ಬೆಂಗಳೂರು : ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ ಹೆಸರು ಉಲ್ಲೇಖವಿಲ್ಲ ಹೀಗಾಗಿ ಪ್ರಕರಣದಲ್ಲಿ ಸರ್ಕಾರಕ್ಕೂ ಮತ್ತು ಇಲಾಖೆಗೆ ಸಂಬಂಧವಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಶನಿವಾರ ರೇಸ್ ಕೋರ್ಸ್ ರಸ್ತೆಯ ಗೃಹ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಅವರು, ಬಂಧಿಸಿದ 8 ಜನ ಆರೋಪಿಗಳಲ್ಲೂ ನನ್ನ ಹೆಸರಿಲ್ಲ ಆದರೂ ಬಿಜೆಪಿಗರು ನನ್ನ ರಾಜೀನಾಮೆ ಕೇಳುವುದು ಯಾಕೆ ಎಂದು ಪ್ರಶ್ನಿಸಿದರು.
ತಮ್ಮ ಸಂಸ್ಥೆ ಮೂಲಕ ಟೆಂಡರ್ ಹಾಕುತ್ತಿದ್ದೇವೆ, ಹಣದ ಆವಶ್ಯಕತೆ ಇದೆ ಎಂದು ಮೃತ ಸಚಿನ್ ಕೇಳಿದ್ದರು. 65 ಲಕ್ಷ ರೂ.ಗಳನ್ನು ಬ್ಯಾಂಕ್ ಮೂಲಕ ವರ್ಗಾವಣೆ ಮಾಡಿದ್ದೆವು ಎಂದು ಬಂಧಿತ ಆರೋಪಿಗಳು ಹೇಳಿದ್ದಾರೆ. ಇವರು ನಮಗೆ ಟೆಂಡರ್ ಕೊಡಿಸುವುದಾಗಿ ಹೇಳಿದ್ದರು ಎಂಬುದು ಮೃತ ಸಚಿನ್ ಆರೋಪವಾಗಿದೆ ಇದರಲ್ಲಿ ನನ್ನ ಪಾತ್ರ ಇಲ್ಲ ಎಂದರು.