ಹೊಳೆನರಸೀಪುರ : ತಾಲೂಕಿನ ಹರದನಹಳ್ಳಿಯ ಶ್ರೀ ದೇವೇಶ್ವರ ದೇವಾಲಯದಲ್ಲಿ ಶಾಸಕ ಎಚ್.ಡಿ.ರೇವಣ್ಣ ಅವರು ಮಂಗಳವಾರ ಹಾರಿ ಬಿದ್ದ ಪರಿಣಾಮ ಪಕ್ಕೆಲುಬುಗಳಿಗೆ ಹಾನಿಯಾಗಿದೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಕೆಲಕಾಲ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ.ಪ್ರಥಮ ಏಕಾದಶಿ ಪ್ರಯುಕ್ತ ಉಪವಾಸ ವ್ರತ ಕೈಗೊಂಡಿದ್ದ ರೇವಣ್ಣ ಸ್ವಗ್ರಾಮ ಹರದನಹಳ್ಳಿಯ ಕುಲದೇವರು ಶ್ರೀ ದೇವೇಶ್ವರ ದರ್ಶನಕ್ಕೆ ಆಗಮಿಸಿದ್ದರು. ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ಹೊರಗೆ ಮೆಟ್ಟಿಲು ಇಳಿಯುವಾಗ ಕಾಲುಜಾರಿ ಬಿದ್ದಿದ್ದಾರೆ. ಆ ಬಳಿಕ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್ ಮಾಡಿದಾಗ ಪಕ್ಕೆಲುಬುಗಳಿಗೆ ಹಾನಿಯಾಗಿರುವುದು ಕಂಡುಬಂದಿದೆ. ವೈದ್ಯಾಧಿಕಾರಿ ಡಾ.ಧನಶೇಖರ್, ಕೀಲುಮೂಳೆ ತಜ್ಞ ಡಾ.ದಿನೇಶ್ ಅವರು ಶಾಸಕರಿಗೆ ಚಿಕಿತ್ಸೆ ನೀಡಿ, ಎದೆಯ ಭಾಗಕ್ಕೆ ಬೆಲ್ಟ್ ಅಳವಡಿಸಿದ್ದಾರೆ. ಚಿಕಿತ್ಸೆ ಪಡೆದ ನಂತರ ರೇವಣ್ಣ ಅವರು ವಿಕ್ರಾಂತಿಗಾಗಿ ಬೆಂಗಳೂರಿಗೆ ತೆರಳಿದ್ದಾರೆ