ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿ ಶ್ರೀ ಚಿಕ್ಕಮ್ಮದೇವಿ ದೇವಸ್ಥಾನ
ಕುಂದಾಪುರ:ಕಡಲತಡಿಯ ಕುಂದಾಪುರ ಹೃದಯ ಭಾಗದ ಪಡುವಣ ದಿಕ್ಕಿನಲ್ಲಿರುವ ಪಡುಕೇರಿಯಲ್ಲಿ ಅನಾದಿಕಾಲದಿಂದಲೂ ಪರಿಸರದ ಹಾಗೂ ಊರ ಪರವೂರ ಭಕ್ತರೆಲ್ಲರೂ ಪೂಜಿಸಿ ಆರಾಧಿಸಿಕೊಂಡು ಬಂದಿರುವ ಗುಡ್ಡೆ ಚಿಕ್ಕಮ್ಮಳೆಂದು ಪ್ರಸಿದ್ಧಳಾಗಿರುವ ಸಾಕ್ಷಾತ್ ತಾಯಿ ದುರ್ಗಾಪರಮೇಶ್ವರಿಯ ಪ್ರತಿರೂಪವಾಗಿ ನೆಲೆನಿಂತು ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸಿ ನಿತ್ಯವು ಭಕ್ತರನ್ನು ಕಾಪಾಡುವ ಅಭಯದಾನಿಯೇ “ಒಂಭತ್ತುದಂಡಿಗೆ ಶ್ರೀ ಚಿಕ್ಕಮ್ಮ ದೇವಿ”
ಶಿಥಿಲಾವಸ್ಥೆಯಲ್ಲಿದ್ದ ಶ್ರೀ ಚಿಕ್ಕಮ್ಮದೇವಿ ಹಾಗೂ ಸಪರಿವಾರ ದೈವಗಳ ಗುಡಿಗಳನ್ನು ಪರಿಸರದ ಭಕ್ತರೆಲ್ಲರೂ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಕೈಜೋಡಿಸಿದ್ದು 1999 ರ ಮಾರ್ಚ್ 3 ರಂದು ನೂತನವಾಗಿ ನಿರ್ಮಿಸಲಾದ ದೇವಸ್ಥಾನದಲ್ಲಿ ಶ್ರೀ ಚಿಕ್ಕಮ್ಮ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು.
ಚಿಕ್ಕಮ್ಮ ದೇವಸ್ಥಾನವು ನೂರಾರು ವರ್ಷಗಳಿಂದ ಎಲ್ಲಾ ವರ್ಗದ ಸಮಾಜ ಬಾಂಧವರ ನಂಬಿಕೆ ನಡವಳಿಕೆ ಶ್ರಧ್ಧೆಯ ಶಕ್ತಿ ಕೇಂದ್ರವಾಗಿ ಖ್ಯಾತಿಯನ್ನು ಪಡೆದುಕೊಂಡು ಬಂದಿದೆ ಗುಡ್ಡೆ ಚಿಕ್ಕಮ್ಮ ಎಂದೆ ಜನಜನಿತವಾಗಿ ಕ್ರಮೇಣ ಜನರ ಆಡುಭಾಷೆಯಲ್ಲಿ ಚಿಕ್ಕಮ್ಮ ದೇವಿ ದೇವಸ್ಥಾನ ಎಂದು ಕರೆಯಲ್ಪಡುತ್ತಿದ್ದು ಈ ದೇವಸ್ಥಾನವು ಶಕ್ತಿ ಸಾನಿಧ್ಯವನ್ನು ಹೊಂದಿದೆ
ತದನಂತರದಲ್ಲಿ ಕಾಲಕಾಲಕ್ಕೆ ಧಾರ್ಮಿಕ ಪೂಜಾ ವಿಧಿ-ವಿಧಾನಗಳನ್ನು ಆಡಳಿತ ಮಂಡಳಿಯವರು ನಡೆಸುತ್ತಿದ್ದಾರೆ. ಇದೀಗ 23 ವರ್ಷಗಳ ಬಳಿಕ ಆಡಳಿತ ಮಂಡಳಿ, ಯುವ ಮಿತೃವೃಂದ, ಮಹಿಳಾ ಹಾಗೂ ಪರಿಸರದ ಹಿರಿಯರೆಲ್ಲರ ತೀರ್ಮಾನದಂತೆ ದೇವಸ್ಥಾನದ ಪರೋಹಿತರಾದ ಶ್ರೀಯುತ ವಿಶ್ವನಾಥ ಉಪಾಧ್ಯಾಯ ಮತ್ತು ಶ್ರೀಯುತ ರವೀಶ ಹೊಳ್ಳರ ನೇತೃತ್ವದಲ್ಲಿ ಬ್ರಹ್ಮಕಲಶ ಹಾಗೂ ಇತರ ಧಾರ್ಮಿಕ ವಿಧಿಗಳನ್ನು ಮಾಡುವುದೆಂದು ನಿರ್ಣಯಿಸಲಾಯಿತು 2023 ರ ಮಾರ್ಚ್ 8, 9, 10 ರಂದು ಶ್ರೀ ದೇವಿ ಹಾಗೂ ಪರಿವಾರ ದೈವಗಳ ಬ್ರಹ್ಮಕಲಶೋತ್ಸವ ಮತ್ತು ಮಾರ್ಚ್ 10ನೇ ತಾರೀಖಿನಂದು ದೇವಿಗೆ ಚಿನ್ನದ ಮುಖವಾಡವನ್ನು ಭಕ್ತಿಪೂರ್ವಕವಾಗಿ ಸಮರ್ಪಿಸಲಾಗುವುದು ಎಂದು ಅಧ್ಯಕ್ಷರಾದ ನಾಗರಾಜ್ ಕಾಮಧೇನು ತಿಳಿಸಿದ್ದಾರೆ. ಎಲ್ಲಾ ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಭಕ್ತರು ಭಾಗವಹಿಸಿ ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ಅವರು ವಿನಂತಿಸಿಕೊಂಡಿದ್ದಾರೆ.