Home » ಈ ಭಾರಿ 11 ದಿನಗಳ ದಸರಾ ಆಚರಣೆ
 

ಈ ಭಾರಿ 11 ದಿನಗಳ ದಸರಾ ಆಚರಣೆ

by Kundapur Xpress
Spread the love

ಮೈಸೂರು : ದಸರಾ ಆರಂಭವಾಗುವ ಸೆಪ್ಟೆಂಬರ್ ತಿಂಗಳ ಶುಕ್ಲ ಪಕ್ಷದಲ್ಲಿ 2 ಬಾರಿ ಪಂಚಮಿ ಬಂದಿದ್ದು, ಈ ಬಾರಿ 11ನೇ ದಿನಕ್ಕೆ ವಿಜಯದಶಮಿ ಬರಲಿದೆ. ಹಾಗಾಗಿ ಈ ಬಾರಿ ವಿಶೇಷವಾಗಿ 11 ದಿನಗಳ ದಸರಾ ಆಚರಣೆ ನಡೆಯಲಿದೆ. ಆದರೆ ಜಂಬೂಸವಾರಿ ಮೆರವಣಿಗೆಯ ದಿನಾಂಕ ಸರ್ಕಾರ ತೀರ್ಮಾನಿಸಲಿದೆ.

ಮಹಾಲಯ ಅಮಾವಾಸ್ಯೆಯ ಬಳಿಕ ಆರಂಭವಾಗುವ ನವರಾತ್ರಿಯು ಈ ಬಾರಿ ದಶ ರಾತ್ರಿಯಾಗಲಿದೆ. ಇದು ದಸರಾ ಇತಿಹಾಸದ ಲ್ಲೇ ಅಪರೂಪದ ಪ್ರಸಂಗ. ನಿಯಮದಂತೆ ಸೆ.21ಕ್ಕೆ ಅಮಾವಾಸ್ಯೆ ಮುಗಿದ ಮಾರನೆ ದಿನ (ಸೆ.22) ನವರಾತ್ರಿ ಆರಂಭವಾಗಬೇಕು. ಆದರೆ, ಸೆ.26, 27ರಂದು ಪಂಚಮಿ ಕಾರಣ ನವರಾತ್ರಿ ದಶರಾತ್ರಿಯಾಗಿ ಮಾರ್ಪಟ್ಟಿವೆ. ಅ.2ರ ಗಾಂಧಿ ಜಯಂತಿಯಂದು ವಿಜಯದಶಮಿ ನಡೆಯಲಿದೆ.

 

Related Articles

error: Content is protected !!