ಕುಂದಾಪುರ : ರಾಜ್ಯದಲ್ಲಿ ರಾಮಕ್ಷತ್ರಿಯ ಸಮಾಜ ವಿರಳ ಸಂಖ್ಯೆಯಲ್ಲಿದ್ದರೂ ಕಷ್ಟಪಟ್ಟು ಮೇಲೆ ಬಂದ ಸಮಾಜ ಅಂತರಾಜ್ಯ ಮಟ್ಟದ ಕ್ರೀಡಾಕೂಟವನ್ನು ಆಯೋಜಿಸುವ ಮೂಲಕ ಸಮಾಜವನ್ನು ಒಗ್ಗೂಡಿಸಲು ಸಾಧ್ಯವಿದೆ ಎಂದು ತೋರಿಸಿಕೊಟ್ಟ ಕುಂದಾಪುರದ ರಾಮಕ್ಷತ್ರಿಯ ಯುವಕ ಮಂಡಳಿಯ ಕಾರ್ಯ ನಿಜಕ್ಕೂ ಅಭಿನಂದನೀಯವಾಗಿದ್ದು ಈ ದಿನವನ್ನು ಸುವರ್ಣಾಕ್ಷರಗಳಲ್ಲಿ ಬರೆದಿಡುವ ದಿನವೆಂದು ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಹೇಳಿದರು.
ಮುಂದಿನ ದಿನಗಳಲ್ಲಿ ಎಲ್ಲ ಕಡೆಗಳಲ್ಲಿ ಇಂತಹ ಕ್ರೀಡಾಕೂಟಗಳಾಗಬೇಕು ಯುವ ಸಮುದಾಯ ಸಮಾಜಕ್ಕಾಗಿ ಒಗ್ಗೂಡಬೇಕು ನನ್ನಿಂದ ಅಗತ್ಯ ಸಹಾಯ ಸಹಕಾರ ಇದ್ದೇ ಇದೆ ಎಂದರು
ಅವರು ಇಲ್ಲಿನ ಗಾಂಧಿ ಮೈದಾನದಲ್ಲಿ ರವಿವಾರ ರಾಮಕ್ಷತ್ರಿಯಯುವಕ ಮಂಡಳಿ ಆಶ್ರಯದಲ್ಲಿ ಯುವಕ ಮಂಡಲದ 60ನೇ ವರ್ಷದ ಗಣೇಶೋತ್ಸವದ ಪ್ರಯುಕ್ತ ರಾಮಕ್ಷತ್ರಿಯ ಸಮಾಜ ಬಾಂಧವರಿಗಾಗಿ ನಡೆದ ಅಂತಾರಾಜ್ಯ ಮಟ್ಟದ ರಾಮಕ್ಷತ್ರಿಯ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು
ಸಭಾಧ್ಯಕ್ಷತೆಯನ್ನು ರಾಮಕ್ಷತ್ರಿಯರ ಸಂಘ ಅಧ್ಯಕ್ಷ ಲಕ್ಷ್ಮೀಶ್ ಹವಲ್ದಾರ್ ವಹಿಸಿದ್ದರು. ವಿಶ್ವರಾಮಕ್ಷತ್ರಿಯ ಮಹಾಸಂಘ ಅಧ್ಯಕ್ಷ ಎಚ್. ಆರ್. ಶಶಿಧರ ನಾಯ್ ಕದಂಬ ಗ್ರೂಪ್ ಆಫ್ ಹೋಟೆಲ್ಸ್ ಮಾಲಕರಾದ ರಾಘವೇಂದ್ರ ನೇರಂಬಳ್ಳಿ ತೀರ್ಥಹಳ್ಳಿಯ ನಿವೃತ ಎಸಿಎಫ್‌ಒ, ಮಂಜುನಾಥ ರಾಮಕ್ಷತ್ರಿಯ ಮಹಿಳಾ ಮಂಡಳಿ ಅಧ್ಯಕ್ಷೆ ಸರೋಜ ಅರುಣ್ ಕುಮಾರ್, ರಾಮಕ್ಷತ್ರಿಯ ಯುವಕ ಮಂಡಳಿ ಕುಂದಾಪುರದ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್ ಯು.ಕೆ., ಕಾರ್ಯದರ್ಶಿ ಗಣೇಶ್ ನಾಯಕ್, ಕೋಶಾಧಿಕಾರಿ ಸುರೇಶ್ ಕೆಳಮನೆ, ಗೌರವಾಧ್ಯಕ್ಷ ಪ್ರಭಾಕರ ರಾವ್ ನೇರಂಬಳ್ಳಿ ನಿಯೋಜಿತ ಅಧ್ಯಕ್ಷ ನಾಗರಾಜ ದಫೇದಾರ್, ಕ್ರೀಡಾ ಕಾರ್ಯದರ್ಶಿಗಳಾದ ರಾಮು ಹೆಗ್ಡೆ ರವಿ ಹೆಗ್ಡೆ, ಅಮರ್ ಕುಮಾರ್, ಗಣೇಶ ಬೀರಿ ಉಪಸ್ಥಿತರಿದ್ದರು.
ರಾಮಕ್ಷತ್ರಿಯ ಯುವಕ ಮಂಡಳಿಯ ಅಧ್ಯಕ್ಷ ರಾಜೇಶ್ ಪಡುಕೇರಿ, ಪ್ರಸ್ತಾವಿಸಿ, ಸ್ವಾಗತಿಸಿ, ಮುಂದಿನ ದಿನಗಳಲ್ಲಿ ಕೆಸರುಗದ್ದೆ ಕ್ರೀಡಾಕೂಟ, ಗ್ರಾಮೀಣ ಕ್ರೀಡಾಕೂಟ ನಡೆಯಲಿದೆ ಎಂದರು.
ಸಮಾಜದ ಕ್ರೀಡಾಸಾಧಕರಾದ ನಾಗಶ್ರೀ ಉಪ್ಪಿನಕುದ್ರು, ಪೂರ್ವಿ ನಾಯಕ್, ಶಶಾಂಕ ಕೆ.ಸಿ., ಸುಪ್ರೀತಾ ಕ್ರೀಡಾಜ್ಯೋತಿಯನ್ನು ಶ್ರೀರಾಮ ಮಂದಿರದಿಂದ ಗಾಂಧಿ ಮೈದಾನವರೆಗೆ ವಾಹನ ಜಾಥಾ ಮೂಲಕ ಕ್ರೀಡಾಜ್ಯೋತಿ ತರಲಾಯಿತು. ಮಧುಸೂದನ್ ಕೆ. ಕಾರ್ಯಕ್ರಮ ನಿರೂಪಿಸಿದರು
ಕ್ರೀಡಾಕೂಟದಲ್ಲಿ ಅಂತಾರಾಜ್ಯ ಮಟ್ಟದ ವಾಲಿಬಾಲ್, ತ್ರೋಬಾಲ್, ಕ್ರಿಕೆಟ್ ಹಾಗೂ ಹಗ್ಗಜಗ್ಗಾಟ ಪಂದ್ಯಗಳಿಗೆ 100 ತಂಡಗಳು ಹಾಗೂ 1,300 ಕ್ರೀಡಾಳುಗಳು ಭಾಗವಹಿಸಿದ್ದರು

