Home » 18 ಎಂಎಲ್‌ಎ : 6 ತಿಂಗಳು ಸಸ್ಪೆಂಡ್
 

18 ಎಂಎಲ್‌ಎ : 6 ತಿಂಗಳು ಸಸ್ಪೆಂಡ್

by Kundapur Xpress
Spread the love

ವಿಧಾನಸಭೆ ಬೆಂಗಳೂರು :  ಹನಿಟ್ರ್ಯಾಪ್ ಹಗರಣವನ್ನು ನ್ಯಾಯಾಂಗ ತನಿಖೆಗೆ ನೀಡಬೇಕು ಹಾಗೂ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡುವ ಬಜೆಟ್ ಘೋಷಣೆ ಕೈಬಿಡಬೇಕು ಎಂದು ಆಗ್ರಹಿಸಿ ಬಿಜೆಪಿ ಸದಸ್ಯರು ವಿಧಾನಮಂಡಲದ ಉಭಯ ಸದನಗಳಲ್ಲಿ ಶುಕ್ರವಾರ ಭಾರಿ ಗದ್ದಲ ಸೃಷ್ಟಿಸಿದ್ದಲ್ಲದೆ. ಸ್ಪೀಕರ್ ಅವರ ಆಸನದ ಪೋಡಿಯಂ ಮೇಲೇರಿ ಕಾಗದಗಳನ್ನು ಸೀಕರ್‌ ಮುಖಕ್ಕೆ ತೂರಿ ಕೋಲಾಹಲಕರ ಸನ್ನಿವೇಶ ಸೃಷ್ಟಿ ಮಾಡಿದರು.

ಇದರ ಪರಿಣಾಮ ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಸದನದಲ್ಲಿ ದುರ್ವರ್ತನೆ ಆರೋಪದಡಿ ಬಿಜೆಪಿಯ 18 ಸದಸ್ಯರನ್ನು ಆರು ತಿಂಗಳ ಸುದೀರ್ಘ ಅವಧಿವರೆಗೆ ಅಮಾನತು ಮಾಡಿ ಸಭಾಧ್ಯಕ್ಷ ಯು.ಟಿ. ಖಾದ‌ರ್ ರೂಲಿಂಗ್ ನೀಡಿದರು. ರೂಲಿಂಗ್ ನಂತರವೂ ಶಾಸಕರು ಸದನದಲ್ಲೇ ಉಳಿದ ಕಾರಣ ಮಾರ್ಷಲ್‌ ಗಳು ಎಲ್ಲ 18 ಶಾಸಕರನ್ನು ಸದನದಿಂದ ಹೊರಗೆ ಹೊತ್ತೊಯ್ದ ಘಟನೆಗೂ ವಿಧಾನಸಭೆ ಸಾಕ್ಷಿಯಾಯ್ತು

 

Related Articles

error: Content is protected !!