Home » ಹಿಂದುತ್ವಕ್ಕೆ ಗೌರವ ತೋರಿಸಿದ ಡಿಕೆಶಿ ಬಗ್ಗೆ ಅಭಿಮಾನವಿದೆ : ಕೋಟ
 

ಹಿಂದುತ್ವಕ್ಕೆ ಗೌರವ ತೋರಿಸಿದ ಡಿಕೆಶಿ ಬಗ್ಗೆ ಅಭಿಮಾನವಿದೆ : ಕೋಟ

by Kundapur Xpress
Spread the love

ಉಡುಪಿ: ಈಶ ಫೌಂಡೇಶನ್ ನಡೆಸಿದ ಶಿವರಾತ್ರಿಯಲ್ಲಿ ಭಾಗವಹಿಸಿದ್ದ ಡಿಸಿಎಂ ಡಿ.ಕೆ. ಶಿವಕುಮಾರ್ ನಾನೊಬ್ಬ ಹಿಂದೂ ಎಂದಿರುವುದಕ್ಕೆ ಅಭಿನಂದನೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ‘ಕುಂಭಮೇಳದಲ್ಲಿ ಮುಳುಗಿದರೆ ಹೊಟ್ಟೆ ತುಂಬುತ್ತಾ? ಎಂದು ಮಲ್ಲಿಕಾರ್ಜುನ ಖರ್ಗೆ ಕೇಳಿದ್ದರು. ಆದರೆ ಜನ ಸಾವಿರ ಹೇಳಲಿ ನಾನು ತೀರ್ಥಸ್ನಾನ ಮಾಡುತ್ತೇ ನೆಂದು ಡಿಕೆಶಿ ಹೇಳಿದ್ದಾರೆ. ಹಿಂದುತ್ತಕ್ಕೆ ಗೌರವ ತೋರಿಸಿದ ಡಿಕೆಶಿ ಬಗ್ಗೆ ನಮಗೆ ಅಭಿಮಾನವಿದೆ. ರಾಜಕಾರಣದಲ್ಲಿ ಒಳ್ಳೆಯ ಗಾಳಿ ಬೀಸುತ್ತಿದೆ ಎಂದರು. ಮಹಾಭಾರತದಲ್ಲಿ ಶ್ರೀಕೃಷ್ಣ ಕೂಡ ನ್ಯಾಯಕ್ಕಾಗಿ ಭೀಷ್ಮನನ್ನು ನಡುರಾತ್ರಿಯಲ್ಲಿ ಹೋಗಿ ಭೇಟಿಯಾಗಿದ್ದನಂತೆ. ಇವತ್ತಿಗೂ ಆ ಪರಂಪರೆ ಊರ್ಜಿತದಲ್ಲಿ ಇದೆ. ರಾಜಕಾರಣದಲ್ಲಿ ಅಂತಹ ಚಟುವಟಿಕೆಗಳು ನಡೆಯುತ್ತಾ ಇರುತ್ತವೆ ಎಂದರು.

 

Related Articles

error: Content is protected !!