Home » ಶ್ರೀ ಸೀತಾರಾಮಚಂದ್ರ ದೇವಸ್ಥಾನ : ಧಾರ್ಮಿಕ ಕಾರ್ಯಕ್ರಮ
 

ಶ್ರೀ ಸೀತಾರಾಮಚಂದ್ರ ದೇವಸ್ಥಾನ : ಧಾರ್ಮಿಕ ಕಾರ್ಯಕ್ರಮ

by Kundapur Xpress
Spread the love

ಕುಂದಾಪುರ : ಕುಂದಾಪುರ ನಗರದ ಶ್ರೀ ಸೀತಾರಾಮಚಂದ್ರ ದೇವಸ್ಥಾನದ ನವೀಕೃತ ಶಿಲಾಮಯ ದ್ವಾರಮಂಟಪ ಹಾಗೂ ಗರ್ಭಗುಡಿಯ ರಜತ ಕವಚದ ಉದ್ಘಾಟನಾ ಸಮಾರಂಭವು ಇಂದು ಬುಧವಾರ 15ರಂದು ನಡೆಯಲಿದ್ದು ಪುರ್ವಭಾವಿಯಾಗಿ ಧಾರ್ಮಿಕ ಕಾರ್ಯಕ್ರಮಗಳು ಜರುಗಿತು

ದಿನಾಂಕ 13-01-2025ನೇ ಸೋಮವಾರ ರಾತ್ರಿ ಗಂಟೆ 7-00ಕ್ಕೆ ಶ್ರೀ ಸೀತಾರಾಮಚಂದ್ರ ದೇವಸ್ಥಾನದ ಶಿಲಾಮಯ ದ್ವಾರ ಮಂಟಪ ಹಾಗೂ ಶ್ರೀ ದೇವರ ಗರ್ಭಗುಡಿಯ ರಜತ ಕವಚದ ಸಮರ್ಪಣೆಯ ಪ್ರಯುಕ್ತ ವಾಸ್ತು ಪೂಜೆ  ವಾಸ್ತು ಮಂಡಲಕ್ಕೆ ಬಲಿ ರಾಕ್ಷೋಘ್ನ ಹೋಮ, ಸ್ಥಳ ಶುದ್ಧಿ, ಪ್ರಕಾರ ಶುದ್ಧಿ ಸ್ವಸ್ತಿ ಪುಣ್ಯಾಹವಾಚನ, ಬಲಿ ಪೂಜೆ ನಡೆದು ಪ್ರಸಾದ ವಿತರಿಸಲಾಯಿತು

ದಿನಾಂಕ 14-01-2025ನೇ ಮಂಗಳವಾರ ಮಕರ ಸಂಕ್ರಾಂತಿ ಪ್ರಯುಕ್ತ ಬೆಳಿಗ್ಗೆ ಗಂಟೆ 6-30ಕ್ಕೆ ಪವಮಾನ ಕಲಶ ಪೂಜೆ ಮತ್ತು ಪ್ರಸಾದ ವಿತರಣೆ ನಡೆದು ಸಂಜೆ ಗಂಟೆ 6.30 ಕ್ಕೆ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಿತು

ಇಂದು ಶ್ರೀ ಸೀತಾರಾಮಚಂದ್ರ ದೇವಸ್ಥಾನದ ನವೀಕೃತ ಶಿಲಾಮಯ ದ್ವಾರಮಂಟಪ ಹಾಗೂ ಗರ್ಭಗುಡಿಯ ರಜತ ಕವಚದ ಉದ್ಘಾಟನಾ ಸಮಾರಂಭವು ಶ್ರೀ ಶ್ರೀ ವಿಧುಶೇಖರಭಾರತೀ ಮಹಾಸ್ವಾಮಿಗಳ ಅಮೃತ ಹಸ್ತದಿಂದ ಉದ್ಘಾಟನೆಗೊಳ್ಳಲಿದ್ದು ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ

 

Related Articles

error: Content is protected !!