Home » ನಮ್‌ ಕುಂದಾಪ್ರ : ಶ್ರೀ ಕುಂದೇಶ್ವರ ಲಕ್ಷ ದೀಪೋತ್ಸವ
 

ನಮ್‌ ಕುಂದಾಪ್ರ : ಶ್ರೀ ಕುಂದೇಶ್ವರ ಲಕ್ಷ ದೀಪೋತ್ಸವ

by Kundapur Xpress
Spread the love

ಭೋರ್ಗರೆವ ಅರಬೀ ಸಮುದ್ರ ಒಂದೆಡೆಯಾದರೆ ಮತ್ತೊಂದೆಡೆ ಹಸಿರು ವನರಾಜಿಗಳಿಂದ ನಿತ್ಯೋತ್ಸವ ನಡೆಸುವ ಕೊಡಚಾದ್ರಿಯ ಸೆರಗು ನೆಲದ ಕಾವನ್ನು ತಣಿಸಲು ಸಹ್ಯಾದ್ರಿಯ ಒಡಲಿನಿಂದ ಧುಮ್ಮಿಕ್ಕಿ ಹರಿದು ಬಂದು ಸಮುದ್ರ ರಾಜನನ್ನು ತಬ್ಬಿಕೊಳ್ಳಲು ತವಕಿಸುವ ಹತ್ತಾರು ನದಿಗಳ ಲಕ ಲಕ ಲಾಸ್ಯ ಅತ್ತ ಪ್ರಶಾಂತವಾಗಿ ಹರಿಯುವ ಸೌಪರ್ಣಿಕ ನದಿ ಇತ್ತ ಧುಮ್ಮಿಕ್ಕಿ ಹರಿಯುವ ಅರಬ್ಬಿ ಸಮುದ್ರ ಇವೆರಡನ್ನು ಸೀಳಿಕೊಂಡು ಹೋಗುವ ರಾಷ್ಟ್ರೀಯ ಹೆದ್ದಾರಿ – 66 ಅದುವೇ ಕುಂದಾಪುರದ ಮರವಂತೆ

ಹೀಗೆ ಕುಂದಾಪುರದ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಸಾಹಿತಿಗಳ ಗಡಣದ ತಂಗುದಾಣ, ಕರ್ನಾಟಕದ ಹೆಮ್ಮೆಯ ಕಲೆಗಳಾದ ಯಕ್ಷಗಾನ ನಾಗಮಂಡಲ, ಗೊಂಬೆಯಾಟಗಳ ನೆಲೆಬೀಡು, ದೇಶದ ಆರ್ಥಿಕ ನೆಲಗಟ್ಟನ್ನು ಭದ್ರಗೊಳಿಸುವ ಅಡಿಕೆ ತೆಂಗು ಗೇರುಬೀಜ ಹಂಚಿನ ಕಾರ್ಖಾನೆ ದೊಡ್ಡ ದೊಡ್ಡ ಮಾಲ್‌ಗಳು ಪ್ರವಾಸಿಗರ ಮನ ತಣಿಸುವಂತಹ ವಿವಿಧ ರೀತಿಯ ಖಾದ್ಯಗಳ ಸ್ಟಾರ್‌ ಹೊಟೇಲ್‌ಗಳು  ಇಂತಹ ಹಲವಾರು ಉದ್ಯಮಗಳ ಕೇಂದ್ರ ಸ್ಥಾನವೇ ಕುಂದಾಪುರ

ಮೋಕ್ಷದಾಯಕ ಸಪ್ತ ಕ್ಷೇತ್ರಗಳಲ್ಲಿ ಪ್ರಮುಖವಾದ ಕುಂಭಾಶಿ, ಕೋಟೇಶ್ವರ ಶಂಕರನಾರಾಯಣ ಮತ್ತು ಕೊಲ್ಲೂರು ನಾಲ್ಕು ಕ್ಷೇತ್ರಗಳ ಸಂಗಮಸ್ಥಾನ, ಎಲ್ಲಕ್ಕಿಂತ ಹೆಚ್ಚಾಗಿ ಈ ನೆಲದ ಸೊಗಸನ್ನು ಪ್ರತಿಬಿಂಬಿಸುವ ಚಂದದ ಕುಂದಗನ್ನಡದ ಭಾಷೆ ಅದುವೇ ಕುಂದಾಪ್ರ ಕನ್ನಡ

ನಮ್ಮೂರ ಅಧಿದೇವತೆ ಶ್ರೀ ಕುಂದೇಶ್ವರ

ಪೋರ್ಚುಗೀಸರು ಕುಂದಾಪುರಕ್ಕೆ ಕಾಲಿಡುವ ಮೊದಲು ಕುಂದಾಪುರ ಎಂಬ ಪ್ರದೇಶವು ಕುಂದವರ್ಮನೆಂಬ ತುಂಡರಸನ ಅಧಿಪತ್ಯಕ್ಕೆ ಸೇರಿತ್ತು ಆತ ತುಂಬಾ ಶಿವಭಕ್ತನಾಗಿದ್ದ ಕುಂದೇಶ್ವರ ಅವನ ಮನೆ ದೇವರು ಇಂದಿನ ಕುಂದೇಶ್ವರ ಆತನ ಸೃಷ್ಟಿ ಎಂದು ಇತಿಹಾಸ ಹೇಳುತ್ತಿದೆ

