Home » “ಕ್ಯಾ| ಎಂ.ವಿ ಪ್ರಾಂಜಲ್ ರಸ್ತೆ” ಹಾಗೂ ಮೂರ್ತಿ ಪ್ರತಿಷ್ಠಾಪನೆಗೆ ಮನವಿ
 

“ಕ್ಯಾ| ಎಂ.ವಿ ಪ್ರಾಂಜಲ್ ರಸ್ತೆ” ಹಾಗೂ ಮೂರ್ತಿ ಪ್ರತಿಷ್ಠಾಪನೆಗೆ ಮನವಿ

by Kundapur Xpress
Spread the love

ಮಂಗಳೂರು : ಸುರತ್ಕಲ್‍ನ ಇತಿಹಾಸದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಾಗಲೀ ನಂತರವಾಗಲೀ ದೇಶದ ರಕ್ಷಣೆಯ ಕಾರ್ಯದಲ್ಲಿ ಬಲಿದಾನವಾದ ಬಗ್ಗೆ ಇಲ್ಲಿಯವರೆಗೆ ಯಾವುದೇ ಘಟನೆಗಳು ಲಭಿಸುವುದಿಲ್ಲ. ಆದರೆ ದಿನಾಂಕ 22.11.2023 ರಂದು ಸುರತ್ಕಲ್‍ನಲ್ಲಿ  ಹುಟ್ಟಿ ಬೆಳೆದು ತನ್ನ ವಿದ್ಯಾಭ್ಯಾಸವನ್ನು ಪೂರೈಸಿ, ಮೆರಿಟ್‍ನಲ್ಲಿ ಇಂಜಿನಿಯರಿಂಗ್ ಸೀಟ್ ಸಿಕ್ಕಿದ್ದರೂ ಅದೆಲ್ಲವನ್ನೂ ಪಕ್ಕಕ್ಕಿಟ್ಟು ದೇಶ ಸೇವೆಯೇ ತನ್ನ ಜೀವನದ ಪ್ರಮುಖ ಗುರಿ ಎಂದು ಅದರ ಪರೀಕ್ಷೆಗಳನ್ನು ಬರೆದು ಸತತವಾಗಿ ಪ್ರಯತ್ನಪಟ್ಟು ಸೈನ್ಯಕ್ಕೆ ಸೇರುವುದೇ ಜೀವನದ ಪ್ರಮುಖ ಗುರಿ ಎಂದು ಅದರ ಪರೀಕ್ಷೆಗಳನ್ನು ಬರೆದು, ಸತತವಾಗಿ ಪ್ರಯತ್ನಪಟ್ಟು ಸೈನ್ಯಕ್ಕೆ ಅಧಿಕಾರಿಯಾಗಿ ಸೇರಿದ್ದ ಎಂ ಆರ್‌ ಪಿ ಎಲ್‌ ನ ನಿವೃತ್ತ ನಿರ್ದೇಶಕರಾದ ಶ್ರೀ ವೆಂಕಟೇಶರವರ ಏಕೈಕ ಪುತ್ರ ಕ್ಯಾ| ಎಂ.ಪಿ. ಪ್ರಾಂಜಲ್ ದೇಶದ ರಕ್ಷಣೆಯ ಕಾರ್ಯದಲ್ಲಿ ಈ ಹಿಂದೆ ಉಗ್ರಗಾಮಿಗಳನ್ನು ಸದೆ ಬಡಿದಿದ್ದು ಈ ಬಾರಿಯೂ ಜಮ್ಮುವಿನ ರೌಜಾರಿಯಲ್ಲಿ ನಡೆದ ಉಗ್ರಗಾಮಿಗಳ ವಿರೋಧಿ ಕಾರ್ಯಾಚರಣೆಯಲ್ಲಿ ಭಾಗವಹಿಸಿ, ದಿಟ್ಟ ಹೋರಾಟ ನಡೆಸುತ್ತಿದ್ದ ಸಂದರ್ಭದಲ್ಲಿ ದೇಶದ್ರೋಹಿಗಳ ಗುಂಡೇಟಿಗೆ ಬಲಿಯಾದ ಅಮರ ಹುತಾತ್ಮ ಯೋಧ ಕ್ಯಾ| ಎಂ.ವಿ ಪ್ರಾಂಜಲ್ ಅವರ ಹೆಸರು ಅಜರಾಮರವಾಗಿ ಉಳಿಯುವ ಸಲುವಾಗಿ ಸುರತ್ಕಲ್ ಜಂಕ್ಷನ್‍ನಿಂದ ಎಂ.ಆರ್.ಪಿ.ಎಲ್.ವರೆಗಿನ ರಸ್ತೆಗೆ “ಕ್ಯಾ| ಎಂ.ವಿ ಪ್ರಾಂಜಲ್ ರಸ್ತೆ” ಎಂದು ನಾಮಕರಣಗೊಳಿಸುವ ಮುಖಾಂತರ ಮತ್ತು ಸುರತ್ಕಲ್ ಜಂಕ್ಷನ್‍ನ ಸರ್ಕಲ್‍ನಲ್ಲಿ ಹುತಾತ್ಮ ಯೋಧನ ಮೂರ್ತಿ ಪ್ರತಿಷ್ಠಾಪನೆ ಮಾಡುವ ಮುಖಾಂತರ ವೀರ ಯೋಧನಿಗೆ ಗೌರವ ಸಲ್ಲಿಸಬೇಕಾಗಿ ಸುರತ್ಕಲ್‌ ನ ರಾಷ್ಟ್ರಭಕ್ತ ನಾಗರಿಕ ವೇದಿಕೆ ಮಂಗಳೂರಿನ ಮಹಾಪೌರರಾದ ಸುಧೀರ್‌ ಶೆಟ್ಟಿಯವರಿಗೆ ಮನವಿ ಸಲ್ಲಿಸಿದೆ ರಾಷ್ಟ್ರಭಕ್ತ ನಾಗರಿಕ ವೇದಿಕೆಯ ನಿಯೋಗದಲ್ಲಿ  ಅಧ್ಯಕ್ಷರಾದ ಸತ್ಯಜಿತ್‌ ಸುರತ್ಕಲ್‌ ಗೌರವಾಧ್ಯಕ್ಷರಾದ ಹುಂಡಿ ಪ್ರಭಾ ಕಾಮತ್‌ ಗೌರವ ಸಲಹೆಗಾರರಾದ ಸಾರ್ಜೇಂಟ್‌ ಶ್ರೀಕಾಂತ್‌ ಶೆಟ್ಟಿ ಸುರತ್ಕಲ್‌ ಘಟಕದ ಪ್ರಧಾನ ಕಾರ್ಯದರ್ಶಿ ಅಣ್ಣಪ್ಪ ದೇವಾಡಿಗ ಖಜಾಂಚಿ ಹರೀಶ್‌ ಕಡಂಬೋಡಿ ಮಂಗಳೂರು ಘಟಕದ ಉಪಾಧ್ಯಕ್ಷರಾದ ಗುರುಚಂದ್ರ ಹೆಗ್ಡೆ ಪ್ರಧಾನ ಕಾರ್ಯದರ್ಶಿ ಸಂದೀಪ್‌ ಅಮ್ಲಮೊಗರು ಉಪಸ್ಥಿತರಿದ್ದರು  

   

Related Articles

error: Content is protected !!