Home » ಕುವೈಟ್‌ನಲ್ಲಿ ಅಗ್ನಿ ದುರಂತ : ಭಾರತೀಯರು ಸಾವು
 

ಕುವೈಟ್‌ನಲ್ಲಿ ಅಗ್ನಿ ದುರಂತ : ಭಾರತೀಯರು ಸಾವು

by Kundapur Xpress
Spread the love

ದುಬೈ : ತೈಲ ಸಂಪದ್ಭರಿತ ಕುವೈತ್‌ನಲ್ಲಿ ಕಾರ್ಮಿಕರು ನೆಲೆಸಿದ್ದ ಬಹುಮಹಡಿ ಕಟ್ಟಡವೊಂದರಲ್ಲಿ ಅಗ್ನಿ ದುರಂತ ಸಂಭ ವಿಸಿ, 49 ಮಂದಿ ಸಾವಿಗೀಡಾಗಿದ್ದಾರೆ. ಇವರಲ್ಲಿ ಬಹುತೇಕರು ಭಾರತೀಯ ಕೇರಳ, ತಮಿಳುನಾಡು ಹಾಗೂ ಉತ್ತರ ಭಾರತ ಮೂಲದವರು. ಎಲ್ಲರೂ 20ರಿಂದ 50 ವರ್ಷದೊಳಗಿನವರು ಎಂದು ವರದಿಗಳು ತಿಳಿಸಿವೆ. 

ಈ ನಡುವೆ ಘಟನೆಯಲ್ಲಿ 50 ಮಂದಿ ಗಾಯ ಗೊಂಡಿದ್ದು ಆ ಪೈಕಿ30 ಮಂದಿ ಭಾರತೀಯರು ಇದ್ದಾರೆ ಎಂದು ವರದಿಗಳು ಹೇಳಿವೆ. ಭೀಕರ ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ಪ್ರಧಾನಿ ಮೋದಿ ಹಿರಿಯ ಅಧಿಕಾರಿಗಳ ಜೊತೆ ತುರ್ತು ಸಭೆ ನಡೆಸಿದ್ದು, ಭಾರತೀಯರ ನೆರವಿಗೆ ಧಾವಿಸುವಂತೆ ಸೂಚಿಸಿದ್ದಾರೆ. ಅಲ್ಲದೆ ವಿದೇಶಾಂಗ ಖಾತೆಯ ಮಾಜಿ ರಾಜ್ಯ ಖಾತೆ ಸಚಿವ ಜ.ವಿ.ಕೆ. ಸಿಂಗ್ ಅವರನ್ನು ಹೆಚ್ಚಿನ ನೆರವಿವಾಗಿ ಕುವೈತ್‌ಗೆ ಕಳುಹಿಸಿಕೊಟ್ಟಿದ್ದಾರೆ

ಏನಾಯ್ತು: ದಕ್ಷಿಣ ಕುವೈತ್‌ನ ಮಂಗಾಫ್ ಪ್ರದೇಶದಲ್ಲಿ ಆರು ಅಂತಸ್ತಿನ ಕಟ್ಟಡದಲ್ಲಿ ಸುಮಾರು 160 ಮಂದಿ ಕಾರ್ಮಿಕರು ನೆಲೆಸಿ ದ್ದರು. ಬುಧವಾರ ನಸುಕಿನ ಜಾವ ಅಡುಗೆ ಕೋಣೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬಹು ತೇಕ ಕಾರ್ಮಿಕರು ಮಲಗಿದ್ದಾಗ ವಿಷ ಗಾಳಿ ಸೇವಿಸಿ ಸಾವಿಗೀಡಾಗಿದ್ದಾರೆ. ಹಲವಾರು ಮಂದಿಯನ್ನು ರಕ್ಷಣೆ ಮಾಡಲಾಗಿದೆ. ಅಗ್ನಿ ಶಾಮಕ ಇಲಾಖೆಯ ನಾಲ್ವರು ಸಿಬ್ಬಂದಿಯೂ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿದೆ

   

Related Articles

error: Content is protected !!