ಕುಂದವರ್ಮನಿಂದಲೇ ಈ ಊರಿಗೆ ಕುಂದಾಪುರ ಎಂಬ ಹೆಸರು ಬಂತು ಅಂದು ಶಿಥಿಲಾವಸ್ಥೆಯಲ್ಲಿದ್ದ ಈ ದೇವಸ್ಥಾನ ಇಂದು ಹಂತ ಹಂತವಾಗಿ ಜೀರ್ಣೋದ್ಧಾರಗೊಂಡು ಪ್ರಸ್ತುತ ದೇವಾಲಯವು ಅಪೂರ್ವ ಅಭಿವೃದ್ಧಿಯನ್ನು ಕಂಡಿದ್ದು ಕುಂದಾಪುರದ ಮುಕುಟ ಕೀರೀಟಕ್ಕೊಂದು ಹೊನ್ನ ಕಳಶವಾಗಿದೆ

ಇಂದು ಕುಂದೇಶ್ವರ ದೀಪೋತ್ಸವ ಹಾಗೂ ರಥೋತ್ಸವದ ಇದರ ನಿಮಿತ್ತ ಊರ ಪರ ಊರ ಭಕ್ತರ ಸಡಗರ ಸಂಭ್ರಮದ ಸಂಗಮ ದೇವಾಲಯದಲ್ಲಿ ಬೆಳಿಗ್ಗೆಯಿಂದಲೇ ಧಾರ್ಮಿಕ ಕಾರ್ಯಕ್ರಮಗಳಿಂದ ಪ್ರಾರಂಭಗೊಂಡು ಸಂಜೆಯಾಗುತ್ತಲೆ ಸಹಸ್ರಾರು  ಹಣತೆಗಳ ಲಕ್ಷದೀಪೋತ್ಸವವು ಸಂಪನ್ನಗೊಳ್ಳಲಿದೆ

ಈಗಾಗಲೇ ದೇವಸ್ಥಾನ ಮತ್ತು ಕುಂದಾಪುರ ನಗರವನ್ನು ವಿದ್ಯುತ್‌ ದೀಪಗಳಿಂದ ಅಲಂಕೃತಗೊಂಡು ಅಲ್ಲಲ್ಲಿ ರಂಗೋಲಿಗಳ ಮೂಲಕ ಶ್ರಂಗರಿಸಲಾಗಿದೆ ಬೇರೆ ಊರಿನ ಜಾತ್ರೆಗಳಿಗೆ ಕಡಿಮಯಿಲ್ಲವೆನ್ನುವಂತೆ ನಗರದ ಹಲವು ಕಡೆಗಳಲ್ಲಿ ತೊಟ್ಟಿಲುಗಳ ಆಟಗಳೊಂದಿಗೆ ಡ್ರ್ಯಾಗನ್‌ ಗನ್‌ ಶೂಟ್‌ ರೈಲು ಬಂಡಿ ಹಾಗೂ ಕುದುರೆ ಗಾಡಿಯ ವಿವಿಧ ರೀತಿಯ ಮನೋರಂಜನಾತ್ಮಕ  ಆಟಗಳು ಈಗಾಗಲೇ ನೆಲೆಯೂರಿದೆ

ಕುಂದೇಶ್ವರ ದೇವಸ್ಥಾನಕ್ಕೆ ನೂತನ ವ್ಯವಸ್ಥಾಪನ ಸಮಿತಿ ರಚನೆಯಾಗಿದ್ದು ವಾಸುದೇವ ಯಡಿಯಾಳ್‌ ಸತೀಶ್‌ ಗಾಣಿಗ ನಾಗರಾಜ್‌ ನಾಯ್ಕ್‌ ವಿಠಲ್‌ ಕಾಂಚನ್  ಗಣಪತಿ ಎಸ್‌ ಭಟ್‌  ದಿನೇಶ್‌ ‌ ಶ್ರೀಮತಿ ಗಿರಿಜಾ.ಯು ಶ್ರೀಮತಿ ಸೀಮಾಚಂದ್ರರವರು ಸದಸ್ಯರಾಗಿದ್ದಾರೆ

ಊರ-ಪರವೂರ ಭಕ್ತರ ನೇತೃತ್ವದಲ್ಲಿ ದೇವಸ್ಥಾನವು ಆಭಿವೃದ್ಧಿಯ ಪಥದಲ್ಲಿ ಸಾಗುತ್ತಿದ್ದು ಶ್ರೀ ಕುಂದೇಶ್ವರನು ತನ್ನ ನಂಬಿದ ಭಕ್ತರ ಸಕಲ ಇಷ್ಟಾರ್ಥಗಳನ್ನು ಈಡೇರಿಸುತ್ತಿದ್ದಾನೆ

ಸರ್ವರಿಗೂ ಶ್ರೀ ಕುಂದೇಶ್ವರ ಲಕ್ಷದೀಪೋತ್ಸವದ

ಹಾರ್ದಿಕ ಶುಭಾಶಯಗಳು

ಕೆ ಗಣೇಶ್‌ ಹೆಗ್ಡೆ ಕುಂದಾಪುರ

 

Related Articles

error: Content is protected !!