Home » ದಲಿತ ಯುವತಿಯ ಮೇಲೆ ಹಲ್ಲೆ ಮಾಡಿದ ಮುಸ್ಲಿಂ ಮಹಿಳೆಯನ್ನು ತಕ್ಷಣವೇ ಬಂಧಿಸಿ
 

ದಲಿತ ಯುವತಿಯ ಮೇಲೆ ಹಲ್ಲೆ ಮಾಡಿದ ಮುಸ್ಲಿಂ ಮಹಿಳೆಯನ್ನು ತಕ್ಷಣವೇ ಬಂಧಿಸಿ

ಶಾಸಕ ಗುರುರಾಜ್ ಗಂಟಿಹೊಳೆ ಎಚ್ಚರಿಕೆ*

by Kundapur Xpress
Spread the love

ಬೈಂದೂರು : ಗುಲ್ವಾಡಿ ಸಮೀಪದ ಮಾವಿನಕಟ್ಟೆ ಮೆಡಿಕಲ್ ಒಂದರಲ್ಲಿ ಕಾರ್ಯನಿರ್ವಹಿಸುತ್ತಿರುವ ದಲಿತ ಯುವತಿಗೆ ಚಿಲ್ಲರೆ ಇಲ್ಲ ಎನ್ನುವ ಕಾರಣಕ್ಕೆ ಹಲ್ಲೆ ನಡೆಸಿದ ಮುಸ್ಲಿಂ ಯುವತಿಯನ್ನು ತಕ್ಷಣವೇ ಬಂಧಿಸಬೇಕು. ಇಲ್ಲದಿದ್ದರೆ ಬೃಹತ್ ಪ್ರತಿಭಟನೆ ಮಾಡಲಿದ್ದೇವೆ ಎಂದು ಶಾಸಕರಾದ ಶ್ರೀ ಗುರುರಾಜ್ ಗಂಟಿಹೊಳೆ ಎಚ್ಚರಿಸಿದ್ದಾರೆ.

ಮುಸ್ಲಿಂ ಮಹಿಳೆಯಿಂದ ಹಲ್ಲೆಗೆ ಒಳಗಾಗರ ದಲಿತ ಯುವತಿ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಶಾಸಕರು ಭೇಟಿ ನೀಡಿ ಸ್ಥೈರ್ಯ ತುಂಬಿದರು. ಅಲ್ಲದೆ, ಆರೋಪಿಗೆ ಕಠಿನ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದ್ದಾರೆ.

ಪೊಲೀಸ್ ಇಲಾಖೆ 24 ಗಂಟೆ ಒಳಗೆ ಆರೋಪಿಯನ್ನು ಬಂಧಿಸದೇ ಇದ್ದರೆ ಬೃಹತ್ ಪ್ರತಿಭಟನೆ ನಡೆಸಲಿದ್ದೇವೆ. ದಲಿತ ಯುವತಿಗೆ ನ್ಯಾಯ ಸಿಗುವವರೆಗೂ ಪ್ರತಿಭಟನೆಯಿಂದ ಎದ್ದು ಹೋಗುವುದಿಲ್ಲ ಎಂದು ಎಚ್ಚರಿಸಿದರು.

ಕುಂದಾಪುರ ತಾಲೂಕಿನ ಮಾವಿನಕಟ್ಟೆಯ ಮೆಡಿಕಲ್ ನಲ್ಲಿ ಕೆಲಸ ಮಾಡುವ ಬಡ ದಲಿತ ಹುಡುಗಿಯ ಮೇಲೆ ಕೇವಲ ಚಿಲ್ಲರೆ ಇಲ್ಲವೇ ಅಂತ ಕೇಳಿದ ಕಾರಣಕ್ಕೆ ಮನಸ್ಸೊ ಇಚ್ಚೆ ಹಲ್ಲೆ ಮಾಡಿದ‌ ಮಹಿಳೆಯ ಬಂಧನವಾಗಲೇ ಬೇಕು. ಹಲ್ಲೆಯ ದೃಶ್ಯ ಸಿಸಿಟಿವಿಯ ಆಚೆಗೆ ಹುಡುಗಿಗೆ ಹಿಗ್ಗಾ ಮುಗ್ಗಾ ಹೊಡೆದಿರುವುದು ವಿಡಿಯೊದಲ್ಲಿ ದಾಖಲಾಗಿಲ್ಲ. ಕೇವಲ ಗಲಾಟೆ ಶಬ್ದವಷ್ಟೇ ಕೇಳಿಸುತ್ತದೆ. ಹೊಟ್ಟೆ ಪಾಡಿಗೆ ಮೆಡಿಕಲ್‌ನಲ್ಲಿ ಕೆಲಸ ಮಾಡುವ ಈ ಬಡ ದಲಿತ ಹುಡುಗಿಗೆ ನ್ಯಾಯ ಸಿಗಬೇಕಿದೆ. ಉಡುಪಿ ಎಸ್ ಪಿಯವರು ಈ ಬಗ್ಗೆ ಗಮನ ಹರಿಸಲಿ ಎಂದು ಆಗ್ರಹಿಸಿದ್ದರು.

 

Related Articles

error: Content is protected !!