ಅಯೋಧ್ಯೆ: ರಾಮ ಮಂದಿರದ ಪ್ರತಿಷ್ಠಾಪನೆ ಸಮಾರಂಭಕ್ಕೆ ಕ್ಷಣಗಣನೆ ನಡೆದಿರುವಾಗಲೇ ಅಯೋಧ್ಯೆಯ ನಗರದ ಬೀದಿಗಳು ಕೇಸರಿ ಬಣ್ಣಕ್ಕೆ ತಿರುಗಿವೆ ದೇವಾಲಯದ ಪಟ್ಟಣದಾದ್ಯಂತ ಸಣ್ಣ ಮತ್ತು ದೊಡ್ಡ ಕಟ್ಟಡಗಳ ಮೇಲೆ ಕೇಸರಿ ಧ್ವಜಗಳು ಹಾರಾಡುತ್ತಿವೆ.
ಇತ್ತೀಚಿನ ಶತಮಾನಗಳಲ್ಲೇ ಕಂಡು ಕೇಳರಿಯದ ಈ ಕಾರ್ಯಕ್ರಮದಲ್ಲಿ ಪ್ರಧಾನಿಯಾದಿಯಾಗಿ ರಾಜಕೀಯ, ಧಾರ್ಮಿಕ, ಉದ್ಯಮ, ಚಿತ್ರರಂಗ, ಕ್ರೀಡಾಪಟುಗಳು, ಸಾಮಾಜಿಕ ಕಾರಕರ್ತರು, ವಿದೇಶಿ ಗಣ್ಯರು ಭಾಗಿಯಾಗುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಭಾರೀ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಮತ್ತೊಂದೆಡೆ ಕಾರ್ಯಕ್ರಮಕ್ಕೆ ಆಹ್ವಾನ ಪಡೆದ ಗಣ್ಯರ ಪೈಕಿ ಒಂದಷ್ಟು ಜನ ಭಾನುವಾರವೇ ರಾಮನ ನಗರಿಗೆ ಆಗಮಿಸಿದ್ದರೆ, ಉಳಿದವರು ತವರು ರಾಜ್ಯಗಳಿಂದ ಅಯೋಧ್ಯೆಯತ್ತ ಪ್ರಯಾಣ ಬೆಳೆಸಿದ್ದಾರೆ