ರ ಭಟ್ ಉಪಸ್ಥಿತರಿದ್ದರು. ಶ್ರೀ ರಮೇಶ್ ಭಟ್ ಕೆ ಕಾರ್ಯಕ್ರಮವನ್ನು ನಿರೂಪಿಸಿದ್ದರು.