ಕರ್ನಾಟಕ ಸರಕಾರ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನವು ಪುಷ್ಪಪವಾಡ ಕ್ಷೇತ್ರವೆಂದೇ ಪ್ರಸಿದ್ದಿಯಾಗಿದ್ದು ಇಂದು ಶ್ರೀ ಮನ್ಮಹಾರಥೋತ್ಸವ ನಡೆಯಲಿದೆ
ರಾತ್ರಿ ಸಿಂಹವಾಹನೋತ್ಸವ ಹಾಗೂ ಸೇವೆಆಟ ನಡೆಯಲಿದೆ
ಫೆ.17ರಂದು ಶುಕ್ರವಾರ ಚೂರ್ಣೋತ್ಸವ ಹಾಗೂ ಸೇವೆಆಟವಿದೆ
ಫೆ.18ರಂದು ಅವಭೃತ ಧ್ವಜಾವರೋಹಣಾದಿಗಳು ನಡೆಯಲಿದೆ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಿಗೆ ಭಕ್ತರು ಆಗಮಿಸಿ ತ್ರಿಶಕ್ತಿ ಸ್ವರೂಪಿಣಿಯಾದ ಶ್ರೀ ದುರ್ಗಾಪರಮೇಶ್ವರೀ ದೇವಿಯ ಪರಮಾನುಗ್ರಹಕ್ಕೆ ಪಾತ್ರರಾಗಬೇಕೆಂದು ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಸಬ್ಲಾಡಿ ಎನ್ ಮಂಜಯ್ಯ ಶೆಟ್ಟಿಯವರು ವಿನಂತಿಸಿಕೊಂಡಿದ್ದಾರೆ
ಶ್ರೀ ಕ್ಷೇತ್ರದಲ್ಲಿ ಪ್ರತಿ ಸಂಕ್ರಮಣ ದಿನ ಮಧ್ಯಾಹ್ನ 12.00ಗಂಟೆಗೆ ಸರಿಯಾಗಿ ಶ್ರೀ ವೀರಭದ್ರ ದೇವರ ದರ್ಶನ ಸೇವೆ ನಡೆಯಲಿದೆ