Home » ಜಯದ ಹೊಸ್ತಿಲಲ್ಲಿ ಎಡವಿದ ಭಾರತ
 

ಜಯದ ಹೊಸ್ತಿಲಲ್ಲಿ ಎಡವಿದ ಭಾರತ

by Kundapur Xpress
Spread the love

ಲಂಡನ್ : ನಾಲ್ಕನೇ ಮತ್ತು ಐದನೇ ದಿನದಾಟದಲ್ಲಿ ರೋಚಕತೆಯನ್ನು ಪಡೆದ ಲಾರ್ಡ್ಸ್ ಟೆಸ್ಟ್‌ನಲ್ಲಿ 192 ರನ್ ಮೊತ್ತವನ್ನು ಡಿಫೆಂಡ್ ಮಾಡುವಲ್ಲಿ – ಬೆನ್ ಸ್ಟೋಕ್ಸ್ ನೇತೃತ್ವದ ಇಂಗ್ಲೆಂಡ್ ತಂಡ ಯಶಸ್ವಿಯಾಗಿದೆ. ತೃತೀಯ ಟೆಸ್ಟ್ ಗೆದ್ದ ಆತಿಥೇಯ ಇಂಗ್ಲೆಂಡ್ ಆ್ಯಂಡರ್‌ಸನ್-ತೆಂಡುಲ್ಕರ್ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ

ಆಲ್‌ರೌಂಡರ್ ರವೀಂದ್ರ ಜಡೇಜ (ಅಜೇಯ 61 ರನ್) ಏಕಾಂಗಿ ಹೋರಾಟದ ಹೊರತಾಗಿಯೂ ಇಂಗ್ಲೆಂಡ್ 22 ರನ್‌ ಗಳ ಗೆಲುವು ದಾಖಲಿಸಿದೆ. ಜಡ್ಡು ಕ್ಲಾಸಿಕ್ ಟೆಸ್ಟ್ ಇನ್ನಿಂಗ್ಸ್ ಆಡಿ ಭಾರತ ತಂಡದ ಮಾನ ಕಾಪಾಡುವ ಕೆಲಸ ಮಾಡಿದರು. ಜಡ್ಡು ಅಜೇಯ ಅರ್ಧಶತಕ ದಾಖಲಿಸಿದರೂ ಭಾರತ ಗೆಲುವಿನ ಹೊಸ್ತಿಲಿನಲ್ಲಿ ಕೇವಲ 22 ರನ್‌ಗಳ ಕೊರತೆಯಿಂದ ಎಡವಿತು

 

Related Articles

error: Content is protected !!