ಕುಂದಾಪುರ : ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಇಲ್ಲಿನ ಎನ್.ಸಿ.ಸಿ. ಘಟಕದ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮವನ್ನು ಗಡಿ ಭದ್ರತಾ ಪಡೆ ಯೋಧರಾಗಿರುವ ಶ್ರೀ ಪ್ರದೀಪ್ ಖಾರ್ವಿ ಬಸ್ರೂರು ಇವರು ಉದ್ಘಾಟಿಸಿ, ಭಾರತೀಯ ಸೈನ್ಯದ ಅನುಭವವನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ಎನ್.ಸಿ.ಸಿ. ಸೀನಿಯರ್ ಕ್ಯಾಡೆಟ್‍ಗಳಿಗೆ ರ್ಯಾಂಕ್ ಮತ್ತು ಎನ್.ಸಿ.ಸಿ. ಪ್ರಮಾಣ ಪತ್ರವನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಫ್ರೋ.| ಕೆ. ಉಮೇಶ್ ಶೆಟ್ಟಿಯವರು ಎನ್.ಸಿ.ಸಿ.ಯ ಕಾರ್ಯವೈಖರಿಯನ್ನು ಮತ್ತು ಕ್ಯಾಡೆಟ್ಸ್‍ಗಳ ಕರ್ತವ್ಯಗಳ ಬಗ್ಗೆ ತಿಳಿಸಿದರು. ಉಪಪ್ರಾಂಶುಪಾಲರಾದ ಶ್ರೀ ಚೇತನ್ ಶೆಟ್ಟಿ ಕೋವಾಡಿ ಪ್ರಾಸ್ತಾವಿಸಿದರು. ಎನ್.ಸಿ.ಸಿ. ಅಧಿಕಾರಿಗಳಾದ ಶ್ರೀ ಹರೀಶ್ ಬಿ. ಹಾಗೂ ಶ್ರೀ ಶರತ್ ಕುಮಾರ್ ಉಪಸ್ಥಿತರಿದ್ದರು. ಪ್ರಥಮ ವರ್ಷದ ಬಿಬಿಎ ವಿದ್ಯಾರ್ಥಿನಿ ಸಹನಾ ಪ್ರಾರ್ಥಿಸಿ, ತೃತೀಯ ಬಿಸಿಎ ವಿದ್ಯಾರ್ಥಿಗಳಾದ ಸಹನಾ ಸ್ವಾಗತಿಸಿ, ಅರ್ಪಿತಾ ವಂದಿಸಿ, ತೃತೀಯ ಬಿ.ಕಾಂ. (ಬಿ) ವಿಭಾಗದ ಪ್ರಿಯಾಂಕ ಶೆಟ್ಟಿ ನಿರೂಪಿಸಿದರು.