258
ಉಡುಪಿ : ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ತನ್ನ ಶಿಷ್ಯ ಶ್ರೀ ಸುಶೀಂದ್ರ ತೀರ್ಥರೊಂದಿಗೆ ಭಾರತ ಪರಿಕ್ರಮ ಯಾತ್ರೆ ಅಡಿಯಲ್ಲಿ ಪರ್ಯಾಯ ಪೂರ್ವ ಸಂಚಾರದ ನಿಮಿತ್ತ ನಿನ್ನೆ ಆದಿತ್ಯವಾರ ಇತಿಹಾಸ ಪ್ರಸಿದ್ಧ ಪವಿತ್ರ ಸ್ಥಳವಾದ ಪುಣ್ಯಭೂಮಿ ನೈಮಿಷಾರಣ್ಯಕ್ಕೆ ಅನೇಕ ಭಕ್ತರೊಡನೆ ಭೇಟಿ ನೀಡಿದರು

ಅಮಾವಾಸ್ಯಾ ಪರ್ವ ದಿನದ ಪ್ರಯುಕ್ತ ಲಕ್ಷಾಂತರ ಜನ ಸೇರಿರುವ ಇಲ್ಲಿ ಭಕ್ತರೊಡನೆ ಸೇರಿಕೊಂಡು ಚಕ್ರತೀರ್ಥ ಸ್ನಾನ ಮಾಡಿ ಪವಿತ್ರವಾದ ವ್ಯಾಸ ಗುಡ್ಡೆ ಜಾಗವನ್ನು ಸಂದರ್ಶಿಸಿ , ಅಲ್ಲಿ ಭಾಗವತ , ಭಗವದ್ಗೀತೆಯ ಸಂದೇಶ ನೀಡಿ ವೇದವ್ಯಾಸರಿಗೆ ವಿಶೇಷಪೂಜೆ ಸಲ್ಲಿಸಿದರು ನಂತರ ಸ್ಥಳೀಯ ಭಕ್ತರಿಗೆ ಭಗವದ್ಗೀತಾ ಲೇಖನ ಯಜ್ಞದ ದೀಕ್ಷೆಯನ್ನು ನೀಡಲಾಯಿತು

