116
ಉಡುಪಿ : ನಿರಂತರ 216 ಗಂಟೆ ಕಾಲ ಭರತನಾಟ್ಯ ಪ್ರದರ್ಶನ ನೀಡಿ ವಿದುಷಿ ದೀಕ್ಷಾ ಅವರು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಶನಿವಾರ ಸಂಜೆ 3:30ಕ್ಕೆ ಹೊಸ ವಿಶ್ವದಾಖಲೆಯೊಂದಿಗೆ ಸತತ 9 ದಿನಗಳ ತನ್ನ ನೃತ್ಯ ಪ್ರದರ್ಶನವನ್ನು ಅವರು ಪೂರ್ಣಗೊಳಿಸಿದರು. ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕು ಆರೂರು ಗ್ರಾಮದ ವಿದುಷಿ ದೀಕ್ಷಾ ವಿ. ಉಡುಪಿ ಅಜ್ಜರಕಾಡಿನ ಡಾ.ಜಿ.ಶಂಕರ್ ಮಹಿಳಾ ಸ್ವಾತಕೋತ್ತರ ಕಾಲೇಜು ಸಭಾಂಗಣ ದಲ್ಲಿ ಕಳೆದ ಆ.21ರಿಂದ ಭರತನಾಟ್ಯ ಪ್ರದರ್ಶನ ನೀಡಿದ್ದರು. ಗುರುವಾರ ಸಂಜೆ 5:30ರ ವೇಳೆಗೆ 170 ಗಂಟೆ ಕಾಲ ನಿರಂತವಾಗಿ ಭರತನಾಟ್ಯ ಪ್ರದರ್ಶಿಸಿ ಕಳೆದ ತಿಂಗಳು ಮಂಗಳೂರಿನ ರೆಮೋನಾ ಅವರ ವಿಶ್ವ ದಾಖಲೆ ಮುರಿದು ಹೊಸ ದಾಖಲೆ ಬರೆದರು.

