Home » ಏನಾಸಂ ಪೊರ್ಟಲ್‌ಗೆ ಸಿಎಂ ಧಾಮಿ ಚಾಲನೆ
 

ಏನಾಸಂ ಪೊರ್ಟಲ್‌ಗೆ ಸಿಎಂ ಧಾಮಿ ಚಾಲನೆ

ಉತ್ತರಾಖಂಡ್

by Kundapur Xpress
Spread the love

ಡೆಹ್ರಾಡೂನ್ : ಮದುವೆ, ಲಿವ್ ಇನ್ ರಿಲೇಷನ್‌ಶಿಪ್, ವಿಚ್ಛೇದನದ ನೋಂದಣಿ ಕಡ್ಡಾಯ ಮಾಡುವ, ವಿವಾಹ, ವಿಚ್ಛೇದನ ಮತ್ತು ಉತ್ತರದಾಯಿತ್ವದ ವಿಚಾರದಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಸೇರಿ ಎಲ್ಲಾ ಧರ್ಮೀಯರಿಗೂ ಸಮಾನ ಕಾನೂನಿಗೆ ಅವಕಾಶ ಮಾಡಿಕೊಡುವ ಏಕರೂಪದ ನಾಗರಿಕ ಸಂಹಿತೆ ಸೋಮವಾರ ದಿಂದ ಉತ್ತರಾಖಂಡ ರಾಜ್ಯದಲ್ಲಿ ಅಧಿಕೃತವಾಗಿ ಜಾರಿಗೆ ಬಂದಿದೆ. ಈ ಸಂಹಿತೆಯಿಂದ ಬಹು ಪತ್ನಿತ್ವ ನಿಷೇಧವಾಗಲಿದ್ದು, ಆಸ್ತಿಯಲ್ಲಿ ಹೆಣ್ಣುಮಕ್ಕಳಿಗೆ ಸಮಾನ ಪಾಲು ಸಿಗಲಿದೆ.

ಈ ಮೂಲಕ ಸ್ವಾತಂತ್ರ್ಯಾ ನಂತರದಲ್ಲಿ ದೇಶದಲ್ಲೇ ಮೊದಲ‌ ಬಾರಿಗೆ ಏಕರೂಪದ ನಾಗರಿಕ ಸಂಹಿತೆಯನ್ನು ಜಾರಿಗೆ ತಂದ ಮೊದಲ ರಾಜ್ಯವಾಗಿ ಹೊರ ಹೊಮ್ಮಿದೆ. ಪೋರ್ಚುಗೀಸರ ಆಡಳಿತಾವಧಿಯಿಂದಲೇ ಗೋವಾದಲ್ಲಿ ಇದೇ ರೀತಿಯ ಸಮಾನ ನಾಗರಿಕ ಕಾನೂನು ಜಾರಿಯಲ್ಲಿದೆ.

ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ತಮ್ಮ ಅಧಿಕೃತ ಕಚೇರಿಯಲ್ಲಿ ಕಾಯ್ದೆಯ ಅನುಷ್ಠಾನಕ್ಕೆ ಸಂಬಂಧಿಸಿದ ಅಧಿಸೂಚನೆ ಬಿಡುಗಡೆ ಮಾಡಿ ಹಾಗೂ ಮದುವೆ, ಲಿವ್ ಇನ್‌ರಿಲೇಷನ್‌ಶಿಪ್, ವಿಚ್ಛೇದನಕ್ಕೆ ಆನ್‌ಲೈನ್ ನೋಂದಣಿ ಕಡ್ಡಾಯ ಮಾಡುವ ಪೋರ್ಟಲ್ ಗೆ ಚಾಲನೆ ನೀಡಿದರು

 

Related Articles

error: Content is protected !!