ಸಿದ್ದಾಪುರ : ಕ್ರೀಡೆಯಲ್ಲಿ ಸಾಧನೆಯನ್ನು ಮಾಡುವ ಹಂಬಲವನ್ನು ಬೆಳೆಸಿಕೊಳ್ಳಿ . ಅಮೃತ ಭಾರತಿ ಶಾಲೆಯ ವಿದ್ಯಾರ್ಥಿಗಳಿಗೆ ಸಂಸ್ಕಾರಯುತವಾದ ಬೆಳವಣಿಗೆಗೆ ಪೂರಕವಾದ ಭಾರತೀಯ ಸಂಸ್ಕೃತಿಯ ಶಿಕ್ಷಣವನ್ನು ನೀಡುತ್ತಿದೆ .ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಉತ್ತಮ ಅವಕಾಶ ಮಾಡಿಕೊಡುತ್ತಿದೆ.ಎಂದು ಕ್ರೀಡಾಪಟು ಪ್ರಶಾಂತ ಪೈ ಮುದ್ರಾಡಿ ನುಡಿದರು.
ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಆಯೋಜಿಸಿದ 17ನೇ ವರ್ಷದ ಕ್ರೀಡಾಕೂಟದಲ್ಲಿ ಕ್ರೀಡಾಕೂಟದ ಪಥಸಂಚಲನೆಯ ಗೌರವ ವಂದನೆಯನ್ನು ಸ್ವೀಕರಿಸಿ , ಕ್ರೀಡಾಜ್ಯೋತಿಯನ್ನು ಬೆಳಗಿಸುವುದರೊಂದಿಗೆ ಉದ್ಘಾಟಿಸಿ ಮಾತನಾಡಿದರು.
ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ಆಗಸ್ಟ್ 17 ಶನಿವಾರ ಕಾರ್ಯಕ್ರಮ ಜರುಗಿದೆ.ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಅಧ್ಯಕ್ಷರು ಪಾಂಡುರಂಗ ಪೈ , ಸಿದ್ದಾಪುರ , ಇವರು ಕ್ರೀಡಾಕೂಟದ ಧ್ವಜಾರೋಹಣ ಗೈದರು
ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನವನ್ನು ನೀಡಲಾಯಿತು . ಸಮಗ್ರ ಪ್ರಶಸ್ತಿ ಅಮೃತ ಭಾರತಿ ವಿದ್ಯಾಲಯ ಪಡೆಯಿತು. ಜಿಲ್ಲಾ ಮಟ್ಟದಲ್ಲಿ ವಿಜೇತರಾದ ವಿದ್ಯಾರ್ಥಿಗಳು ಆಗಸ್ಟ್ 31 ಮತ್ತು 1ಮತ್ತು 2 ಸೆಪ್ಟೆಂಬರ್ ನಲ್ಲಿ ನಡೆಯುವ ರಾಜ್ಯಮಟ್ಟದ ಅಥ್ಲೆಟಿಕ್ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ .ವಿದ್ಯಾಭಾರತಿ ಕರ್ನಾಟಕ ಪ್ರಾಂತವು ರಾಜ್ಯಮಟ್ಟದ ಸ್ಪರ್ಧೆಯನ್ನು ಬೀದರ್ ಜಿಲ್ಲೆಯಲ್ಲಿ ಆಯೋಜಿಸಿದೆ .ಸ್ವಾಗತ ಅಕ್ಷತಾ ಮಾತಾಜಿ , ನಿರೂಪಣೆ ಪಂಚಮಿ ಮಾತಾಜಿ , ಧನ್ಯವಾದ ನಿಶಾನ್ ಗುರೂಜಿ ಮಾಡಿದರು .
ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲಾ ಶೈಕ್ಷಣಿಕ ಸಂಯೋಜಿತ ಸಂಸ್ಥೆಗಳಿಂದ ಒಟ್ಟು 3೦7 ವಿದ್ಯಾರ್ಥಿಗಳು 168 ಶಿಕ್ಷಕರು ವಿದ್ಯಾ ಭಾರತಿಯಿಂದ ಮತ್ತು ಸಂಸ್ಥೆಯಿಂದ ಒಟ್ಟು 15 ಸದಸ್ಯರು ಭಾಗವಹಿಸಿದ್ದರು.ಡ್ಯುಯಲ್ ಸ್ಟಾರ್ ಶಾಲೆ ಅಮಾಸೆಬೈಲು, ಸೇವಾ ಸಂಗಮ ವಿದ್ಯಾ ಕೇಂದ್ರ ತೆಕ್ಕಟ್ಟೆ ,ಸರಸ್ವತಿ ವಿದ್ಯಾಲಯ ಸಿದ್ದಾಪುರ , ನಚಿಕೇತ ವಿದ್ಯಾಲಯ ಬೈಲೂರು ,ಅಮೃತ ಭಾರತಿ ಹೈಸ್ಕೂಲು ವಿಭಾಗ ಹೆಬ್ರಿ ,ಅಮೃತ ಭಾರತಿ ಪ್ರಾಥಮಿಕ ವಿಭಾಗ ಹೆಬ್ರಿ,ಅಮೃತ ಭಾರತಿ ವಿದ್ಯಾ ಕೇಂದ್ರ ಪ್ರಾಥಮಿಕ ವಿಭಾಗ ಹೆಬ್ರಿ, ಅಮೃತ ಭಾರತಿ ವಿದ್ಯಾ ಕೇಂದ್ರ ಹೈಸ್ಕೂಲ್ ವಿಭಾಗ ಹೆಬ್ರಿ, ಶ್ರೀರಾಮ ವಿದ್ಯಾಕೇಂದ್ರ ಕೋಡಿ, ಆರ್ ಕೆ ಪಾಟ್ಕರ್ ಶಾರದಾ ಹಿರಿಯ ಪ್ರಾಥಮಿಕ ಶಾಲೆ ಚೇರ್ಕಾಡಿ, ರೂರಲ್ ಎಜುಕೇಶನ್ ಸೊಸೈಟಿ ಪಟ್ಲ ಸಂಸ್ಥೆಗಳು ಸ್ಪರ್ಧೆಯಲ್ಲಿ ಭಾಗವಹಿಸಿದವು .