Home » ಮಧುಗಿರಿ ಡಿವೈಎಸ್‌ಪಿಗೆ ಬೇಲ್ : ಬಿಡುಗಡೆ ಆಗ್ತಿದ್ದಂತೆ ಮತ್ತೆ ಅರೆಸ್ಟ್ !
 

ಮಧುಗಿರಿ ಡಿವೈಎಸ್‌ಪಿಗೆ ಬೇಲ್ : ಬಿಡುಗಡೆ ಆಗ್ತಿದ್ದಂತೆ ಮತ್ತೆ ಅರೆಸ್ಟ್ !

by Kundapur Xpress
Spread the love

ಮಧುಗಿರಿ  (ತುಮಕೂರು ): ದೂರು ನೀಡಲು ಕಚೇರಿಗೆ ಬಂದಿದ್ದ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಅಮಾನತುಗೊಂಡು ಬಂಧನಕ್ಕೊಳಗಾಗಿ ಜೈಲು ಸೇರಿದ್ದ ಡಿವೈಎಸ್‌ಪಿ ರಾಮಚಂದ್ರಪ್ಪ ಸೋಮವಾರ ಸೆಷನ್ಸ್ ನ್ಯಾಯಾಲಯದಿಂದ ಜಾಮೀನು ಪಡೆದು ಹೊರ ಬರುತ್ತಿದ್ದಂತೆ ಮತ್ತೊಂದು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮತ್ತೆ ಜೈಲು ಪಾಲಾಗಿದ್ದಾರೆ. ಮೊದಲನೇ ಪ್ರಕರಣದಲ್ಲಿ 2 ಲಕ್ಷದ ಶೂರಿಟಿ ಬಾಂಡ್ ಮತ್ತು ಇತರೆ ಷರತ್ತು ವಿಧಿಸಿ ಮಧುಗಿರಿ 4ನೇ ಅಧಿಕ ಜಿಲ್ಲಾ ನ್ಯಾಯಾಧೀಶರು ಜಾಮೀನು ನೀಡಿದ್ದರು. ಆದರೆ ಷರತ್ತು ಪೂರೈಸಲು ರಾಮಚಂದ್ರಪ್ಪ ವಿಫಲರಾಗಿದ್ದರಿಂದ ಎರಡು ದಿನ ಜೈಲಿನಲ್ಲಿ ಕಾಲ ಕಳೆದಿದ್ದರು. ಮಧುಗಿರಿ ನ್ಯಾಯಾಲಯಕ್ಕೆ ಶೂರಿಟಿ ಬಾಂಡ್ ನೀಡಿ ನಿಯಮದಂತೆ ಹೊರ ಬಂದ ತಕ್ಷಣ ಅವರನ್ನು ಎರಡನೇ ದೂರಿನ ಪ್ರಕರಣದಲ್ಲಿ ಮಧುಗಿರಿ ಪೋಲಿಸರು ಬಂಧಿಸಿ, ನ್ಯಾಯಾಧೀಶರ ಎದುರು ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

 

Related Articles

error: Content is protected !!